ಚಿತ್ರದುರ್ಗ: ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್​.ಶಶಿಕುಮಾರ್ ಅವರು ಚಿತ್ರದುರ್ಗದ ಕೋಟೆಯನ್ನು ಹತ್ತುತ್ತಿರುವ ವಿಡಿಯೋ ವೈರಲ್​ ಆಗಿದೆ.
ಐಪಿಎಸ್​ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಮೂಲದವರು. ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದ್ದ ಶಶಿಕುಮಾರ್​ ಅವರು, ಬರಿಗಾಲಿನಲ್ಲೇ ಚಿತ್ರದುರ್ಗದ ಕಲ್ಲಿನ ಕೋಟೆ ಮೇಲೆ ಹತ್ತಿದ್ದು, ಆ ವಿಡಿಯೋವನ್ನು ‘ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ’ ಎಂಬ ಬರಹದೊಂದಿಗೆ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆಯ ಕಲ್ಲಿನ ಗೋಡೆಯನ್ನು ಐಪಿಎಸ್​ ಅಧಿಕಾರಿ ಹತ್ತುತ್ತಿರುವ ದೃಶ್ಯ ನೋಡಿದ ಅಭಿಮಾನಿಗಳು ಮತ್ತು ಚಿತ್ರದುರ್ಗದ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.
ಏಕಾಏಕಿ ವಾಹನ ತಡೆಯಂಗಿಲ್ಲ, ಟ್ರಾಫಿಕ್​ ಪೊಲೀಸರಿಗೆ DGP ಖಡಕ್​​ ಸೂಚನೆ: ಎಎಸ್​ಐ-ಮುಖ್ಯಪೇದೆ ಅಮಾನತು

ಮೈಸೂರಲ್ಲಿ 2ನೇ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರ ಕೊಲೆ! ತಂದೆಯ ಕರಾಳ ಮುಖ ಬಿಚ್ಚಿಟ್ಟ 20 ವರ್ಷದ ಮಗಳು

Sign in to your account
Please enter an answer in digits:20 + seventeen =
Remember me
