ಬೆಂಗಳೂರು:ದೊಡ್ಡಬಳ್ಳಾಪುರದಲ್ಲಿ ಗುರುವಾರ ನಿಗದಿಯಾಗಿರುವ ಜನೋತ್ಸವ ಅಬಾಧಿತ. ಅಕಾಲಿಕವಾಗಿ ಅಗಲಿದ ಹಿರಿಯ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಮಾವೇಶದಲ್ಲಿ ಸಂತಾಪ ಸೂಚಿಸಿ ಪೂರ್ವ ಯೋಜಿತ ಕಾರ್ಯಕ್ರಮಗಳನ್ನು ಮುಂದುವರಿಸಲು ಪಕ್ಷ ಚಿಂತನೆ ನಡೆಸಿದೆ.
ಡಬಲ್ ಇಂಜಿನ್ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಸೇರಿ ಕೃತಜ್ಞತೆ ಸಲ್ಲಿಸಲಿರುವ ವಿಶಿಷ್ಟ ಸಮಾವೇಶಕ್ಕೆ‌ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಹಿಂದೆ ಬಿಜೆಪಿ ಯುವ ಮುಖಂಡ‌ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಜು.28ರಂದು ನಿಗದಿತ ಜನೋತ್ಸವ ಕೊನೇ ಗಳಿಗೆಯಲ್ಲಿ ರದ್ದಾಗಿತ್ತು. ಇದೀಗ ಸಚಿವ ಉಮೇಶ್ ಕತ್ತಿ ವಿಧಿವಶ ಕಾರಣಕ್ಕೆ ಮುಂದೂಡುವ ಬದಲು ಕಂಬನಿ ಮಿಡಿದು ಕಾರ್ಯಕ್ರಮ ಮುಂದುವರಿಸಬೇಕು ಎಂಬ ಅಭಿಪ್ರಾಯಗಳಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಒಪ್ಪಿಗೆ ಬಾಕಿಯಿದೆ.
ಸಿಎಂ ಖಾಸಗಿ ನಿವಾಸದಲ್ಲಿ ಬೊಮ್ಮಾಯಿ‌ ಅವರನ್ನು ಬುಧವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಗೋವಿಂದ ಕಾರಜೋಳ ಮತ್ತು ಆರಗ ಜ್ಞಾನೇಂದ್ರ ಅವರು, ಪೂರ್ವ ನಿಗದಿಯಂತೆ ದೊಡ್ಡಬಳ್ಳಾಪುರದಲ್ಲಿ ಗುರುವಾರ ಜನೋತ್ಸವ ನಡೆಯಲಿದೆ ಎಂದು ಖಚಿತಪಡಿಸಿದರು.
ಉಮೇಶ್ ಕತ್ತಿ ನಿಧನ ಗೌರವಾರ್ಥ ಶೋಕಾಚರಣೆ‌ ಮೂರು ದಿನಗಳ ಬದಲು ಒಂದು ದಿನಕ್ಕೆ ಸೀಮಿತವಾಗಿಸಿದ್ದಕ್ಕೂ ಈ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ಸಮಾವೇಶದಲ್ಲಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಕಾರಜೋಳ ಮತ್ತು ಆರಗ ಜ್ಞಾನೇಂದ್ರ ಹೇಳಿದರು.
3 ದಿನದ ಬದಲು 1 ದಿನದ ಶೋಕಾಚರಣೆಗೆ ಸಿದ್ದರಾಮಯ್ಯ ಬೇಸರ: ನಾಳೆ ನಡೆಯುತ್ತಾ ಜನೋತ್ಸವ?

ಉಮೇಶ್​ ಕತ್ತಿ ಪಾರ್ಥಿವ ಶರೀರ ಸಾಗಿಸಲು ಆರ್ಮಿ ವಾಹನ ಸಜ್ಜು

ಅಕ್ಟೋಬರ್​ನಲ್ಲಿ ನೂತನ ವೇತನ ಆಯೋಗ ರಚನೆ: ಸಿಎಂ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
