ಹುಬ್ಬಳ್ಳಿ:ಮಾ.10ರಂದು ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗಂಡನಿಂದಲೇ ಹಲ್ಲೇಗಿಡಾದ ಪತ್ನಿ ಅಪೂರ್ವ, ಆಸ್ಪತ್ರೆಯಲ್ಲೇ ತನ್ನ ನೋವಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ ಸಂಭವಿಸಿದ ಬೆನ್ನಲ್ಲೇ ಲವ್​ ಜಿಹಾದ್​ ಮುಖವಾಡ ಬಯಲಾಗಿದೆ.
ನಾನು ಹುಬ್ಬಳ್ಳಿಯಲ್ಲಿ ಡಿಗ್ರಿ ವ್ಯಾಸಂಗ ಮಾಡುವ ಸಂದರ್ಭ ಆಟೋ ಓಡಿಸಿಕೊಂಡಿದ್ದ ಇಜಾಜ್​ ಶಿರೂರು ಎಂಬಾತ ನನ್ನ ಹಿಂದೆ ಬಿದ್ದು, ಪುಸಲಾಯಿಸಿ, ಬೆದರಿಸಿ ನನ್ನನ್ನು ಮದುವೆಯಾದ. ನಂತರ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ. ಲವ್​ ಜಿಹಾದ್​ ಮೂಲಕ ನನ್ನ ಜೀವನ ಹಾಳು ಮಾಡಿದ. ಇದನ್ನು ಲವ್​ ಜಿಹಾದ್​ ಎಂದೇ ಹೇಳುತ್ತೇನೆ. ಯಾಕೆಂದರೆ ನನಗೆ ಮತಾಂತರ ಆಗಲು ಇಷ್ಟ ಇರಲಿಲ್ಲ. ಅಂತರ್ಜಾತಿ ವಿವಾಹ ಹೇಗೋ ಸಹಿಸಿಕೊಳ್ಳಬಹುದಿತ್ತು. ಅದಕ್ಕೆ ಆತ ಒಪ್ಪಲಿಲ್ಲ. ನನಗೆ ಕೆಟ್ಟ ವಿಡಿಯೋ, ಫೋಟೋ ತೋರಿಸಿ ಬೆದರಿಸಿದ್ದ. ಬಲವಂತವಾಗಿ ಮತಾಂತರಗೊಳಿಸಿ ವಿವಾಹವಾದ. ಅರ್ಫಾನಾ ಬಾನು ಎಂದೂ ಹೆಸರಿಟ್ಟ. ಆತನಿಗೆ ಮೊದಲೇ ಬೇರೊಬ್ಬರ ಜತೆ ಮದುವೆ ಆಗಿತ್ತು. ಈ ವಿಚಾರವನ್ನ ನನ್ನಿಂದ ಬಚ್ಚಿಟ್ಟು ಮದ್ವೆಯಾಗಿದ್ದ. ಆಮೇಲೆ ನನಗೆ ಎಲ್ಲವೂ ಗೊತ್ತಾಯಿತು. ಯಾವ ಹಿಂದೂ ಹುಡುಗಿಯರೂ ದಯವಿಟ್ಟು ನಿಮ್ಮ ಪಾಲಕರನ್ನು ಬಿಟ್ಟು ಹೋಗಬೇಡಿ. ಯಾರಾದರೂ ಸ್ವಲ್ಪ ತೊಂದರೆ ಮಾಡಿದರೂ ನಿಮ್ಮ ಪಾಲಕರಿಗೆ ಹೇಳಿ. ಇಲ್ಲದಿದ್ದರೆ ನನಗೆ ಆದ ಪರಿಸ್ಥಿತಿ ನಿಮಗೂ ಆಗುತ್ತದೆ ಎಂದು ಹಿಂದು ಯುವತಿಯರಿಗೆ ಅಪೂರ್ವ ಸಲಹೆ ನೀಡುತ್ತಲೇ ಬಿಕ್ಕಿಬಿಕ್ಕಿ ಅತ್ತರು.
27 ಸಲ ಮಚ್ಚಿನಿಂದ ಹಲ್ಲೆ:ಇಜಾಜ್​ ಮೊದಲೇ ಮದುವೆಯಾಗಿದ್ದ ಎಂಬುದು ಗೊತ್ತಾದ ಬಳಿಕ ನಾನು ಆತನಿಂದ ದೂರ ಆಗಲು ನಿರ್ಧರಿಸಿದ್ದೆ. ಇದರಿಂದ ಆಕ್ರೋಶಗೊಂಡ ಆತ ಮಾ.10ರಂದು ಮಚ್ಚಿನಿಂದ 27 ಬಾರಿ ಹಲ್ಲೆ ಮಾಡಿದ್ದಾನೆ. ಎರಡು ವರ್ಷದ ಮಗು ನನ್ನನ್ನು ಗುರುತಿಸುತ್ತಿಲ್ಲ. ಸರ್ಕಾರ ನನಗೆ ನ್ಯಾಯ ಕೊಡಿಸಬೇಕು ಎಂದು ಅಪೂರ್ವ ಕಣ್ಣೀರಿಟ್ಟರು.
ನಾಲ್ಕೈದು ತಿಂಗಳಿಂದ ಗಂಡನಿಂದ ದೂರವಾಗಿದ್ದ ಅಪೂರ್ವ, ಮಾ.10ರಂದು ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್​ನಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದು ಬಂದ ಇಜಾಜ್​, ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು. ಗಂಭೀರ ಗಾಯಗೊಂಡಿರುವ ಅಪೂರ್ವ ಸ್ಥಿತಿ ಚಿಂತಾಜನಕವಾಗಿದೆ.
ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

8 ತಿಂಗಳ ಮಗು ಇದ್ದರೂ ಕರಗದ ತಾಯಿ ಮನಸ್ಸು… ಸಾವಿನ ಮನೆಯ ಕದತಟ್ಟಿದ ಪಿಡಿಒ ಪತ್ನಿ

ಹಿಜಾಬ್​ ಬ್ಯಾನ್​: ಸಿಜೆ ಅವರು ಓದಿದ 129 ಪುಟಗಳ ತೀರ್ಪಿನ ಪ್ರಮುಖ ಅಂಶ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
