ಕಲಬುರಗಿ:ಜ.25ರಂದು ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿ ಮೇಲೆ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಫೋಟೋಗ್ರಾಫರ್ ಶಿವಕುಮಾರ್ ಶವದ ಜಾಡು ಹಿಡಿದ ಹೊರಟ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಸ್ವಂತ ಚಿಕ್ಕಮ್ಮನ ಮನಗನಿಂದಲೇ ಶಿವಕುಮಾರ್​ ಹತ್ಯೆಯಾಗಿದ್ದು, ಕೊಲೆಯ ಕಾರಣ ಬೆಚ್ಚಿಬೀಳಿಸುತ್ತೆ.
ಶಿವಕುಮಾರ್​ರ ಚಿಕ್ಕಮ್ಮನ ಮಗ ಮಹಾಂತೇಶ್ ಆಳಂದಕರ್ ಕೊಲೆ ಆರೋಪಿ. ಈತನ ದೊಡ್ಡಪ್ಪನ ಮಗ ಶಿವಕುಮಾರ್​. ಫೋಟೋಗ್ರಾಫರ್ ಆಗಿದ್ದ ಶಿವಕುಮಾರ್​, ಮಹಾಂತೇಶ್​ನ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಕಣ್ಣಾರೆ ಕಂಡಿದ್ದ ಆಕೆಯ ಮಗ ಮಹಾಂತೇಶ್, ತನ್ನ ಮಾವ ಬಸವರಾಜ್ ಜತೆ ಸೇರಿಕೊಂಡು ಸಹೋದರ ಶಿವಕುಮಾರ್​ನ ಹತ್ಯೆಗೆ ಸಂಚು ರೂಪಿಸಿದ್ದ.
ಅದರಂತೆ ಜ.25ರಂದು ಆಳಂದ ತಾಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಮಹಾಂತೇಶ್ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ. ಮಾರ್ಗದಲ್ಲಿ ಶಿವಕುಮಾರ್​ನ ರುಂಡ ಕತ್ತರಿಸಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಗೆ ಎಸೆದು ಪರಾರಿಯಾಗಿದ್ದರು. ಈ ಕೃತ್ಯಕ್ಕೆ ಮಹಾಂತೇಶ್​ಗೆ ಸಹಕರಿಸಿದ ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಮತ್ತು ಅಶೋಕ ಜಮಾದಾರ್ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.
ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ಕಂಡು ಬೆಚ್ಚಿದ ಟೆಕ್ಕಿ! ಬೆಂಗಳೂರಲ್ಲಿ ಗೆಳತಿ ಜತೆ ಕಳೆದ ಖಾಸಗಿ ಕ್ಷಣ ಬಯಲಾಗಿದ್ದೇಗೆ?

ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಮಕ್ಕಳಾಗದ ನೋವಿನಲ್ಲಿ ಸಾವಿನ ಮನೆಯ ಕದ ತಟ್ಟಿದ ಮಹಿಳೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − nine =
Remember me
