ಶಿವಮೊಗ್ಗ:ಮದುವೆಯಾಗಿ ಪತ್ನಿ-ಮಗು ಇದ್ದರೂ ಇಲ್ಲೊಬ್ಬ ಭೂಪ, ಪರಸಂಗಕ್ಕೆ ಆಸೆ ಪಟ್ಟು ಪಕ್ಕದ ಮನೆಯ ಬಾಲಕಿಗೆ ಬಾಳು ನೀಡುವುದಾಗಿ ಪುಸಲಾಯಿಸುವಾಗ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಸಹ್ಯವಾಗಿ ನಡೆದುಕೊಂಡ ಗಂಡನಿಗೆ ಪತ್ನಿಯೇ ಛೀಮಾರಿ ಹಾಕಿದ್ದಾಳೆ.
ಇಂತಹ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ವ್ಯಕ್ತಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಆದರೂ ನೆರೆಮನೆಯ ಅಪ್ರಾಪ್ತೆ ಮೇಲೆ ಕಣ್ಣು ಹಾಕಿ ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತ ಮಾಡುತ್ತಿದ್ದ.
ಆ.3ರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದವನೇ ಹೊರಗಡೆ ಸುತ್ತಾಡಿಕೊಂಡು ಬರೋಣವೆಂದು ಬಾಲಕಿಯನ್ನು ಕರೆದೊಯ್ದಿದ್ದ. ಎಲ್ಲಿಗೆ ಎಂದು ಪ್ರಶ್ನಿಸಿದ್ದಕ್ಕೆ ಮದುವೆಯಾಗೋಣ ಎಂದಿದ್ದ. ಮದುವೆಯಾಗಲು ಅಪ್ರಾಪ್ತೆ ನಿರಾಕರಿಸಿ ಕೂಗಿಕೊಂಡಿದ್ದು ಸುತ್ತಮುತ್ತಲ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ, ಸಂಬಂಧಿಕರು ಮತ್ತು ಆತನ ಪತ್ನಿಯೂ ಸ್ಥಳಕ್ಕೆ ಬಂದಿದ್ದರು. ಬಳಿಕ ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಗೆ ಆತನ ಪತ್ನಿ ಸೇರಿದಂತೆ ಅಲ್ಲಿ ನೆರೆದಿದ್ದವರು ಛೀಮಾರಿ ಹಾಕಿದ್ದ ಆರೆ. ಘಟನೆ ಬಗ್ಗೆ ತೀರ್ಥಹಳ್ಳಿ ಠಾಣೆಗೆ ಬಾಲಕಿ ದೂರು ನೀಡಿದ್ದಾಳೆ.
ಶಿವಮೊಗ್ಗದಲ್ಲಿ ಅಪ್ರಾಪ್ತೆಗೆ ತಾಳಿಭಾಗ್ಯ ನೀಡಲು ಯತ್ನ: ಒಮ್ಮೆ ಬಚಾವ್​ ಆಗಿದ್ದ ಪ್ರಿಯಕರ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದ

ಶೂ ಧರಿಸಿ ಪೂಜೆ ಸಲ್ಲಿಸಿದ ಉಮೇಶ್​ ಕತ್ತಿ! ಮೈಸೂರು ದಸರಾ ಗಜಪಯಣಕ್ಕೆ ಚಾಲನೆ ನೀಡುವಾಗ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
