ಬೆಂಗಳೂರು:ರಾಜ್ಯದಲ್ಲಿ ಬಿ.ಝಡ್​. ಜಮೀರ್​ ಅಹಮದ್​ ಖಾನ್​ ಸೇರಿ 6 ಮಾಜಿ ಸಚಿವರು ಸರ್ಕಾರದಿಂದ ನೀಡಲಾಗಿದ್ದ ವಸತಿ ಗೃಹಗಳ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಮೂರು ವರ್ಷವಾದರೂ ಪಾವತಿಸಿಲ್ಲ.
ರಾಜ್ಯದಲ್ಲಿ ಸಚಿವರಾದವರಿಗೆ ಸರ್ಕಾರದಿಂದ ಆಡಳಿತ ಕಾರ್ಯವೈಖರಿಗೆ ಅನುಕೂಲ ಆಗುವಂತೆ ವಸತಿ ಗೃಹ ನೀಡಲಾಗುತ್ತದೆ. ಕೆಲವರು ಅಧಿಕಾರ ಪೂರ್ಣಗೊಂಡರೂ ವಸತಿ ಮನೆ ಬಿಟ್ಟು ಹೋಗದೇ ಇದ್ದಲ್ಲಿ, ಎಷ್ಟು ದಿನಗಳವರೆಗೆ ಉಳಿದುಕೊಂಡಿರುತ್ತಾರೋ ಅಷ್ಟು ಅವಧಿಗೆ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತು ಪಾವತಿಸಬೇಕು. ಆದರೆ ಜಮೀರ್​ ಅಹಮದ್​ ಖಾನ್​ 188 ದಿನಗಳ ಬಾಬ್ತು 38.27 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಆರ್​.ಬಿ. ತಿಮ್ಮಾಪುರ 3.77 ಲಕ್ಷ ರೂ. ಮೊತ್ತದ ಸಾಮಗ್ರಿಯನ್ನು ಹಿಂತಿರಿಗಿಸಿಲ್ಲ. ಮತ್ತೊಂದೆಡೆ ಸಿ.ಎಸ್​.ಪುಟ್ಟರಾಜು 1.09 ಲಕ್ಷ ರೂ., ವೆಂಕಟರಮಣಪ್ಪ 59 ಸಾವಿರ ರೂ., ವೆಂಕಟರಾವ್​ ನಾಡಗೌಡ 87 ಸಾವಿರ ರೂ. ಮೊತ್ತದ ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಇಂಧನ, ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ವಿ.ಸುನೀಲ್​ಕುಮಾರ್​ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಚಿವ ಆಚಾರ್​ ಹಾಲಪ್ಪ ಬಸಪ್ಪ ಅವರಿಗೆ ಈವರೆಗೂ ವಸತಿಗೃಹ ಹಂಚಿಕೆಯಾಗಿಲ್ಲ.
ಹನಿಟ್ರ್ಯಾಪ್​ ಗಾಳಕ್ಕೆ ಬಿದ್ದ ಉಪ ತಹಸೀಲ್ದಾರ್​! ಆಕೆಯ ಮಾತಿಗೆ ಮರುಳಾಗಿ ಹೋಟೆಲ್​ಗೆ ಹೋಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ…

ಎಚ್​ಡಿಕೆ ಬೆಂಗಾವಲು ವಾಹನ ಅಪಘಾತ: ಪಾವಗಡ ಬಸ್​ ದುರಂತದಲ್ಲಿ ಗಾಯಗೊಂಡವರ ಭೇಟಿ ವೇಳೆ ಮತ್ತೊಂದು ಅವಘಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nineteen =
Remember me
