ಚನ್ನರಾಯಪಟ್ಟಣ:ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್​ ಬಳಿ ಕಳೆದ ವಾರ ನಡೆದಿದ್ದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿರುವ ನುಗ್ಗೇಹಳ್ಳಿ ಪೊಲೀಸರು ಆತನ ಪತ್ನಿ ಹಾಗೂ ಪ್ರಿಯಕರನನ್ನು ಬುಧವಾರ ಬಂಧಿಸಿದ್ದಾರೆ.
ಜ.31ರಂದು ಸಂಜೆ ಶಾಲೆಯಿಂದ ಮಗನನ್ನು ಕರೆತರಲು ಬೈಕ್​ನಲ್ಲಿ ತೆರಳಿದ್ದ ಆನಂದ್​ಕುಮಾರ್​ (42) ಎಂಬಾತನನ್ನು ಕಾವಲು ಹೊಸೂರು ಗೇಟ್​ ಬಳಿ ಅಡ್ಡಗಟ್ಟಿದ ಅಪರಿಚಿತರಿಬ್ಬರು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ಎಸ್​ಪಿ.ಆರ್​.ಶ್ರೀನಿವಾಸ್​ಗೌಡ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಮೃತನ ಪತ್ನಿ ಸುನೀತಾಳ ವಿಚಾರಣೆಗೆ ಮುಂದಾಗುತ್ತಿದ್ದಂತೆ ಭಯಾನಕ ರಹಸ್ಯ ಬಯಲಾಗಿದೆ.
ನುಗ್ಗೇಹಳ್ಳಿಯಲ್ಲಿ ಇದೇ ಗ್ರಾಮದ ನವೀನ್​ ಎಂಬಾತ ಯೋಗ ಕ್ಲಾಸ್ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಯೋಗ ಕ್ಲಾಸ್​ಗೆ ಸುನೀತಾ ಸೇರಿದ್ದಳು. ನವೀನ್​ ಮತ್ತು ಸುನೀತಾ ನಡುವಿನ ಆರಂಭದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು. ಅಕ್ರಮ ಸಂಬಂಧವೂ ಬೆಳೆದಿತ್ತು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಡ್ಡಿಯಾಗುತ್ತಾನೆ ಎಂದು ಆತನ ಕೊಲೆಗೆ ಪತ್ನಿಯೇ ಬೆಂಗಳೂರಿನ ವ್ಯಕ್ತಿಗಳಿಬ್ಬರಿಗೆ ಸುಪಾರಿ ನೀಡಿದ್ದಳು. ಇದಕ್ಕೆ ನವೀನ್​ ಸಹ ಕೈ ಜೋಡಿಸಿದ್ದ. ಆನಂದ್​ ಓಡಾಡುವ ಮಾರ್ಗವನ್ನು ಕೊಲೆಗಡುಕರಿಗೆ ಮಾಹಿತಿ ನೀಡಿದ್ದರು. ಅದರಂತೆ ಜ.31ರಂದು ಆನಂದ್​ನನ್ನು ಕೊಲೆ ಮಾಡಲಾಗಿತ್ತು.
2014ರಲ್ಲಿ ಹಿರೀಸಾವೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇದೇ ಸುನೀತಾಳನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದಳು. ಇದೀಗ ಗಂಡನ ಕೊಲೆ ಕೇಸ್​ನಲ್ಲಿ ಪ್ರಿಯಕರನ ಜತೆ ಸುನೀತಾ ಜೈಲು ಸೇರಿದ್ದಾಳೆ. ಸುಪಾರಿ ಪಡೆದು ಹತ್ಯೆ ಮಾಡಿದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಕೋಲಾರದಲ್ಲಿ ಯುವತಿಯರ ಜತೆ ಗ್ರಾಪಂ ಅಧ್ಯಕ್ಷನ ನಂಗಾನಾಚ್‌ ಡಾನ್ಸ್! ವಿಡಿಯೋ ವೈರಲ್​

ಮಂಡ್ಯದಲ್ಲಿ ಐವರ ಕೊಲೆ: ನಮ್ಮಿಬ್ಬರಿಗೂ ಆಫೇರ್ ಇತ್ತು, ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ರು… ಸ್ಫೋಟಕ ರಹಸ್ಯ ಬಾಯ್ಬಿಟ್ಟ ಮೃತಳ ಗಂಡ

ಲವರ್​ ಜತೆ ಮದ್ವೆ ಆಗ್ಬೇಕು, 18 ವರ್ಷ ಆಗುವರೆಗೂ ನನ್ನನ್ನು ಬಾಲಮಂದಿರದಲ್ಲಿಡಿ… ಠಾಣೆ ಮೆಟ್ಟಿಲೇರಿದ ಪಿಯು ವಿದ್ಯಾರ್ಥಿನಿ

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
