ಚಿತ್ರದುರ್ಗ:ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ಸುದ್ದಿ ವಾಹಿನಿಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಓಬವ್ವನ ನಾಡು ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸ್ತ್ರೀ ಶಕ್ತಿಯ ದರ್ಶನ ಮಾಡಿಸಿತು.
‘ಸಮಾನತೆಗಾಗಿ ನಡಿಗೆ ಜಾಥಾ’, ‘ಹೆಣ್ಣು ಸಬಲೆ’ ಎಂಬ ಸಂದೇಶ ಸಾರುವ ಜತೆಗೆ, ಲಿಂಗ ತಾರತಮ್ಯ ತೊಡೆದು ಹಾಕುವ ಸಂಕಲ್ಪಕ್ಕೆ ಪ್ರೇರಣೆ ನೀಡಿತು. ವಾಕಥಾನ್ ಉದ್ದಕ್ಕೂ ಮಹಿಳಾ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ದೇಸಿ ಹಾಡುಗಳಿಗೆ ಯುವತಿಯರು ಹೆಜ್ಜೆ ಹಾಕಿದರು. ಅಲ್ಲಲ್ಲಿ ಸೆಲ್ಫಿ ಸಂಭ್ರಮ ಕಂಡುಬಂತು. ಕಲಾ ತಂಡಗಳು ತಮ್ಮ ನೈಪುಣ್ಯವನ್ನು ಒರೆಗೆ ಹಚ್ಚಿದವು. ವೇದಿಕೆ ಕಾರ್ಯಕ್ರಮ ಕೂಡ ಮಹಿಳಾ ಕೇಂದ್ರಿತವಾಗಿತ್ತು. ಸ್ತ್ರೀಯರ ಆರೋಗ್ಯ, ಶಿಕ್ಷಣ, ಉದ್ಯೋಗ ಕುರಿತು ಗಣ್ಯರು ಬೆಳಕು ಚೆಲ್ಲಿದರು.
ಓಬವ್ವನೂರಿನಲ್ಲಿ ಸ್ತ್ರೀ ಶಕ್ತಿ:ಮಂಗಳವಾರ ಬೆಳಗ್ಗೆ ನೀಲಂಕಠೇಶ್ವರ ದೇಗುಲದ ಮುಂಭಾಗ ವಾಕಥಾನ್‌ಗೆ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ಜಿಪಂ ಸಿಪಿಒ ಗಾಯತ್ರಿ ಚಾಲನೆ ನೀಡಿದರು. ಜೈಲು ಅಧೀಕ್ಷಕಿ ಮಹಾದೇವಿ ಎಂ.ಮರಕಟ್ಟಿ ತೋಟಗಾರಿಕೆ ಇಲಾಖೆ ಅಧಿಕಾರಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು. ಟಿ ಶರ್ಟ್, ಕ್ಯಾಪ್ ಧರಿಸಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಮಹಿಳಾ ಹೋರಾಟಗಾರ್ತಿಯರು, ಸಂಘಟನೆಗಳು ವಾಕಥಾನ್ ಮೂಲಕ ಕಾರ್ಯಕ್ರಮ ನಡೆವ ಸ್ಥಳ ಡಿಸಿಸಿ ಬ್ಯಾಂಕ್ ಆವರಣದವರೆಗೆ ಹೆಜ್ಜೆ ಹಾಕಿದರು.
ಸ್ತ್ರೀ ಶಕ್ತಿಯ ಪ್ರದರ್ಶನ:ವಾಕಥಾನ್‌ನಲ್ಲಿ ಸ್ತ್ರೀ ಶಕ್ತಿಯ ಅನಾವರಣವಾಯಿತು. 2000ಕ್ಕೂ ಅಧಿಕ ಮಹಿಳೆಯರು ಕಿಲೋ ಮೀಟರ್‌ವರೆಗೆ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಮಹಿಳಾ ಶಕ್ತಿ ರಾಷ್ಟ್ರ ಶಕ್ತಿ, ಭಾರತ್ ಮಾತಾಕಿ ಜೈ ಹಾಗೂ ವಂದೇ ಮಾತರಂ ಘೋಷಣೆಗಳು ಮೊಳಗಿದವು.
ಸಂಭ್ರಮ ಹೆಚ್ಚಿಸಿದ ನೃತ್ಯ:ವಿದ್ಯಾರ್ಥಿನಿಯರ ನೃತ್ಯ ಮಹಿಳಾ ದಿನದ ಸಂಭ್ರಮ ಹೆಚ್ಚಿಸಿತು. ವಾಕಥಾನ್ ನೀಲಕಂಠೇಶ್ವರ ದೇವಸ್ಥಾನದಿಂದ ಓಬವ್ವನ ವೃತ್ತಕ್ಕೆ ಬರುತ್ತಿದ್ದಂತೆ ಡೋಲು ಬಡಿತಕ್ಕೆ ಹೆಣ್ಣುಮಕ್ಕಳು ಹೆಜ್ಜೆ ಹಾಕಿದರು. ಕುಣಿದು ಕುಪ್ಪಳಿಸಿದರು. ಮಾನವ ಸರಪಳಿ ನಿರ್ಮಿಸಿ ಲಿಂಗ ಸಮಾನತೆ ತೊಲಗಲಿ ಎಂದು ಘೋಷಣೆ ಕೂಗಿದರು.
ಪ್ರತಿ ಸ್ತ್ರೀಯರಲ್ಲೂ ವಿಶೇಷ ಶಕ್ತಿ ಇದೆ, ಮಹತ್ತರ ಜವಾಬ್ದಾರಿಯೂ ಮಹಿಳೆಯರ ಮೇಲಿದೆ: ವಾಣಿ ಆನಂದ ಸಂಕೇಶ್ವರ

ತಡರಾತ್ರಿ ಘೋರ ದುರಂತ: 8 ತಿಂಗಳ ಮಗು ಸೇರಿ ಐವರು ಮಲಗಿದ್ದಲ್ಲೇ ಸಜೀವ ದಹನ

ಬ್ಯಾಂಕಿನ ಚಲನ್​ ತಿದ್ದಿ ಒಂದೂವರೆ ಕೋಟಿ ರೂ. ಲಪಟಾಯಿಸಿದ ಗುಮಾಸ್ತ! ಈ ಕೃತ್ಯ ಕಂಡ ಪೊಲೀಸರೇ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 6 =
Remember me
