ಬೆಂಗಳೂರು:ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ. ಇದರಲ್ಲಿ ಪತ್ರಿಕಾ ಮಾಧ್ಯಮ ಬಹಳ ಮಹತ್ವ ಪಡೆದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕಾರಂಗಕ್ಕೆ ಮುದ್ರಣ ಕಾಗದದ ಬೆಲೆ ಏರಿಕೆ ತೀವ್ರವಾಗಿ ಕಾಡುತ್ತಿದ್ದು, ಮುದ್ರಣ ಮಾಧ್ಯಮ ನಿರಾತಂಕವಾಗಿ ಮುಂದುವರಿಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪತ್ರಿಕಾ ಸಂಸ್ಥೆಗಳಿಗೆ ಸುಗಮ ಮತ್ತು ಸರಳವಾಗಿ ಮುದ್ರಣ ಕಾಗದ ಲಭ್ಯವಾಗುವಂತೆ ಕೇಂದ್ರ ಸರ್ಕಾರ ನೀತಿ ರೂಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಪತ್ರ ಬರೆದಿದ್ದಾರೆ.
ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಪ್ರತಿಕೆಗಳಿಗೆ ಇದೀಗ ಮುದ್ರಣ ಕಾಗದದ ಸಮಸ್ಯೆ ಕಾಡುತ್ತಿದೆ. ಅಗತ್ಯ ಪ್ರಮಾಣದಲ್ಲಿ ಕಾಗದ ಲಭ್ಯವಾಗುತ್ತಿಲ್ಲ. ಪತ್ರಿಕಾಲಯಗಳನ್ನು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆ ಪ್ರಮಾಣ ಈಗ ಶೇ.68 ಆಗಿದೆ. ಜಿಎಸ್​ಟಿ ಜಾರಿಗೆ ಬರುವ ಮುನ್ನ ಒಟ್ಟಾರೆ ಶೇ.3 ಮಾತ್ರ ತೆರಿಗೆ ಇತ್ತು. ಸದ್ಯದ ಪರಿಸ್ಥಿತಿಯಿಂದ ಪತ್ರಿಕೆಗಳ ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಜತೆಗೆ ಪೆಟ್ರೋಲ್​-ಡಿಸೇಲೆ ಬೆಲೆ ಏರಿಕೆ, ಕಚ್ಚಾ ಪದಾರ್ಥಗಳ ಕೊರತೆ, ಕೋವಿಡ್​ ಸೃಷ್ಟಿಸಿದ ಪರಿಣಾಮ… ಮುದ್ರಣ ಕಾಗದದ ಬೆಲೆ ದುಪ್ಪಟ್ಟು ಏರಿಕೆ ಆಗಿದೆ. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತು ಪ್ರಮಾಣವೂ ಕಡಿಮೆ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳನ್ನು ನಡೆಸುವುದೇ ದುಸ್ತರವಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಪೇಪರ್ ಪ್ರಿಂಟ್ ಮಾಡಲು ಬಹಳ ವೆಚ್ಚ ತಗಲುತ್ತಿದ್ದು, ಆದಾಯ ಕಡಿಮೆ ಆಗಿದೆ. ಪರಿಣಾಮ ನಷ್ಟ ಉಂಟಾಗಿ ಬಹುತೇಕ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ದಯವಿಟ್ಟು ಕೆಲ ನೀತಿಗಳನ್ನು ಬದಲಾಯಿಸಿ ಪತ್ರಿಕಾ ಮಾಧ್ಯಮದ ಸಮಸ್ಯೆಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕರೊನಾ ಸವಾಲು ಇನ್ನೂ ಮುಗಿದಿಲ್ಲ ಎನ್ನುತ್ತಲೇ ಪೆಟ್ರೋಲ್​ ದರ ಇಳಿಸಲು ಮನವಿ ಮಾಡಿದ ಪ್ರಧಾನಿ!

ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….

ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
