ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒಡೆತನದ ‘ನ್ಯಾಷನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್​ ಇಡೋದಾಗಿ ‘ಹುಚ್ಚ ಸ್ವಾಮಿ ವೆಂಕಟ್’​ ಹೆಸರಿನಲ್ಲಿ ಬೆದರಿಕೆ ಮೇಲ್​ ಬಂದ ಪ್ರಕರಣ ಸಂಬಂಧ ನಟ ಹುಚ್ಚ ವೆಂಕಟ್ ಆಕ್ರೋಶ ಹೊರಹಾಕಿದ್ದಾರೆ.
‘ನನ್ ಹೆಸ್ರನ್ನ ಯಾರೋ ಮಿಸ್​ಯೂಸ್ ಮಾಡಿದ್ದಾರೆ. ಯಾರೂ ನನ್ನ ಹೆಸರನ್ನು ಮಿಸ್​ಯೂಸ್​ ಮಾಡ್ಬೇಡಿ. ನನ್ನ ಹೆಸ್ರಲ್ಲಿ ಮೇಲ್ ಕಳಿಸೋದು ಯಾವ್ದೂ ಮಾಡ್ಬೇಡಿ’ ಎಂದು ಹುಚ್ಚ ವೆಂಕಟ್​ ಪ್ರತಿಕ್ರಿಯಿಸಿದ್ದಾರೆ.
ಆರ್​ಆರ್ ನಗರದ ನ್ಯಾಷನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್​ಗೆ ಬಾಂಬ್​ ಇಡುವುದಾಗಿ ಭಾನುವಾರ ಸಂಜೆ 3ನೇ ಯೂನಿಟ್​ಗೆ ಕಿಡಿಗೇಡಿಗಳು ಬೆದರಿಕೆ ಮೇಲ್​ ಕಳುಹಿಸಿದ್ದರು. ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್​ ನೋಡಿ ಗಾಬರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್​ಆರ್​ ನಗರ ಠಾಣೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ.
[email protected]ಅನ್ನೋ ಮೇಲ್ ಐಡಿಯಿಂದ ಭಾನುವಾರ ಸಂಜೆ 6.30ಕ್ಕೆ ಸ್ಕೂಲ್​ಗೆ ಬೆದರಿಕೆ ಮೇಲ್​ ಬಂದಿದೆ. ‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್​, ಬಾಂಬ್ ಟೆರರಿಸ್ಟ್’ ಎಂದು ಮೇಲ್​ನಲ್ಲಿ​ ಬರೆಯಲಾಗಿದೆ.
ಬೆಂಗಳೂರಲ್ಲಿ ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ! ಆತಂಕದಲ್ಲಿ ಪೋಷಕರು, ಸಾವಿರಾರು ಮಕ್ಕಳ ಸ್ಥಳಾಂತರ

ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

‘ಹುಚ್ಚ ವೆಂಕಟ್’​ ಹೆಸರಲ್ಲಿ ಡಿಕೆಶಿ ಒಡೆತನದ ಶಾಲೆಗೆ ಬಾಂಬ್​ ಬೆದರಿಕೆ! ಪಾಲಕರಿಗೆ ಧೈರ್ಯ ತುಂಬಿದ ಅಪ್ಪ-ಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 7 =
Remember me
