ವಿಜಯನಗರ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದ್ದು, ಈಗಾಗಲೇ ಮೂರು ಪಕ್ಷಗಳೂ ಆ್ಯಕ್ಟೀವ್​ ಆಗಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಇಂದಿನಿಂದ 2 ದಿನ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಶನಿವಾರ ಅದ್ದೂರಿ ಚಾಲನೆ ಸಿಕ್ಕಿದೆ.
ಉಸ್ತುವಾರಿ ಅರುಣ್​ಸಿಂಗ್​, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆನಂದ್​ಸಿಂಗ್​​ ನೇತೃತ್ವದ ತಂಡ ಭರ್ಜರಿ ಸ್ವಾಗತ ಕೋರಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ವಿಜಯನಗರ ಭೂಮಿಯಲ್ಲಿ ವಿಜಯಪತಾಕೆ ಹಾರಿಸೋಣ. ಇಲ್ಲಿಂದಲೇ ನಾವು ವಿಜಯಪತಾಕೆ ಹಾರಿಸುವ ಕೆಲಸ ಮಾಡೋಣ. ಒಗ್ಗಟ್ಟಾಗಿ ಮುಂದೆ ಹೋಗೋಣ ಎಂದು ಕರೆ ನೀಡಿದರು. ಈ ಕಾರ್ಯಕಾರಣಿ ಹಲವಾರು ಮಹತ್ವಗಳಿಂದ ಕೂಡಿದೆ. ವಿಜಯನಗರ ಸಾಮ್ರಾಜ್ಯ ಭಾರತದ ಸಮಾಜ ರಕ್ಷಣೆ ಮಾಡಿದ ಸಾಮ್ರಾಜ್ಯ. ಇದು ಪರಾಕ್ರಮಕ್ಕೆ ಹೆಸರಾದ ಭೂಮಿ. ಬಹಳ ಗಟ್ಟಿ ಇರುವ ಭೂಮಿ. ಈ ಭೂಮಿಯಲ್ಲಿ ಮಾಡಿದ ಸಂಕಲ್ಪ ಶಾಶ್ವತವಾಗಿ ಉಳಿಯುತ್ತೆ ಎಂದರು.
ಜನರ ಅಗತ್ಯಗಳನ್ನ ಅರಿತು ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ. ಪ್ರಪಂಚದಲ್ಲಿಯೇ ನರೇಂದ್ರ ಮೋದಿ ನಾಯಕತ್ವ ಗಮನ ಸೆಳೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ನಿವಾಸ್ ಯೋಜನೆ, ಮನೆ ಮನೆಗೂ ನೀರು ಕೊಡುವ ಯೋಜನೆಯನ್ನೂ ಕೊಟ್ಟಿದೆ. ಕರ್ನಾಟಕದ ಜನರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧವಿದೆ. ಪ್ರತಿ ದಿನ ಯಡಿಯೂರಪ್ಪ ಸರಣಿ ಸಭೆ ಮಾಡಿ ಕೋವಿಡ್ ಸಂಕಷ್ಟ ಕಾಲವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅತಿಹೆಚ್ಚು ವ್ಯಾಕ್ಸಿನ್ ನಾವು ಕೊಟ್ಟಿದ್ದೇವೆ. ಎಂಟು ಕೋಟಿ ವ್ಯಾಕ್ಸಿನ್ ಹಾಕಿದ್ದೇವೆ. ಆರು ತಿಂಗಳು ಆರ್ಥಿಕ ಕುಂಠಿತ ಇತ್ತು. ಈಗ ನಾವು ಗುರಿ ಮೀರಿ ಆದಾಯ ಹೆಚ್ಚಿಸಿಕೊಂಡಿದ್ದೇವೆ. ಕೇಂದ್ರದಿಂದ ನಮಗೆ ಹೆಚ್ಚಿನ ಬಜೆಟ್ ಬಂದಿದೆ ಎನ್ನುತ್ತಾ ಭಾಷಣದುದ್ದಕ್ಕೂ ನರೇಂದ್ರ ಮತ್ತು ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದರು.

ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಮತ್ತು ಆಂಜನೇಯನ ಆಶೀರ್ವಾದ ಪಡೆಯಲು‌ ಇಲ್ಲಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದೇವೆ. ಕರ್ನಾಟಕದ ಅಹಂಕಾರಿ ಲಂಕೇಶರಿಗೆ ಬೆಂಕಿ ಹಾಕಲು ಇಲ್ಲಿಂದ ವಿಜಯ ಯಾತ್ರೆ ಆರಂಭವಅಗಿದೆ. ನರೇಂದ್ರ ಮೋದಿ ಅವರಿಂದ ಭಾರತ ಮತ್ತು ಜಗತ್ತಿನಲ್ಲಿ ಬದಲಾವಣೆ ಆಗ್ತಿದೆ. 7 ವರ್ಷದ ಹಿಂದೆ ಬೇರೆ ಪಕ್ಷಗಳ ಎಲ್ಲ ಯೋಜನೆಯಲ್ಲೂ ಭ್ರಷ್ಟಾಚಾರ ಇತ್ತು. ಮೋದಿ ಅವರು ಬಂದ ಮೇಲೆ ಒಂದೇ ಒಂದು ಯೋಜನೆಯಲ್ಲಿ ಭ್ರಷ್ಟಾಚಾರ ಇಲ್ಲ ಎಂದರು.
ಬಿ.ಎಸ್​.ಯಡಿಯೂರಪ್ಪ, ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಆನಂದ್ ಸಿಂಗ್, ಅರುಣ್ ಸಿಂಗ್, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ, ಡಿ.ಕೆ. ಅರುಣ, ಬಿ.ಎಲ್. ಸಂತೋಷ್, ಸಂಪುಟ ಸಚಿವರು, ಶಾಸಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
