ದಾವಣಗೆರೆ:ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಮಾರ್ಚ್‌ನಲ್ಲಿ ಸಂಪುಟ ವಿಸ್ತರಣೆ ಬದಲು‌ ಈಗಲೇ ಆಗಲಿ. ಅಗತ್ಯ ಬಿದ್ದರೆ ನಾನು ದೆಹಲಿಗೂ ಹೋಗುವೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನ ಆಗಲು ನಾನು ಮತ್ತು ಯತ್ನಾಳ್ ಎಷ್ಟು ಪ್ರಯತ್ನ ಮಾಡಿದ್ದೇವೆ. ಕೆಲ ಸಚಿವರು ಶಾಸಕರ ಫೋನ್​ ಅನ್ನೇ ರಿಸೀವ್ ಮಾಡಲ್ಲ. ಶಾಸಕರು ಮನವಿ ಪತ್ರ ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಮನವಿಗೆ ಸಚಿವರ ಆಪ್ತ ಸಹಾಯಕರೇ ಶರಾ ಬರೆಯುತ್ತಾರೆ. ಇದು ನಮಗೆ ಬೇಜಾರು ಹಾಗೂ ಅವಮಾನ ಆಗುವಂಥದ್ದು. ಇಂತಹ ಸಚಿವರು ಬೇಕಾ? ಎಂದು ಕೆಲ ಸಚಿವರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದರು.
4 ಸಚಿವ ಸ್ಥಾನ ಖಾಲಿ ಇದೆ. ನಿರಂತರವಾಗಿ ಸಚಿವರಾದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾರ್ಚ್‌ನಲ್ಲಿ ಸಂಪುಟ ವಿಸ್ತರಣೆ ಬದಲು‌ ಈಗಲೇ ಆಗಲಿ. ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುವೆವು. ಈ ಕುರಿತು ನಾನು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದೇವೆ. ಯತ್ನಾಳ್ ಮತ್ತು ನಾನು ಪರಸ್ಪರ ವಾಗ್ದಾಳಿ ಮಾಡಿದ್ದೇವೆ. ಮತ್ತೆ ಬಿಜೆಪಿ ಸರ್ಕಾರ ಬರಬೇಕು. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಕಾರಣಕ್ಕೆ ಒಂದಾಗಿದ್ದೇವೆ. ಸಚಿವ ಸ್ಥಾನ ಇರೋರಿಗೆ ಹೆಚ್ಚುವರಿ ಸಚಿವ ಸ್ಥಾನ‌ ಕೊಟ್ಟಿದ್ದಾರೆ. ಸಚಿವ ಸ್ಥಾನ ನಮಗೂ ಕೊಡಲಿ. ಇದು ಚುನಾವಣೆ ವರ್ಷ. ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೆ ಉಪಯೋಗವಿಲ್ಲ. ಕೊಡುವುದಿದ್ದರೆ ಬೇಗ ಕೊಡಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ಸಿದ್ಧಗಂಗಾ ಮಠದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ: ಭಯದ ವಾತಾವರಣ ಸೃಷ್ಟಿ

10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

Sign in to your account
Please enter an answer in digits:1 + three =
Remember me
