ಕೆಜಿಎಫ್​:2019ರ ಫೆಬ್ರವರಿ 15ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಗೃಹಿಣಿಯೊಬ್ಬಳು ಸತ್ತ ಪ್ರಕರಣ ಸಂಬಂಧ ಮೃತಳ ಗಂಡನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕೆಜಿಎಫ್​ ರಾರ್ಬಟ್​ಸನ್​ಪೇಟೆ ವ್ಯಾಪ್ತಿಯ ಉರಿಗಾಂಪೇಟೆಯ ವಿನಾಯಕ ದೇವಾಲಯ ಬೀದಿಯ ಎಂ.ಲೋಗನಾಥನದದ ಎಂಬಾತ 2017ರಲ್ಲಿ ಶೈಲಜಾ ಎಂಬುವರನ್ನ ಮದುವೆ ಆಗಿದ್ದ. ಮದುವೆಯಾದಾಗಿನಿಂದ ಶೈಲಜಾಗೆ ಗಂಡ ಮತ್ತು ಇವನ ತಾಯಿ ಸರಳಾ ಕಿರುಕುಳ ಕೊಡುತ್ತಿದ್ದರು. ಇದನ್ನು ಸಹಿಸಲಾಗದೆ ಶೈಲಜಾ 2019ರ ಫೆಬ್ರವರಿ 15ರ ರಾತ್ರಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಸಂಬಂಧ ಲೋಗನಾಥನ್​ ಮತ್ತು ಸರಳಾ ವಿರುದ್ಧ ರಾರ್ಬಟ್​ಸನ್​ಪೇಟೆಯ ಪಿಎಸ್​ಐ ಆರ್​.ಹರೀಶ್​ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ಬಂದ ಪಿಎಸ್​ಐ ಮಧುಕರ್​ ತನಿಖೆ ರ್ಪೂಣಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಜೂ.21ರಂದು ಈ ಪ್ರಕರಣದ ತೀರ್ಪು ನೀಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಲೋಗನಾಥನ್​ಗೆ 6 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರ ಭರಕುಲ್ಲಾ ಹುಸೇನ್​ ವಾದ ಮಂಡಿಸಿದರು.
ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

https://www.vijayavani.net/a-illicit-relationship-poisoning-by-lovers/
https://www.vijayavani.net/a-illicit-relationship-poisoning-by-lovers/
ಬಿಸಿ ಸಾಂಬಾರ್​ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 11 =
Remember me
