ಬೆಂಗಳೂರು:ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಆವರಣದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. ಕೈದಿಗಳು, ಮತ್ತು ವಿಚಾರಣಾಧೀನ ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್, ಸತ್ಸಂಗ ಸಂಸ್ಥೆ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ ಸಹಯೋಗದಲ್ಲಿ ಯೋಗಾಭ್ಯಾಸ ಮಾಡಿಸಲಾಯಿತು.
ಸಂಸ್ಥೆಯ ಟವರ್-1 ವಿಭಾಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ 500 ವಿಚಾರಣಾ ಬಂಧಿಗಳಿಗೆ, ಟವರ್ -2 ವಿಭಾಗದಲ್ಲಿ ಸತ್ಸಂಗ ಸಂಸ್ಥೆ ಸಹಯೋಗದಲ್ಲಿ 100 ಸಜಾ ಬಂಧಿಗಳಿಗೆ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದಲ್ಲಿ 100 ಮಹಿಳಾ ಬಂಧಿಗಳಿಗೆ ಯೋಗ ತರಬೇತಿ ನೀಡಲಾಯಿತು. ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸೃತಿ ಮತ್ತು ಸಮ್ಯಕ್ ಸಮಾಧಿ… ಈ ಎಂಟು ಯೋಗಗಳು ಅಂತರಂಗ-ಬಹಿರಂಗ ಶುದ್ಧಿಯ ಸಾಧನಗಳು. ಯೋಗದಿಂದ ಮನಸ್ಸು-ಶರೀರ, ಆಲೋಚನೆ -ಕ್ರಿಯೆ, ಸಂಯಮ- ಸಾರ್ಥಕತೆ, ಮಾನವ- ನಿಸರ್ಗದ ನಡುವೆ ಸಾಮರಸ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತೆ. ಸಮಗ್ರ ಮಾನವೀಯತೆಗಾಗಿ ದೈಹಿಕ, ಮಾನಸಿಕ, ಸಾಮಾಜಿಕ, ಭೌದ್ಧಿಕ ಸಾಮರಸ್ಯವೇ ಯೋಗ ಎಂಬ ಸಂದೇಶ ಸಾರಲಾಯಿತು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸತತ 52 ವಾರಗಳಿಂದ ಕೈದಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಯೋಗಾಭ್ಯಾಸದ ತರಬೇತಿ ನೀಡುತ್ತಿರುವುದು ವಿಶೇಷ.
ಪ್ರಿನ್ಸಿಪಾಲ್​ರ ಕಪಾಳಕ್ಕೆ ಬಾರಿಸಿದ ಮಂಡ್ಯ ಶಾಸಕ! ಕಾಲೇಜಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲೇ ಕೃತ್ಯ, ವಿಡಿಯೋ ವೈರಲ್​

ರಾಜ ವಂಶಸ್ಥರ ಜತೆ ಉಪಾಹಾರ ಸೇವಿಸಿದ ಪ್ರಧಾನಿ ಮೋದಿ: ಸ್ಪೆಷಲ್​ ಮೈಸೂರು​ ಪಾಕ್ ಸೇರಿ 10 ಬಗೆಯ ಖಾದ್ಯ

ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
