ಚಿತ್ರದುರ್ಗ:ತಾಲೂಕಿನ ಹಳವುದರ ಗ್ರಾಮದಲ್ಲಿ ಹೊಟ್ಟೆ ನೋವೆಂದು ನರಳುತ್ತಿದ್ದ ಪತ್ನಿಯನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ದುರಂತ ಅಂತ್ಯಕಂಡ ಗಂಡ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪಕ್ಕದ ಜಮೀನು ಮಾಲೀಕನೊಂದಿಗೆ ಪತ್ನಿಯ ಕಾಮದಾಟ ಬಯಲಾಗಿದೆ.
ಹೆಗ್ಗೆರೆ ಗ್ರಾಮದ ಮಟ್ಟಿ ಬಳಿಯ ಕೃಷಿಹೊಂಡದಲ್ಲಿ ಹಳವುದರ ಗ್ರಾಮದ ಮುರುಗೇಶ್ (38) ಶವ ಪತ್ತೆಯಾಗಿತ್ತು. ಮೃತನ ಜೇಬಿನಲ್ಲಿದ್ದ ಆ ಒಂದು ಪತ್ರದ ಜಾಡು ಹಿಡಿದು ಹೊರಟ ಪೊಲೀಸರು ಸ್ಫೋಟಕ ರಹಸ್ಯವನ್ನ ಬಯಲಿಗೆಳೆದಿದ್ದಾರೆ.ಇದನ್ನು ಓದಿರಿವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ
ಮುರುಗೇಶ್​ಗೆ ನೀರತಡಿ ಗ್ರಾಮದ ನಾಗಮ್ಮ ಎಂಬಾಕೆ ಜತೆ 11 ವರ್ಷದ ಹಿಂದೆ ಮದುವೆ ಆಗಿತ್ತು. ದಂಪತಿಗೆ 10 ವರ್ಷದ ಮಗನಿದ್ದಾನೆ. ಇವರಿಬ್ಬರ ಸಂಸಾರ ಚೆನ್ನಾಗಿಯೇ ಸಾಗಿತ್ತು. 4 ತಿಂಗಳ ಹಿಂದೆ ಇವರ ಮನೆಗೆ ಹಳವುದರ ಗ್ರಾಮದ ಬಸವರಾಜು ಎಂಟ್ರಿಕೊಡುತ್ತಿದ್ದಂತೆ ಎಲ್ಲವೂ ಅಲ್ಲೋಲ-ಕಲ್ಲೋಲ ಆಗಿದೆ. ಮುರುಗೇಶ್​ರ ಭೂಮಿ ಪಕ್ಕದಲ್ಲೇ ಬಸವರಾಜು ಜಮೀನು ಇದೆ. ಟ್ರ್ಯಾಕ್ಟರ್​ ಇಟ್ಟುಕೊಂಡಿದ್ದ ಬಸವರಾಜುನಿಂದ ಮುರುಗೇಶ್​ ತನ್ನ ಜಮೀನು ಉಳಿಮೆ ಮಾಡಿಸಿದ್ದ. ಅದರ ಹಣ ಪಡೆಯಲೆಂದು ಮನೆಗೆ ಬಂದವ ಮುರುಗೇಶ್​ನ ಪತ್ನಿ ಜತೆ ಸಲುಗೆ ಬೆಳೆಸಿಕೊಂಡಿದ್ದ. ಸುಲಭವಾಗಿ ಮನೆಗೆ ಬಂದು ಹೋಗಲು ಅನುಕೂಲವಾಗಲೆಂದು ಮುರುಗೇಶ್​ನ ಸ್ನೇಹ ಬೆಳೆಸಿ ಆಗಾಗ್ಗೆ ಹಣ ಸಹಾಯ ಮಾಡುತ್ತಿದ್ದ. ಒಟ್ಟಿಗೆ ಕೂತು ಮದ್ಯ ಸೇವನೆಯನ್ನೂ ಮಾಡಿದ್ದ.
ಪಾಪ, ಬಸವರಾಜುವಿನ ಕುತಂತ್ರದ ಬಗ್ಗೆ ಪರಿವೇ ಇಲ್ಲದ ಮುರುಗೇಶ್, ಬಸವರಾಜು ಪದೇಪದೆ ಮನೆಗೆ ಬಂದು ಹೋದರೂ ಅನುಮಾನ ಪಟ್ಟಿರಲಿಲ್ಲ. ತನ್ನ ಪತ್ನಿ ನಾಗಮ್ಮ ಮತ್ತು ಸ್ನೇಹಿತ ಬಸವರಾಜು ನಡುವೆ ಅಕ್ರಮ ಸಂಬಂಧ ಇರುವುದು ಇತ್ತೀಚಿಗೆ ಮುರುಗೇಶ್​ಗೆ ತಿಳಿದಿದ್ದು, ಈ ವಿಚಾರವಾಗಿ ಗಲಾಟೆಯೂ ನಡೆದಿತ್ತು. ನಾಗಮ್ಮಳ ಪ್ರಿಯಕರನನ್ನು ಮನೆಗೆ ಬಾರದಂತೆ ತಾಕೀತು ಮಾಡಿದ್ದ. ಗಂಡನಿಗೆ ಎಲ್ಲವೂ ಗೊತ್ತಾಯಿತು, ಗಂಡ ಬದುಕಿದ್ದರೆ ತಾನು ಪ್ರಿಯಕರನ ಜತೆ ಸೇರಲು ಆಗಲ್ಲ ಎಂದು ಯೋಚಿಸಿದ ನಾಗಮ್ಮ, ಕೊಲೆಗೆ ಸಂಚು ರೂಪಿಸಿದ್ದಳು.ಇದನ್ನೂ ಓದಿರಿತಡರಾತ್ರಿ ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…
ಅದರಂತೆ ಜೂನ್​ 18ರ ರಾತ್ರಿ ಹೊಟ್ಟೆನೋವಿನ ನೆಪಹೇಳಿ ಗಂಡನೊಂದಿಗೆ ಭರಮಸಾಗರ ಆಸ್ಪತ್ರೆಗೆಂದು ಹೊರಟಿದ್ದಳು. ಕೊಲೆ ಸಂಚಿನಂತೆ ನಾಗಮ್ಮ, ಹೆಗ್ಗೆರೆ ಗ್ರಾಮದ ಮಟ್ಟಿಯ ಬಳಿ ಬೈಕ್​ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಗಂಡ ಬೈಕ್​​ ನಿಲ್ಲಿಸುತ್ತಿದ್ದಂತೆ ಅಲ್ಲಿಯೇ ಕಾಯುತ್ತಾ ಕುಳಿತಿದ್ದ ನಾಗಮ್ಮನ ಪ್ರಿಯಕರ ಅಲ್ಲಗೆ ಬಂದು ಕ್ಷಣಾರ್ಧದಲ್ಲೇ ಮುರುಗೇಶ್​ನಲ್ಲಿ ಸಮೀಪದ ಕೃಷಿ ಹೊಂಡಕ್ಕೆ ತಳ್ಳಿ ಕೊಂದಿದ್ದಾನೆ. ಇದಕ್ಕೆ ಸಾಥ್​ ಕೊಟ್ಟ ನಾಗಮ್ಮ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಳು.
ಆಕಸ್ಮಿಕ ಇಲ್ಲವೇ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಬಿಂಬಿಸಲಾಗಿತ್ತು. ಆದರೆ, ಮೃತನ ಜೇಬಿನಲ್ಲಿ ಸಿಕ್ಕ ಒಂದು ಕಾಗದ ನಾಗಮ್ಮಳ ಕಾಮದಾಟವನ್ನ ಬಯಲು ಮಾಡಿದೆ. ತನ್ನ ಪತ್ನಿ ಹಾಗೂ ಸ್ನೇಹಿತನ ನಡುವೆ ಇದ್ದ ಅಕ್ರಮ ಸಂಬಂಧದ ಬಗ್ಗೆ ಮುರುಗೇಶ್​ ಆ ಪತ್ರದಲ್ಲಿ ಬರೆದುಕೊಂಡು ಜೇಬಿನಲ್ಲಿ ಇಟ್ಟಿದ್ದ. ಈ ಬಗ್ಗೆ ಮೃತನ ತಂದೆ ಭರಮಸಾಗರ ಠಾಣೆಗೆ ನೀಡಿದ್ದರು. ಕೊಲೆಯಾದ ಮೂರೇ ದಿನಕ್ಕೆ ಪೊಲೀಸರ ಬಲೆಗೆ ಆರೋಪಿಗಳಿಬ್ಬರೂ ಸಿಕ್ಕಿಬಿದ್ದಿದ್ದು, ಜೈಲು ಸೇರಿದ್ದಾರೆ.
ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…
https://www.vijayavani.net/a-illicit-relationship-poisoning-by-lovers/
ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ
ಪೊಲೀಸರ ಕಿರುಕುಳ ಸಹಿಸಲಾಗ್ತಿಲ್ಲ, ನನಗೆ ದಯಾಮರಣ ಕೊಡಿ: ಮಧುಗಿರಿಮೋದಿ
ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
