ರಾಮನಗರ:‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಫೈಟ್​ ಅಸಿಸ್ಟೆಂಟರ್​ ವಿವೇಕ್​(35) ಮೃತಪಟ್ಟ ಪ್ರಕರಣ ಸಂಬಂಧ, ಸಿನಿಮಾ ನಿರ್ದೇಶಕ ಸೇರಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿರ್ದೇಶಕ ಶಂಕರ್. ಕ್ರೇನ್ ಚಾಲಕ ಮಹದೇವ್, ಫೈಟ್ ಮಾಸ್ಟರ್ ವಿನೋದ್ ಅವರನ್ನು ಆ.24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಲಾಗಿದೆ. ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ ‘ಲವ್​ ಯೂ ರಚ್ಚು’ ಕನ್ನಡ ಸಿನಿಮಾ ಶೂಟಿಂಗ್ ರಾಮನಗರದ ಬಿಡದಿ ಹೋಬಳಿಯ ಜೋಗರಪಾಳ್ಯದಲ್ಲಿ 5 ದಿನಗಳಿಂದ ನಡೆದಿತ್ತು. ಶೂಟಿಂಗ್​ನ ಕೊನೇ ದಿನವಾದ ಸೋಮವಾರ ಸಾಹಸದ ದೃಶ್ಯ ಚಿತ್ರೀಕರಣ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್​ ತಮಿಳುನಾಡು ಮೂಲದ ​ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬ ರಂಜಿತ್​ಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಚಿತ್ರೀಕರಣ ವೇಳೆ ಮೆಟಲ್​ ರೋಪ್​ ಬಳಸಿದ್ದೇ ಅವಘಡಕ್ಕೆ ಕಾರಣ. ಹೈಟೆನ್ಷನ್​ ತಂತಿಗೆ ರೋಪ್​ ತಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡ ಸಂಭವಿಸುತ್ತದ್ದಂತೆ ಚಿತ್ರೀಕರಣ ನಿಲ್ಲಿಸಲಾಗಿದೆ. ಇತ್ತ ಸಿನಿಮಾ ನಿರ್ಮಾಪಕ ಗುರುದೇಶಪಾಂಡೆ​ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಇನ್ನು ಆರೋಪಿಗಳಾದ ಶಂಕರಯ್ಯ, ವಿನೋದ್ ಕುಮಾರ್, ಮಹದೇವ್ ಅವರನ್ನು ಮಂಗಳವಾರ ಬೆಳಗ್ಗೆ ರಾಮನಗರ ಸಿವಿಲ್ ನ್ಯಾಯಾಲಯಕ್ಕೆ ಬಿಡದಿ ಠಾಣೆ ಪಿಎಸ್ಐ ಭಾಸ್ಕರ್ ಕರೆತಂದಿದ್ದರು. ಈ ಮೂವರಿಗೆ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಅವರು 14 ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Sign in to your account
Please enter an answer in digits:two × three =
Remember me
