ಶ್ರೀರಂಗಪಟ್ಟಣ:ಐದು ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ಪಾರಂಪರಿಕ ದಸರಾಗೆ ಇಂದು(ಸೆ.28) ಚಾಲನೆ ಸಿಕ್ಕಿದೆ. ಮೈಸೂರಿಗಿಂತ ಮೊದಲೇ ವಿಶ್ವವಿಖ್ಯಾತ ದಸರಾ ಆಚರಣೆ ಶುರುವಾಗಿದ್ದು ಶ್ರೀರಂಗಪಟ್ಟಣದಲ್ಲಿ. ನಾಡಹಬ್ಬ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಶ್ರೀರಂಗಪಟ್ಟಣ ದಸರಾವನ್ನು ಮೈಸೂರು ರಾಜ ಮನೆತನದವರು ಖುದ್ದು ಹಾಜರಿದ್ದು, ಆಚರಣೆ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಶ್ರೀರಂಗಪಟ್ಟಣದಲ್ಲಿ ರಾಜ ಶ್ರೀರಂಗರಾಯ ಆಳ್ವಿಕೆ ಮಾಡುತ್ತಿದ್ದರು. ಆ ವೇಳೆ ವಿಜಯನಗರದಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ಇಲ್ಲಿಯೂ ಮಾಡಲಾಗುತ್ತಿತ್ತು. ಮೈಸೂರು ರಾಜಮನೆತನದವರು 1610ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಲು ಪ್ರಾರಂಭಿಸಿದರು. ಮೊದಲು ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ಇದ್ದ ಅರಮನೆ ಆವರಣದಲ್ಲಿ ದಸರಾ ಆಚರಣೆ 10 ದಿನಗಳ ಕಾಲ ನಡೆಯುತ್ತಿತ್ತು. ಮಹಾರಾಜರೇ ಖುದ್ದು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.
ವಿಜಯದಶಮಿಯಂದು ಅರಮನೆಯಿಂದ ರಾಜಧಾನಿಗೆ ಪೂರ್ವ ಭಾಗದಲ್ಲಿದ್ದ ಬನ್ನಿಮಂಟಪದ ವರೆಗೆ ಉತ್ಸವ ನಡೆಯುತ್ತಿತ್ತು. ಆನೆ ಮೇಲೆ ಚಾಮುಂಡೇಶ್ವರಿ ದೇವಿಯ ಚಿನ್ನದ ವಿಗ್ರಹ ಇರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಸುತ್ತ ಮುತ್ತಲಿನ ಜನರು ಉತ್ಸವ ನೋಡಲು ಆಗಮಿಸುತ್ತಿದ್ದರು. ಒಂದೆಡೆ ಧಾರ್ಮಿಕ ಕೈಂಕರ್ಯ, ಮತ್ತೊಂದೆಡೆ ಮೃಷ್ಟಾನ್ನ ಭೋಜನ ಕಾರ್ಯಕ್ರಮ ನಡೆಯುತ್ತಿತ್ತು. ಅಂತೆಯೇ ಕಾವೇರಿ ನದಿ ದಡಕ್ಕೆ ಆಯುಧಗಳನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತಿತ್ತು. ನಂತರ ಅರಮನೆ ಪಕ್ಕದ ವಸಂತಕೊಳದಲ್ಲಿ ಮಜ್ಜನ ನಡೆಸಿ ಕಸ್ತೂರಿ, ಸಾಂಬ್ರಾಣಿ, ಪನ್ನೀರುಗಳಿಂದ ಸಿಂಪಡಿಸುತ್ತಿದ್ದರು. ಅರಮನೆ ಆವರಣ ಸೇರಿದಂತೆ ಪಟ್ಟಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿತ್ತು ಎಂಬ ವಿಷಯಗಳನ್ನು ಕವಿ ಗೋವಿಂದ ವೈದ್ಯ ಕಂಠೀರವ ನರಸರರಾಜ ವಿಜಯಂ ಕೃತಿಯಲ್ಲಿ ವರ್ಣಿಸಿದ್ದಾರೆ. ಇನ್ನು 2010ರಿಂದ ದಸರಾ ಆಚರಣೆಯ ವೈಭವವೇ ಬದಲಾಯಿತು. ಅದ್ದೂರಿತನದಿಂದ ಜನರನ್ನು ಆಕರ್ಷಿಸುವ ಕಾರ್ಯಕ್ರಮ ಆಯೋಜನೆಗೊಂಡವು.
2014ರಿಂದ ಅಂದರೆ ನಾಲ್ಕು ವರ್ಷ ಶ್ರೀರಂಣಗಪಟ್ಟಣದಲ್ಲಿ ಜಂಬೂಸವಾರಿ ನಡೆದಿರಲಿಲ್ಲ. ಬರಗಾಲ ಹಿನ್ನೆಲೆ ಆನೆಗಳನ್ನು ಕರೆಸಿರಲಿಲ್ಲ. ಇದರಿಂದಾಗಿ ಹಬ್ಬ ಕಳೆಗುಂದಿದಂತಿತ್ತು. 2018ರಲ್ಲಿ ಮತ್ತೆ ಜಂಬೂ ಸವಾರಿ ವೈಭವಕ್ಕೆ ಮರು ಚಾಲನೆ ನೀಡಲಾಯಿತು. ಆ ವೇಳೆ ಮೂರು ಆನೆಗಳನ್ನು ಕರೆಸಲಾಗಿತ್ತು. ಇನ್ನು 2019ರಲ್ಲಿ ಶ್ರೀರಂಗಪಟ್ಟಣದ ದಸರಾಕ್ಕೆ ಹೊಸ ಭಾಷ್ಯ ಬರೆಯಲಾಯಿತು. ಜಿಲ್ಲಾಡಳಿತದ ಹೊಸ ಕಾರ್ಯಕ್ರಮದ ಮೂಲಕ ಸ್ಥಳೀಯರು ಮತ್ತು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಪ್ರಮುಖವಾಗಿ ಗ್ರಾಮೀಣ, ರೈತ ಪರಂಪರೆ ಜತೆಗೆ ಪ್ರವಾಸಿ ತಾಣಗಳ ಬಿಂಬಿಸುವ ಪ್ರಯತ್ನ ಸಫಲತೆ ಕಂಡಿತು. ಮೊದಲೇ ಯೋಜನೆ ರೂಪಿಸಿದಂತೆ 2019ರಲ್ಲಿ ವಿಭಿನ್ನತೆಯ ಮೂಲಕ ಪ್ರವಾಸಿಗರನ್ನು ಸೆಳೆಯಲು ಗ್ರಾಮೀಣ ಸೊಗಡನ್ನು ಪರಿಚಯಿಸಲಾಯಿತು. 2020ರಲ್ಲಿ ಕೋವಿಡ್​ ಕಾರಣಕ್ಕೆ ಜಂಬೂಸವಾರಿ ನಡೆದಿರಲಿಲ್ಲ. ಇದೀಗ ಪಾರಂಪರಿಕ ದಸರಾಗೆ ಅದ್ದೂರಿ ಚಾಲನೆ ಸಿಕ್ಕಿದ್ದು, ಎಲ್ಲೆಡೆ ನಾಡಹಬ್ಬದ ಸಂಭ್ರಮ ಕಳೆಗಟ್ಟಿದೆ. ರೈತ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ, ಯುವ, ಉದ್ಯೋಗ, ಕ್ರೀಡಾ, ಸಾಹಿತ್ಯ, ಮಕ್ಕಳ ಹಾಗೂ ಯೋಗ ದಸರಾ ಸೇರಿದಂತೆ ಹಲವು ವಿಶೇಷತೆಗಳಿವೆ.
ಶ್ರೀರಂಗಪಟ್ಟಣ ದಸರಾಗೆ ಚಾಲನೆ: ನಾಡಹಬ್ಬದ ಸಂಭ್ರಮ ಹೆಚ್ಚಿಸಿದ ಪಾರಂಪರಿಕ ಜಂಬೂಸವಾರಿ

ಪಿಎಫ್​ಐ ಬ್ಯಾನ್​ ಮಾಡಿದ್ದನ್ನು ಸ್ವಾಗತಿಸುತ್ತಲೇ ಮತ್ತೊಂದು ಡಿಮಾಂಡ್​ ಇಟ್ಟ ರಾಜ್ಯ ಕಾಂಗ್ರೆಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
