ತುಮಕೂರು:ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಬಗೆದಷ್ಟು ಆಳ ಎಂಬಂತೆ ಅಕ್ರಮ ಬಯಲಾಗುತ್ತಿದೆ. ಇದೀಗ ತುಮಕೂರಲ್ಲಿ ಖತರ್ನಾಕ್​ ದಂಪತಿಯ ಮಹಾ ವಂಚನೆ ಬಯಲಾಗಿದೆ.
2019ರಲ್ಲಿ ಪೊಲೀಸ್​ ಇಲಾಖೆಯಿಂದ ವಜಾಗೊಂಡಿದ್ದ ಮಹೇಶ್​ ಹಾಗೂ ಆತನ ಪತ್ನಿ ಸುಧಾ ನೂರಾರು ಜನರಿಗೆ ವಂಚಿಸಿರುವುದು ದೃಢವಾಗಿದ್ದು, ಜಯನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾದ ಕೂಡಲೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಯುವಜನರನ್ನು ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದಾರೆ. 150ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಒಬ್ಬೊಬ್ಬರಿಂದಲೂ 2ರಿಂದ 5 ಲಕ್ಷ ರೂ. ವರೆಗೂ ಹಣ ಪಡೆದು ವಂಚಿಸಿರುವ ಬಗ್ಗೆ ಮಹೇಶ್​ ಮತ್ತು ಸುಧಾ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ತಾಲೂಕು ಎಲೆರಾಂಪುರ ಮೂಲದ ಮಹೇಶ್​, ಪೊಲೀಸ್​ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ತಿಪಟೂರು, ಪಾವಗಡ, ಕೊರಟಗೆರೆಯಲ್ಲಿ ಕೆಲಸ ಮಾಡಿದ್ದ ಮಹೇಶ್​, ತುಮಕೂರು ನಗರದ ತಿಲಕ್​ಪಾರ್ಕ್​ ಠಾಣೆಯಲ್ಲಿ ಹೆಡ್​ ಕಾನ್​ಸ್ಟೆಬಲ್​ ಆಗಿದ್ದರು. ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ 2019ರಲ್ಲೇ ಇವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಪೊಲೀಸ್​ ಇಲಾಖೆಯಲ್ಲಿದ್ದಾಗಲೇ ಬ್ಯಾಂಕ್​ಗಳಲ್ಲಿ ಸಾಲ ಕೊಡಿಸುತ್ತೇನೆ ಎಂದು ಸಾಕಷ್ಟು ಜನರಿಗೆ ಮಹೇಶ್​ ವಂಚಿಸಿದ್ದ ಎನ್ನಲಾಗಿದ್ದು, ಕೆಲಸ ಕಳೆದುಕೊಂಡ ನಂತರವೂ ನಂಬಿಕೆ ದ್ರೋಹದ ಕೆಲಸ ಮುಂದುವರಿಸಿದ್ದ ಎಂದು ದೂರಲಾಗಿದೆ.
ಮಹೇಶ್​ ಪತ್ನಿ ಸುಧಾ ಮಹಿಳೆಯರನ್ನೇ ಗುರಿಯಾಗಿಸಿಕೊಂಡರೆ, ಮಹೇಶ್​ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ನಂಬಿಸಿ 150ಕ್ಕೂ ಹೆಚ್ಚು ಜನರಿಗೆ ಕೆಲಸದ ಆಮಿಷವೊಡ್ಡಿ 2 ಕೋಟಿ ರೂ. ವಸೂಲಿ ಮಾಡಿದ್ದಾ ಮಾಡಿದ್ದಾನೆ ಎನ್ನಲಾಗಿದೆ. ಕೆಲಸ ಕೊಡಿಸದೆ ಸತಾಯಿಸಿದ್ದರಿಂದ ಹಣ ವಾಪಸ್​ ಕೇಳಿದವರಿಗೆ ಚೆಕ್​ ನೀಡಿ ಅದರಲ್ಲಿಯೂ ವಂಚಿಸಿದ್ದು, ನೂರಾರು ಜನ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ವಾಸವಿದ್ದ ಮನೆಯ ತೋರಿಸಿ ಲೀಸ್​ ಹಾಕುವುದಾಗಿ ಮೂವರಿಗೆ ವಂಚಿಸಿದ್ದಾನೆ.
ವಾಸವಿದ್ದ ಮನೆಯೇ ಮೂವರಿಗೆ ಲೀಸ್​!:ಆರೋಪಿ ಮಹೇಶ್​ ವಾಸವಿದ್ದ ಜಯನಗರದ ಮನೆಯನ್ನು ಮೂವರು ಜನರಿಗೆ ಲೀಸ್​ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ. ಮುಂದಿನ ತಿಂಗಳು ನಾನು ಬೇರೆ ಮನೆಗೆ ಶಿಫ್ಟ್​ ಆಗುತ್ತೇನೆ ಎಂದು ನಂಬಿಸಿ ಮೂವರಿಂದ ಹಣ ಪಡೆದು ವಂಚಿಸಿದ್ದಾನೆ. ಮೂರು ತಿಂಗಳಲ್ಲಿ ಖಾಲಿ ಮಾಡುವೆ ಎಂದೇಳಿ ಒಬ್ಬರಿಂದ 5 ಲಕ್ಷ ರೂ., 15 ದಿನದಲ್ಲಿ ಖಾಲಿ ಮಾಡುತ್ತೇನೆ ಎಂದು ಮತ್ತೊಬ್ಬರಿಂದ 7 ಲಕ್ಷ ರೂ. ಹಾಗೂ ಮೂರು ದಿನದಲ್ಲಿ ಖಾಲಿ ಮಾಡುತ್ತೇನೆ ಎಂದೇಳಿ 9 ಲಕ್ಷ ರೂಪಾಯಿ… ಹೀಗೆ ಮೂವರಿಗೂ ಲೀಸ್​ ಒಡಂಬಡಿಕೆ ಮಾಡಿಕೊಟ್ಟು ಪತ್ನಿ, ಮಕ್ಕಳ ಸಮೇತ ಪರಾರಿಯಾಗಿದ್ದಾನೆ.
ಮೋಸ ಹೋದವರು ದೂರು ನೀಡಲು ಬಂದು ವಾಪಸ್​ ಹೋಗಿದ್ದರು. ಈಗ ಮತ್ತೆ ಬಂದು ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ. ಮೋಸ ಹೋದವರು ಇದ್ದರೆ ಠಾಣೆಗೆ ಬಂದು ದೂರು ನೀಡಬಹುದು.| ರಾಹುಲ್​ಕುಮಾರ್​ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ
33 ವರ್ಷದ ಪುರುಷನಿಗೂ ಪಿರಿಯಡ್ಸ್​! ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಆಘಾತ…
ತವರು ಜಿಲ್ಲೆ ತುಮಕೂರಿಗೆ ಆಗಮಿಸಿದ ಕೆನಡಾ ಸಂಸದ ಚಂದ್ರ ಆರ್ಯ: ಹುಟ್ಟೂರಲ್ಲಿ ಗ್ರಾಮಸ್ಥರ ಜತೆ ಮಾತುಕತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 3 =
Remember me
