ಬೆಂಗಳೂರು:ಕರೊನಾ ಪರಿಕರಗಳ ಖರೀದಿ ಹಗರಣ ನ್ಯಾಯಾಂಗ ತನಿಖೆ ಆಗಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಮಾತನಾಡಿ, ನಾವು ಕರೊನಾ ಪರಿಕರ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದಾಗ 5-6 ಸಚಿವರು ವೀರಾವೇಶದ ಮಾತನ್ನಾಡಿದರು. ಅವ್ಯವಹಾರ ಸಾಬೀತಾದರೆ ರಾಜೀನಾಮೆ ಕೊಡುತ್ತೇನೆಂದು ಶ್ರೀರಾಮುಲು ಹೇಳಿದರು. ಲಾಕ್​ಡೌನ್ ಅವಧಿಯಲ್ಲಿ ರೈತರು, ಕಾರ್ವಿುಕರು, ಬಡವರ ಬದುಕು ಬರ್ಬಾದ್ ಆಗಿತ್ತು. ಆದರೆ, ರಾಮುಲು ಮತ್ತು ಸುಧಾಕರ್ ನಡುವೆ ಸೆಣಸಾಟ ನಡೆಯುತ್ತಿತ್ತು. ಸರ್ಕಾರದಲ್ಲಿ ಸಮನ್ವಯತೆಯೇ ಇರಲಿಲ್ಲ ಎಂದು ಟೀಕಿಸಿದರು.
ಪ್ಯಾಕೇಜ್ ಕಣ್ಣೊರೆಸುವ ತಂತ್ರ:ಸರ್ಕಾರ 2100 ಕೋಟಿ ರೂ. ಪ್ಯಾಕೇಜ್ ಘೊಷಣೆ ಮಾಡಿದೆ. ಯಾರಿಗೆ? ಎಷ್ಟು ತಲುಪಿದೆ? ಎಂದು ಕೇಳಿದರು. ನಾನಾಗಿದ್ದರೆ ಬಡವರು, ಕಾರ್ವಿುಕರು, ಆಟೋ ಟ್ಯಾಕ್ಸಿ ಚಾಲಕರು, ರೈತ ಕಾರ್ವಿುಕರಿಗೆ ತಲಾ 10 ಸಾವಿರ ರೂ. ಪರಿಹಾರ ಕೊಡುತ್ತಿದ್ದೆ. ಹಣ್ಣು, ತರಕಾರಿ, ಹೂ ಬೆಳೆಗಾರರು, ಬಡಗಿ, ರ್ದಜಿ, ಮಡಿವಾಳ, ವಿಶ್ವಕರ್ಮ, ಬೀದಿಬದಿ ವ್ಯಾಪಾರಿಗಳು ಹೀಗೆ ಯಾರಿಗೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. 2.35 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ನಾವು 10 ಸಾವಿರ ಕೋಟಿ ರೂ. ಸಾಲ ಮಾಡಿಯಾದರೂ ಈ ವರ್ಗದ ನೆರವಿಗೆ ಬರಬೇಕಿತ್ತು ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು. 34 ಸಾವಿರ ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿತ್ತು. ಒಂದೊಂದಕ್ಕೆ 70 ಸಾವಿರ ರೂ. ಖರ್ಚು ಮಾಡಿದ್ದಾರೆ. ಕರೊನಾ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಂಪೂರ್ಣ ವಿಫಲವಾಗಿವೆ. ಕರೊನಾ ವಿಚಾರದಲ್ಲಾದ ಅವ್ಯವಹಾರ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ನಾರಾಯಣ ರಾವ್ ಪರ ಪ್ರಾರ್ಥನೆ:ಕರೊನಾ ಸೋಂಕಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು. ನಾರಾಯಣ್ ರಾವ್ ಆಸ್ಪತ್ರೆಯಲ್ಲಿದ್ದು, ಅವರ ಶ್ವಾಸಕೋಶ ಮಸಲ್ ವೀಕ್ ಆಗಿದೆ. ಚೇತರಿಕೆ ಕಾಣಿಸುತ್ತಿದ್ದರೂ, ಸ್ವತಂತ್ರವಾಗಿ ಉಸಿರಾಡುವವರೆಗೂ ಏನೂ ಹೇಳುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದಷ್ಟು ಶೀಘ್ರವಾಗಿ ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಇದು ಸೋಂಕಿತ ಸರ್ಕಾರ
ಸರ್ಕಾರದ ವತಿಯಿಂದ ಫುಡ್ಕಿಟ್ ವಿತರಣೆಯಲ್ಲೂ ರಾಜಕೀಯ ಮಾಡಲಾಗಿದೆ. ಸರ್ಕಾರದ ಅಕ್ಕಿ ಪಾಕೆಟ್ ಮೇಲೆ ಬಿಜೆಪಿ ನಾಯಕರು ತಮ್ಮ ಫೋಟೋ ಹಾಕಿಸಿಕೊಂಡಿದ್ದಾರೆ. ನಾನು ಇದನ್ನು ಬಹಿರಂಗ ಪಡಿಸಿದೆ. ಇದರ ಬಗ್ಗೆ ಒಂದಾದರೂ ಪ್ರಕರಣ ದಾಖಲಾಯಿತೇ? ತನಿಖೆ ಆಗಿದೆಯೇ? ತಪ್ಪಿತಸ್ಥರಿಗೆ ಶಿಕ್ಷೆ ಆಗಿದೆಯೇ ಎಂದು ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದರು. ಬಡವರು, ಕಾರ್ವಿುಕರು, ಇತರರಿಗೆ ಘೊಷಿಸಿದ 5 ಸಾವಿರ ರೂ. ಪರಿಹಾರ ಕೊಡಲು ಎಷ್ಟು ದಿನ ಬೇಕು? ಹೆಣ ಹೋದ ಮೇಲೆ ದುಡ್ಡು ಕೊಡುತ್ತೀರಾ? ಆರು ತಿಂಗಳಾದರೂ 5 ಸಾವಿರ ರೂ. ಪರಿಹಾರ ಕೊಡದೆ ಇದ್ದರೆ ಹೇಗೆ? ಸರ್ಕಾರ ಕರೊನಾ ಬಾಧಿತರ ರಕ್ಷೆಯಲ್ಲಿ ಫೇಲ್ ಆಗಿದೆ. ಇದು ಸೋಂಕಿತ ಸರ್ಕಾರ ಎಂದು ಹರಿಹಾಯ್ದರು.
ಸಿದ್ದು ಎತ್ತಿದ ಪ್ರಶ್ನೆಗಳು
2. ಮಾರುಕಟ್ಟೆಯಲ್ಲಿ 45-50 ರೂ.ಗೆ ಸಿಗುವ ಮಾಸ್ಕ್ ಅನ್ನು 147 ರೂ.ನಿಂದ 156 ರೂ.ವರೆಗೆ ನೀಡಿ ಖರೀದಿಸಿದ್ದಾರೆ. ಇದು ಯಾವ ಲೆಕ್ಕ?
3. ಸರ್ಜಿಕಲ್ ಗ್ಲೌಸನ್ನು 9.50 ರೂ.ನಿಂದ 11.4 ರೂ.ನಂತೆ ಖರೀದಿ ಏಕೆ?
4. 1500-2000 ರೂ.ಗೆ ಸಿಗುವ ಥರ್ಮಲ್ ಸ್ಕಾ್ಯನರನ್ನು -ಠಿ;5945 ಕೊಟ್ಟು ಖರೀದಿಸಿದ್ದೇಕೆ?
5. ಸ್ಟೀಲ್ ಫರ್ನಿಚರ್, ಆಗ್ರೋ ಇಂಡಸ್ಟ್ರಿಯಿಂದ ವೈದ್ಯಕೀಯ ಉಪಕರಣ ಖರೀದಿ ಮಾಡಿದ್ದೇಕೆ?
ಡೆತ್ ಆಡಿಟ್ ಬೇಡವೇ?
ಡಿ.ಕೆ. ಶಿವಕುಮಾರ್ ಮಾತಿಗೆ ದನಿ ಗೂಡಿಸಿದ ಪಿಎಸಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಲಿಕ್ವಿಡ್ ಆಕ್ಸಿಜನ್ ಅನ್ನು ಆಂಧ್ರ, ತೆಲಂಗಾಣ, ಪುದುಚೇರಿಗೆ ಕಳುಹಿಸುತ್ತೀರಿ. ನಮ್ಮ ಜನ ಇಲ್ಲಿ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ. ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. 2020ರ ಜನವರಿಯಿಂದ ಜುಲೈ ಅಂತ್ಯದವರೆಗೆ ಬೆಂಗಳೂರಿನಲ್ಲಿ 49,135 ಸಾವು ಸಂಭವಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 37 ಸಾವಿರ ಜನ ಸಾವಿಗೀಡಾಗಿದ್ದರು. 12 ಸಾವಿರದಷ್ಟು ಹೆಚ್ಚುವರಿ ಸಾವು ಹೇಗಾಯಿತು? ಈ ಸಾವು ಯಾವುವು? ಇದು ಕರೊನಾ ಸಾವು ಮುಚ್ಚಿಡಲು ನಡೆಸಿದ ಷಡ್ಯಂತ್ರವೆ? ನಿಮ್ಮ ಅಂಕಿ-ಅಂಶ ಎಲ್ಲ ರಾಂಗ್ ಆಗಿವೆ. ಹಾಗಾಗಿ ಡೆತ್ ಆಡಿಟ್ ಆಗಬಾರದೆ ಎಂದು ಕೆಣಕಿದರು.
ನಾನು ದೀಪ ಬೆಳಗಲಿಲ್ಲಪ್ಪಾ
ಕರೊನಾ ಓಡಿಸಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂದರು. ನಾನು ಚಪ್ಪಾಳೆ ತಟ್ಟಿದರೆ ಹೋಗಿ ಬಿಡುತ್ತೇನೋ ಅಂದ್ಕೊಂಡಿದ್ದೆ. ಅದ್ರಲ್ಲಿ ಏನೋ ದೈವಿಕ ಶಕ್ತಿ ಇದೆ ಅಂದುಕೊಂಡಿದ್ದೆ. ನಾನು ಮಾತ್ರ ಚಪ್ಪಾಳೆ ತಟ್ಟಲಿಲ್ಲಪ್ಪ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ’ನಮ್ಮವರೂ ಕೆಲವರು ದೀಪ ಹಚ್ಚಿಟ್ಟರು. ನೀವು ಹಚ್ಚಿ ಇಟ್ಟರೆ ಕರೊನಾ ಓಡಿ ಹೋಗುತ್ತಿತ್ತು’ ಎಂದು ಸಿಎಂ ಯಡಿಯೂರಪ್ಪ ಕಾಲೆಳೆದರು.
ಲೀಗಲ್ ನೋಟಿಸ್​ಗೆ ಹೆದರಲ್ಲ
ಕರೊನಾ ಅವ್ಯವಹಾರ ಕುರಿತು ಟೀಕೆ ಮಾಡಿದ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್ ಕಳಿಸಿದ ವಿಧಾನಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದರು. ಈ ವಿಚಾರ ಮಾತನಾಡಿದರೆ ಲೀಗಲ್ ನೋಟಿಸ್ ಕೊಡುತ್ತಾರೆ, ಕೊಡಲಿ. ಕಾಂಗ್ರೆಸ್ ಹೆದರಲ್ಲ. ರಾಜಕೀಯದಲ್ಲಿ ಇಂಥದ್ದೆಲ್ಲ ಬಹಳ ನೋಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ದೊಡ್ಡ ದನಿಯಲ್ಲಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
