ಧಾರವಾಡ:ಪತ್ನಿಯನ್ನು ಕೊಂದು ಬಳಿಕ ಗಂಡನೂ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಧಾರವಾಡ ಹೊರವಲಯದ ಗಣೇಶನಗರದ ಗಳವಿ ದಡ್ಡಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮನೀಷಾ ಕೊಲೆಯಾದ ಪತ್ನಿ. ಈಕೆಯ ಪತಿ ಚಟ್ಟು ಗದಗವಾಲೆ ಆತ್ಮಹತ್ಯೆ ಮಾಡಿಕೊಂಡವ. ಇವರಿಬ್ಬರೂ ಕೆಲಸಕ್ಕೆಂದು ಗೋವಾಗೆ ಹೋಗಿದ್ದರು. ನಾಲ್ಕು ದಿನದ ಹಿಂದಷ್ಟೇ ಪತಿ-ಪತ್ನಿ ಇಬ್ಬರೂ ಗೋವಾದಿಂದ ವಾಪಸ್​ ಊರಿಗೆ ಬಂದಿದ್ದರು.
ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮನಿಷಾ ಮತ್ತು ಚಟ್ಟು ಗದಗವಾಲೆ ನಡುವೆ ಜಗಳ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅಂದು ರಾತ್ರಿಯೇ ಪತ್ನಿಯನ್ನು ಕೊಲೆ ಮಾಡಿ,‌ ಬಳಿಕ ಬಳಿಕ ತಾನೂ ಸಾವಿನ ಮನೆಯ ಕದತಟ್ಟಿದ್ದಾನೆ. ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ಏನೆಂದು ತನಿಖೆ ಬಳಿಕ ಗೊತ್ತಾಗಲಿದೆ.
ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

ಬೇಲೂರಿನಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ದಾಳಿ: ಇಬ್ಬರು ಕೂಲಿ ಕಾರ್ಮಿಕರ ಸಾವು

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − four =
Remember me
