ಇಂದೋರ್​:ಬಡ ಯುವಕನೊಬ್ಬನ ಕಷ್ಟಕ್ಕೆ ಮರುಗಿದ ಪೊಲೀಸರು ಸಹಾಯಹಸ್ತ ಚಾಚಿದ್ದಾರೆ. ಜೊಮಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕ ತಡರಾತ್ರಿಯೂ ಸೈಕಲ್​ನಲ್ಲೇ ಗ್ರಾಹಕ ಮನೆಮನೆಗಳಿಗೆ ಆಹಾರ ತಲುಪಿಸುತ್ತಿದ್ದ, ನಿಗದಿತ ಸಮಯಲ್ಲಿ ಗ್ರಾಹಕರ ಮನೆ ತಲುಪಲು ವೇಗವಾಗಿ ಸೈಕಲ್​ ತುಳಿಯುತ್ತಾ ಕಷ್ಟ ಪಡುತ್ತಿದ್ದ ದೃಶ್ಯ ಕಂಡ ಪೊಲೀಸರು ಆತನಿಗೆ ನೂತನ ಬೈಕ್​ ಖರೀದಿಸಿ ಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂತಹ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಸಂಭವಿಸಿದೆ. ಜೈ ಹಲ್ದೆ ಎಂಬ ಯುವಕ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ರಾತ್ರಿ ಗಸ್ತುನಲ್ಲಿದ್ದ ಪೊಲೀಸ್​ ಅಧಿಕಾರಿ ತೆಹಜೀಬ್ ಖಾಜಿ ಅವರ ಕಣ್ಣಿಗೆ ಬಿದ್ದಿದ್ದ. ರಾತ್ರಿ ಗಸ್ತು ಸಮಯದಲ್ಲಿ ಪ್ರತಿದಿನ ಜೊಮಾಟೊ ಡೆಲಿವರಿ ಬಾಯ್ ಸೈಕಲ್‌ನಲ್ಲಿ ಹೋಗುವುದನ್ನು ನೋಡುತ್ತಿದ್ದರು. ಒಂದು ದಿನ ಆತನನ್ನು ತಡೆದ ಪೊಲೀಸ್​ ಅಧಿಕಾರಿ, ಸೈಕಲ್​ನಲ್ಲಿ ಏಕೆ ಹೋಗ್ತಿದ್ದೀಯಾ? ಕಷ್ಟ ಆಗುವುದಿಲ್ಲವೇ ಎಂದು ಕೇಳಿದರು. ಅದಕ್ಕುತ್ತರಿಸಿದ ಯುವಕ, ಮನೆಯಲ್ಲಿ ಕಡುಬಡತನ ಇದೆ. ತಾಯಿ ಮನೆ ಕೆಲಸ ಮಾಡುತ್ತಾರೆ. ಸೈಕಲ್​ನಲ್ಲೇ ಆಹಾರ ತಲುಪಿಸುವುದರಿಂದ ಬರೀ 200-300 ರೂಪಾಯಿ ಮಾತ್ರ ಸಂಪಾದನೆ ಆಗುತ್ತೆ. ಬೈಕ್​ ತಗೋಳೋಕೆ ಆಗ್ತಿಲ್ಲ ಸರ್​ ಎಂದೇಳಿ ಹೊರಟಿದ್ದಾನೆ.

ಯುವಕನ ಕಷ್ಟಕ್ಕೆ ಮಿಡಿದ ಪೊಲೀಸ್​ ಅಧಿಕಾರಿ ತೆಹಜೀಬ್ ಖಾಜಿ ಅವರು ಪೊಲೀಸ್​ ಠಾಣೆಗೆ ಹೋಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಿಬ್ಬಂದಿಯೆಲ್ಲರೂ ಹಣ ಸಂಗ್ರಹಸಿ ನೂತನ ಬೈಕ್​ ಖರೀದಿಸಿ ಪೊಲೀಸ್​ ಠಾಣೆಗೆ ಯುವಕನ್ನು ಕರೆತಂದಿದ್ದಾರೆ. ಇದರಿಂದ ಯುವಕ ಮತ್ತು ಆತನ ಕುಟಂಬಸ್ಥರು ಗಾಬರಿಯಾಗಿದ್ದರು. ಪೊಲೀಸರು ಠಾಣೆಗೆ ಬರುತ್ತಿದ್ದಂತೆ ಫುಡ್ ಡೆಲಿವರಿ ಬಾಯ್ ಜೈ ಹಲ್ದೆಗೆ ಸರ್ಪ್ರೈಸ್​ ಆಗಿ ಬೈಕ್​ ಅನ್ನು ಉಡುಗೊರೆ ಕೊಡುತ್ತಿದ್ದಂತೆ ಖುಷಿಗೆ ಪಾರವೇ ಇರಲಿಲ್ಲ. ಪೊಲೀಸರು ಮುಂಗಡ ಹಣ ನೀಡಿ ಬೈಕ್ ಖರೀದಿಸಿ ಕೊಟ್ಟಿದ್ದು, ಬೈಕ್ ಪಡೆದ ನಂತರ ಜೈ ಹಲ್ದೆಯ ಆದಾಯ ಮೂರು ಪಟ್ಟು ಹೆಚ್ಚಾಗಲಿದೆ. ಉಳಿದ ಸಾಲದ ಕಂತನ್ನು ತಾನೇ ಕಟ್ಟಿಕೊಳ್ಳುವೆ ಎಂದೂ ಆತ ಹೇಳಿದ್ದಾನೆ. ಇಂದೋರ್​ನ ವಿಜಯನಗರ ಠಾಣೆ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
10 ದಿನ ಮೊದಲೇ ಆ್ಯಸಿಡ್​ ದಾಳಿಗೆ ಸಂಚು ರೂಪಿಸಿದ್ದ! ಮೆಜೆಸ್ಟಿಕ್​ನಲ್ಲಿ ಬೈಕ್​ ಪತ್ತೆ, ತಿರುಪತಿಯಲ್ಲಿ ಆರೋಪಿಗಾಗಿ ಹುಡುಕಾಟ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
