ಬೆಂಗಳೂರು:ಬೆಂಗಳೂರಿನ ನಾಗರಿಕರು ತಮ್ಮ ಸಮಸ್ಯೆ, ಕುಂದು-ಕೊರತೆ, ಆಗು-ಹೋಗು, ಆಶಯಗಳನ್ನು ರಾಜಕೀಯ ಪಕ್ಷದ ಗಮನಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್​ ನಡೆಸುತ್ತಿರುವ “ಜನತಾ ಮಿತ್ರ”ಕ್ಕೆ ಈಗ ಕರೊನಾ ಕಾರ್ಮೋಡ ಆವರಿಸಿದೆ.
ಕೋವಿಡ್​ ದೃಢಟ್ಟಿರುವ ಕಾರಣ ನಗರದಲ್ಲಿ ನಡೆಯುವ ಜನತಾ ಮಿತ್ರಕ್ಕೆ ಆರೇಳು ದಿನ ಕಾಲ ಕುಮಾರಸ್ವಾಮಿ ಗೈರು ಹಾಜರಾಗಲಿದ್ದಾರೆ. ಹಾಗಾಗಿ ಜನತಾ ಮಿತ್ರ ಕಳೆಗುಂದುವ ಸಾಧ್ಯತೆಗಳಿವೆ.
ಈ ಅಭಿಯಾನದ ಸಾರಥ್ಯವನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಇಬ್ರಾಹಿಂ, ವಿಧಾನ ಪರಿಷತ್​ ಸದಸ್ಯರಾದ ತಿಪ್ಪೇಸ್ವಾಮಿ, ಟಿ.ಎ.ಶರವಣ ಹಾಗೂ ಜೆಡಿಎಸ್​ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಪ್ರಕಾಶ್​ ವಹಿಸಲಿದ್ದಾರೆ.
ಕೋವಿಡ್​ ಸೋಂಕಿನ ಕಾರಣ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಇನ್ನೂ ಆರೇಳು ದಿನ ಹೋಮ್​ ಕ್ವಾರಂಟೈನ್​ನಲ್ಲಿರುತ್ತಾರೆ. ಹಾಗಾಗಿ ಪ್ರತಿಪಕ್ಷಗಳಿಗೆ ಚಾಟಿ ಬೀಸುವ ಕೆಲಸಕ್ಕೆ ತಕ್ಕಮಟ್ಟಿಗೆ ಕಡಿವಾಣ ಬೀಳಲಿದೆ.
ಜನತಾ ದರ್ಶನ ಇಲ್ಲ:‘ಜನತಾ ಮಿತ್ರ’ದ ಸಂದರ್ಭದಲ್ಲಿ ಕುಮಾರಸ್ವಾಮಿ ‘ಜನತಾ ದರ್ಶನ’ ಕೂಡ ನಡೆಸುತ್ತಿದ್ದರು. ಆಗ ಜನರಿಂದ ಅನೇಕ ಅಹವಾಲು ಆಲಿಸುತ್ತಿದ್ದರು. ಕ್ಷೇತ್ರದ ಸಮಸ್ಯೆಗಳ ಮಾಹಿತಿ ಪಡೆದು ಸರ್ಕಾರವನ್ನು ತರಾಟೆ ತೆಗೆದುಕೊಳ್ಳುತ್ತಿದ್ದರು. ಆದರೆ, ಆರೇಳು ದಿನ ಕುಮಾರಸ್ವಾಮಿ ಗೈರಾಗುವುದರಿಂದ ಅಹವಾಲು ಸಲ್ಲಿಸಬೇಕು ಎಂದುಕೊಂಡಿರುವವರಿಗೆ ನಿರಾಶೆಯಾಗುವುದಂತೂ ನಿಶ್ಚಿತ. ಖುದ್ದು ಭೇಟಿಗೆ ಅವಕಾಶವಿಲ್ಲದಿದ್ದರೂ ಕಾಗದ, ಟ್ಯಾಬ್​, ಕ್ಯೂ ಆರ್​ ಕೋಡ್​ ಮೂಲಕವೂ ಜನರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.
ಜನತಾ ಮಿತ್ರ ನಿಲ್ಲುವುದಿಲ್ಲ. ಜೆಡಿಎಸ್​ ರಾಜ್ಯಾಧ್ಯಕ್ಷ ಇಬ್ರಾಹಿಂ, ಮುಖಂಡರಾದ ಬಂಡೆಪ್ಪ ಕಾಶೆಂಪುರ, ಸುರೇಶ್​ಗೌಡ, ನಾಡಗೌಡ, ಗೌರೀಶಂಕರ್​, ಪುಟ್ಟರಾಜು, ಸಾ.ರಾ.ಮಹೇಶ್​, ಜೆ.ಕೆ.ರೆಡ್ಡಿ ಅವರನ್ನು ತೊಡಗಿಸಿಕೊಂಡು ಜನತಾಮಿತ್ರ ನಡೆಸಲಾಗುವುದು. ಅಭಿಯಾನ ಪೂರ್ಣಗೊಂಡ 10-15 ದಿನದ ಬಳಿಕ ಬೃಹತ್​ ಸಮಾವೇಶ ಆಯೋಜಿಸಲಾಗುತ್ತದೆ.|ತಿಪ್ಪೇಸ್ವಾಮಿವಿಧಾನ ಪರಿಷತ್​ ಸದಸ್ಯ
ನನ್ನ ಸೂರಿ ಸಿಕ್ಕುದ್ನಾ ಸಾರ್​… 6 ವರ್ಷದ ಹಿಂದೆ ಪ್ರೀತಿಸಿ ಮದ್ವೆ ಆಗಿದ್ದವರ ಬಾಳಲ್ಲಿ ದುರಂತ, ಮನಕಲಕುತ್ತೆ ಪತ್ನಿಯ ಗೋಳಾಟ

ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
