ಮೈಸೂರು:ಪ್ರೇಮಿಗಳ ದಿನವಾದ ಫೆಬ್ರವರಿ 14ರಂದೇ ವಿಧಾನಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದು ಯಾವ ಪಕ್ಷದ ಮೇಲೆ ಲವ್​ ಆಗುತ್ತೋ ಆ ಪಕ್ಷಕ್ಕೆ ಹೋಗುವೆ ಎಂದಿದ್ದ ಕಾಂಗ್ರೆಸ್​ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಇದೀಗ ಉಲ್ಟಾ ಹೊಡೆದಿದ್ದಾರೆ.
ಆಪ್ತರೊಂದಿಗೆ ಸಭೆ ನಡೆಸಲು ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಇಬ್ರಾಹಿಂ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸದ್ಯಕ್ಕೆ ಕಾಂಗ್ರೆಸ್​ ತೊರೆಯುವುದಿಲ್ಲ. ಅಧಿವೇಶನ ಮುಗಿದ ಬಳಿಕ ನಿರ್ಧರಿಸುವೆ ಎಂದರು.
ನಾಳೆ(ಫೆ.14)ಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲಿದೆ. ಇದಕ್ಕೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ ಪಡೆಯಬೇಕಾದರೆ ನನ್ನ ಮತ ನಿರ್ಣಾಯಕವಾಗಿದೆ. ಹೀಗಾಗಿ ಅಧಿವೇಶನ ಮುಗಿಯುವವರೆಗೆ ಕಾಂಗ್ರೆಸ್​ ಪಕ್ಷ ತೊರೆಯುವುದಿಲ್ಲ ಎಂದು ಇಬ್ರಾಹಿಂ ಹೇಳಿದರು.
ಈ ವೇಳೆ ನಾನು ಕಾಂಗ್ರೆಸ್​ ಪಕ್ಕೆ ರಾಜೀನಾಮೆ ಕೊಟ್ಟರೆ ಸರ್ಕಾರ ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಪಡೆಯಲಿದೆ. ಇಬ್ರಾಹಿಂ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ ಎಂದರು.
ಕಾಂಗ್ರೆಸ್​ ಹೈಕಮಾಂಡ್​ನಿಂದ ನನಗೆ ಬುಲಾವ್​ ಬಂದಿದೆ ಎಂದು ಜಮೀರ್​ ಅಹ್ಮದ್​ ಹೇಳುತ್ತಿದ್ದಾರೆ. ಬುಲಾವ್​ ಬಂದರೆ ಹೋಗಿ ಮಾತನಾಡುತ್ತೇನೆ. ಬಳಿಕ ನಮ್ಮ ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ. ಸದ್ಯಕ್ಕೆ ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರೇಮಿಗಳ ದಿನ ಕಾಂಗ್ರೆಸ್​ಗೆ ರಾಜೀನಾಮೆ ನೀಡುವೆ, ಅಂದು ಯಾವ ಪಕ್ಷದ ಮೇಲೆ ಲವ್​ ಆಗುತ್ತೋ ಆ ಪಕ್ಷಕ್ಕೆ ಹೋಗುವೆ: ಇಬ್ರಾಹಿಂ

ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ: ಇಬ್ರಾಹಿಂ ಲೇವಡಿ

ಮುಂದೊಂದು ದಿನ ಹಿಜಾಬ್​ ಧರಿಸಿದ ಹುಡುಗಿಯೇ ಭಾರತದ ಪ್ರಧಾನಿ ಆಗ್ತಾಳೆ: ಓವೈಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
