ಬೆಂಗಳೂರು:ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ನನ್ನ ತಂಗಿಯಂತೆ ಇದ್ದರು. ಅವರ ಮಕ್ಕಳು ಅನಾಥರಾಗಿದ್ದಾರೆ. ಆ ಮಕ್ಕಳನ್ನು ಕಾಪಾಡುವ ಕೆಲಸ ಮಾಡುವೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ರೇಖಾ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿದ್ದ ಜಮೀರ್​ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರೇಖಾ‌ ಕದಿರೇಶ್ ಕೊಲೆ ವಿಚಾರ ಕೇಳಿ ನನಗೆ ಶಾಕ್ ಆಯಿತು. ರೇಖಾ ನನ್ನ ತಂಗಿಯ ರೀತಿ ಇದ್ದರು. ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸವಾದರೂ ಅವರನ್ನ ಕರೆಯುತ್ತಿದ್ದೆ. 2018ರಲ್ಲಿ ಆಕೆ ಗಂಡನನ್ನು ಕಳೆದುಕೊಂಡಿದ್ದರು. ಇಂದು ಇವರ ಕೊಲೆಯಾಗಿದೆ‌. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತಪ್ಪಿತಸ್ಥರನ್ನ ಕೂಡಲೇ ಹಿಡಿಯುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸುವ ಮೂಲಕ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಕ್ಕೆ ತಿರುಗೇಟು ನೀಡಿದರು.
ರೇಖಾ ಕದಿರೇಶ್ ಕೊಲೆ ಹಿಂದೆ ರಾಜಕೀಯ ವಾಸನೆಯಿದೆ‌ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದರು. ಈ ಕುರಿತು ಕಿಡಿಕಾರಿದ ಜಮೀರ್, ವಿನಾಃ ಕಾರಣ ಆರೋಪ‌ ಮಾಡುವುದು ಸರಿಯಲ್ಲ. ಅವರ ಕನಸಿನಲ್ಲೂ ನಾನು ಕಾಡುತ್ತಿದ್ದೇನೆ ಅನಿಸುತ್ತೆ‌. ಅದಕ್ಕೆ‌ ನನ್ನ ಮೇಲೆ ಆಪಾದನೆ ಹೊರಿಸಿದ್ದಾರೆ‌ ಎಂದು ತಿರುಗೇಟು ನೀಡಿದರು.
ರಮೇಶ್ ಏನ್ ಮಾಡ್ತಿದ್ದಾರೆ? ಎಲ್ಲೆಲ್ಲಿ ರೋಲ್ ಕಾಲ್ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಈಗ ಆ ಬಗ್ಗೆ ಚರ್ಚೆ ಬೇಡ. ಅವರೇ ಮುಂದೆ ನಿಂತು ಮಾಡಬೇಕಾದ ಕೆಲಸವನ್ನು ನಾನು ಮಾಡುತ್ತಿರುವೆ. ಕೊಲೆ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಗೆ ಬಂದಿದ್ದೇನೆ ಎಂದರೆ ಅರ್ಥ ಮಾಡಿಕೊಳ್ಳಿ. ಯಾರದ್ದೋ ದ್ವೇಷಕ್ಕೆ, ಇನ್ಯಾರನ್ನೋ ಬಲಿ ತೆಗೆದುಕೊಳ್ಳವುದು ಎಷ್ಟು ಸರಿ? ಎಂದು ಜಮೀರ್ ಹರಿಹಾಯ್ದರು.
ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

https://www.vijayavani.net/a-illicit-relationship-poisoning-by-lovers/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 17 =
Remember me
