ಮಂಡ್ಯ:ಹಣ ಇದ್ರಷ್ಟೇ ಜೆಡಿಎಸ್​ ಟಿಕೆಟ್ ಸಿಗುತ್ತೆ, ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತೆ ಎಂದು ಬಹಿರಂಗವಾಗಿಯೇ ಎಚ್​.ಡಿ. ದೇವೇಗೌಡ ಮತ್ತು ಎಚ್​.ಡಿ.ಕುಮಾರಸ್ವಾಮಿ ವಿರದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ ಎಂಎಲ್​ಸಿ ಮರಿತಿಬ್ಬೇಗೌಡ, ನಾನು ಜೆಡಿಎಸ್​ ಅಭ್ಯರ್ಥಿ ಪರವಾಗಿ ಮತ ಕೇಳೋದಿಲ್ಲ ಎಂದಿದ್ದಾರೆ. ಆ ಮೂಲಕ ಜೆಡಿಎಸ್​ನಿಂದ ಹೊರ ಹೋಗುವ ಮುನ್ಸೂಚನೆ ಕೊಟ್ಟಿದ್ದಾರೆ.
ಜೆಡಿಎಸ್​ ನಾಯಕರ ನಡೆ ಬಗ್ಗೆ ನನಗೆ ಬಹಳ ಬೇಸರವಾಗಿದೆ. ಇದು ಈಗಿನಿಂದಲ್ಲ, ನಾಲ್ಕಾರು ವರ್ಷದಿಂದ ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ ಸಂಘಟನೆ, ಕಾರ್ಯಕರ್ತರ ಬಗ್ಗೆ ನಾಯಕರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಬಗ್ಗೆ ಕೆಟ್ಟ ನಿರ್ಧಾರ ತೆಗೆದುಕೊಳ್ಳಾರೆ ಅಂತ ನಾನು ಬಯಸಿರಲಿಲ್ಲ. ಜಯರಾಂ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಟಿಕೆಟ್ ಬೇಡ ಅಂದ್ರು. ರಾಮು ಒಂದೇ ದಿನವೂ ಪಕ್ಷ ಬಾವುಟ ಹಿಡಿದಿಲ್ಲ, ಪಕ್ಷಕ್ಕಾಗಿ ದುಡಿದಿಲ್ಲ. ಹಣ ಇದೆ ಎಂಬ ಕಾರಣಕ್ಕೆ ರಾಮುಗೆ ಟಿಕೆಟ್ ನೀಡಿದ್ದಾರೆ. ಜೆಡಿಎಸ್​ ನಾಯಕರ ಕೆಟ್ಟ ನಿರ್ಧಾರಕ್ಕೆ ನನ್ನ ಬೆಂಬಲ ಕೊಡಲ್ಲ. ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಕೇಳೋದಿಲ್ಲ. ಯಾರಿಗೆ ಚುನಾವಣೆ ಮಾಡಬೇಕು ಅಂತ ನೋಟಿಫಿಕೇಷನ್ ಬಳಿಕ ತೀರ್ಮಾನ ಮಾಡ್ತೀವಿ ಎಂದರು.
ದೇವೇಗೌಡ ಮತ್ತು ನಿಖಿಲ್ ಸೋಲಿಗೆ ಯಾವ ಶಾಸಕರು ಮತ್ತು ಕಾರ್ಯಕರ್ತರು ಕಾರಣ ಅಲ್ಲ. ಕುಟುಂಬದ ತೀರ್ಮಾನದಿಂದಲೇ ದೇವೇಗೌಡ-ನಿಖಿಲ್​ಗೆ ಸೋಲಾಯ್ತು. ನಿಖಿಲ್ ಸೋಲಿಗೆ ಮಂಡ್ಯ ಜಿಲ್ಲೆ ಶಾಸಕರು ಕಾರಣ ಎಂಬುದು ಸುಳ್ಳು. ಮಂಡ್ಯ ಶಾಸಕರು ಕೈಕೊಟ್ಟಿದ್ರೆ 5 ಲಕ್ಷಕ್ಕೂ ಅಧಿಕ ಮತ ಬರುತ್ತಿರಲಿಲ್ಲ. ನಿಖಿಲ್ ಸ್ಪರ್ಧೆ ಬೇಡ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್​ ಕೊಡಿ ಎಂದು ಆರಂಭದಲ್ಲೇ ಹೇಳಿದ್ದೆ. ಇದಕ್ಕೆ ಯಾರು ಧ್ವನಿಗೂಡಿಸಲಿಲ್ಲ ಎಂದು ಮರಿತಿಬ್ಬೇಗೌಡ ಅಸಮಾಧಾನ ಹೊರಹಾಕಿದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಕೀಲಾರ ಜಯರಾಂಗೆ ಟಿಕೆಟ್ ನೀಡಲಿಲ್ಲ ಎಂದು ಮರಿತಿಬ್ಬೇಗೌಡ ಗರಂ ಆಗಿದ್ದಾರೆ.
ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ತಾಯಿ-ಮಗು ಸೇರಿ ಮೂವರ ದುರ್ಮರಣ

ವಿಶ್ವನಾಥ ದೇಗುಲ ಬಳಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಶುರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
