ಶಿವಮೊಗ್ಗ:ಮುನಿಸಿಕೊಂಡು ತವರು ಮನೆ ಸೇರಿದ್ದ ಪತ್ನಿಯನ್ನ ವಾಪಸ್​ ಬರುವಂತೆ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಮೆಸೇಜ್ ಮೂಲಕ ಕ್ಷಮೆ ಕೇಳಿದ್ದ. ಆಕೆ ಇರುವಲ್ಲಿಗೇ ಹೋಗಿ ತಪ್ಪಾಯ್ತಮ್ಮಾ.. ದಮ್ಮಯ್ಯ ಬಾರಮ್ಮ… ಮನೆಗೆ ಹೋಗೋಣ ಎಂದು ಅಂಗಲಾಚಿದ್ದ. ಗಂಡನ ಮಾತಿಗೆ ಕರಗಿದ ಪತ್ನಿ ಖುಷಿಯಿಂದಲೇ ವಾಪಸ್​ ಮನೆಗೆ ಬಂದಿದ್ದಳು. ಇದಾದ ಮರುದಿನ ಗಂಡನೇ ನಾಪತ್ತೆ ಆಗಿದ್ದಾನೆ!
ಇಂತಹ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ಸಂಭವಿಸಿದೆ. ಕಳೆದೊಂದು ವಾರದಿಂದ ಗಂಡ ಸದಾ ಯುವತಿಯೊಬ್ಬಳ ಜತೆ ಮಾತು-ಚಾಟಿಂಗ್​ನಲ್ಲೇ ಬಿಜಿ ಇರುತ್ತಿದ್ದ. ಇದನ್ನು ಗಮನಿಸಿದ್ದ ಪತ್ನಿ, ಗಂಡನಿಗೆ ಪರಸ್ತ್ರೀ ಜತೆ ಏನೋ ಸಂಬಂಧ ಇರಬಹುದು ಎಂಬ ಶಂಕಿಸಿ ಆತನ ಮೇಲೆ ಮುನಿಸಿಕೊಂಡು ಹಾವೇರಿ ತಾಲೂಕಿನ ತವರು ಮನೆ ಸೇರಿದ್ದಳು. ಬಳಿಕ ಗಂಡನೇ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಕ್ಷಮೆ ಕೇಳಿ ಪತ್ನಿಗೆ ಮೆಸೇಜ್ ಕಳುಹಿಸಿದ್ದ. ಕಡೆಗೆ ಮಾವನ ಮನೆಗೆ ಹೋದವ, ಪತ್ನಿಯನ್ನು ರಮಿಸಿ ಜೂ.16ರಂದು ಸೊರಬ ತಾಲೂಕಿನಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.
ಪತ್ನಿ ಬಂದ ಮರುದಿನ ಅಂದರೆ, ಜೂ.17ರಂದು ಕುಬಟೂರಿಗೆ ಹೋಗಿ ಕೆಲಸದ ಬಾಕಿ ಹಣ ತರುವುದಾಗಿ ಹೇಳಿ ಹೋದ ಗಂಡ ಇನ್ನೂ ಮನೆಗೆ ಬಂದಿಲ್ಲ. ಪತಿದೇವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಯಾವ ಯಾವ ಹುಡುಗಿಯರೊಂದಿಗೆ ಸಂಪರ್ಕ ಇತ್ತು ಎಂದು ಚೆಕ್ ಮಾಡುವ ಪರಿಸ್ಥಿತಿ ಪತ್ನಿಗೆ ಬಂದಿದೆ.
ನಟ ದಿಗಂತ್​ರ ಈ ಕ್ಷಣದ ಆರೋಗ್ಯ ಸ್ಥಿತಿ ಹೀಗಿದೆ…

ಮಂಡ್ಯದ ಶನಿದೇವರ ಬಸಪ್ಪ ಇನ್ನಿಲ್ಲ: 18 ವರ್ಷದ ಹಿಂದೆ ಭಕ್ತರೊಬ್ಬರ ಕಾಣಿಕೆ ರೂಪದಲ್ಲಿ ಬಂದಿದ್ದ ಬಸಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
