ಹಾಸನ:8 ವರ್ಷದ ಹಿಂದೆ ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದರು. ಸುಖ ಸಂಸಾರ ನನಡೆಸಬೇಕಿದ್ದವರ ಬಾಳಿಕೆ ಅಕ್ರಮ ಸಂಬಂಧ ಕೊಳ್ಳಿ ಇಟ್ಟಿದೆ. ಗಂಡ ಮಸಣ ಸೇರಿದರೆ, ಇತ್ತ ಪತ್ನಿ ಜೈಲು ಸೇರಿದ್ದಾಳೆ.
ಇಂತಹ ವಿಚಿತ್ರ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ರೇವಣ್ಣ ಕೊಲೆಯಾಗಿದ್ದಾನೆ. ಈತನ ಪತ್ನಿ ಸುಖನ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಪರಸ್ಪರ ಪ್ರೀತಿಸಿ 8 ವರ್ಷದ ಹಿಂದೆ ಮದ್ವೆಯಾಗಿದ್ದರು. ಪತ್ನಿ ಸುಖನ್ಯಾ ಇದ್ದರೂ ಗಂಡನಿಗೆ ಬೇರೊಬ್ಬಾಕೆ ಜತೆ ಅಕ್ರಮ ಸಂಬಂಧ ಇತ್ತು. ಇದೇ ಕಾರಣಕ್ಕೆ ಕೆಲ ವರ್ಷ ಪತ್ನಿಯನ್ನ ಬಿಟ್ಟು ರೇವಣ್ಣ ಮನೆಬಿಟ್ಟು ಹೋಗಿದ್ದ. ಈ ವೇಳೆ ಪತ್ನಿ ಪರಪುರುಷನ ಜತೆ ಅಕ್ರಮ ಸಂಬಂಧ ಬೆಳೆದಿತ್ತು… ಇತ್ತೀಚಿಗೆ ಗಂಡ ವಾಪಸ್​ ಮನೆಗೆ ಬಂದ ಬೆನ್ನಲ್ಲೇ ದುರಂತ ಸಂಭವಿಸಿದೆ.
ಫೆ.27ರ ರಾತ್ರಿ ಕುಡಿದು ಮನೆಗೆ ಬಂದ ರೇವಣ್ಣ, ಪತ್ನಿ ಜತೆ ಜಗಳ ತೆಗೆದಿದ್ದ. ಈ ವೇಳೆ ಸುಕನ್ಯ ತನ್ನ ಗಂಡನ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಳು. ಆದರೆ ಬೆಳಗ್ಗೆ ಅತಿಯಾದ ಕುಡಿತ ಮತ್ತು ಹೃದಯಾಘಾತದಿಂದ ಗಂಡ ಸತ್ತಿದ್ದಾನೆ ಎಂದು ನಾಟಕವಾಡಿದ್ದಳು. ಈ ಪ್ರಕರಣ ಬೇಧಿಸಿದ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಈ ದುರಂತಕ್ಕೆ ಕಾರಣ ಇಬ್ಬರಿಗೂ ಇದ್ದ ಅಕ್ರಮ ಸಂಬಂಧ ಕಾರಣ ಎಂಬುದೂ ಗೊತ್ತಾಗಿದೆ.(ದಿಗ್ವಿಜಯ ನ್ಯೂಸ್, ಹಾಸನ)
ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
