ಕಲಬುರಗಿ:ಕರ್ನಾಟಕ-ಮಹಾರಾಷ್ಟ್ರ ಗಡಿಯ ತೋರ್ಲೆವಾಡಿ ಬಳಿ ಜಮೀನಿನಲ್ಲಿ ಗಾಂಜಾ ಗ್ಯಾಂಗ್​ನಿಂದ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಗ್ರಾಮೀಣ ಪೊಲೀಸ್​ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಿಂದ ಏರ್​ಲಿಫ್ಟ್​ ಮೂಲಕ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಸೋಮವಾರ ಬೆಳಗ್ಗೆ ಸ್ಥಳಾಂತರಿಸಲಾಯಿತು.
ಮಹಾರಾಷ್ಟ್ರದ ತರಲೆವಾಡಿ ಗ್ರಾಮದ ಬಳಿ ಗಾಂಜಾ ಮಾಫಿಯಾದ ಮೇಲೆ ದಾಳಿ ಮಾಡಲು ಹೋದಾಗ ಕಿಡಿಗೇಡಿಗಳು ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೊರಾಡುತ್ತಿರುವ ಇಲ್ಲಾಳ ಅವರನ್ನು ಕಲಬುರಗಿ ನಗರದ ಯುನೈಟೆಡ್​ ಆಸ್ಪತ್ರೆ ಐಸಿಯುನಲ್ಲಿ ಪರಿಣತ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಶನಿವಾರಕ್ಕಿಂತಲೂ ಭಾನುವಾರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದರೂ ಕುಟುಂಬದವರ ಒತ್ತಾಸೆಯಂತೆ ಇಲ್ಲಾಳ ಅವರನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಸಾಗಿಸಲು ಜಿಲ್ಲಾ ಮತ್ತು ನಗರ ಪೊಲೀಸರು ನಿರ್ಧರಿಸಿ ಕರೆದೊಯ್ದಿದ್ದಾರೆ.
ಆಸ್ಪತ್ರೆಯಿಂದ ಕಲಬುರಗಿ ವಿಮಾನ ನಿಲ್ದಾಣದವರೆಗೂ ಝಿರೋ ಟ್ರಾಫಿಕ್ ಮೂಲಕ ಏರ್ ಪೋರ್ಟ್​ಗೆ ಆಂಬುಲೆನ್ಸ್​ನ್ಲಲಿ ಕರೆತರಲಾಯಿತು. ಮೂವರು ವೈದ್ಯರು ಹಾಗೂ ಶ್ರೀಮಂತ ಇಲ್ಲಾಳ ಅವರ ಪತ್ನಿ, ಪುತ್ರ ಕೂಡ ಏರ್ ಆಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಆಗಮಿಸಿದರು. ಏರ್ ಲಿಫ್ಟ್ ಸೇರಿ ಇಡೀ ಚಿಕಿತ್ಸಾ ವೆಚ್ಚವನ್ನು ಪೊಲೀಸ್ ಇಲಾಖೆಯೇ ಭರಿಸಲಿದೆ.
ಜಿಲ್ಲಾಧಿಕಾರಿ ಯಶವಂತ ಗುರುಕರ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಶಾ ಪಂತ್​ ಹಾಗೂ ನಗರ ಪೊಲೀಸ್​ ಆಯುಕ್ತ ಡಾ.ರವಿಕುಮಾರ ವೈ.ಎಸ್​. ಕೋರಿಕೆಯಂತೆ ಕೇರಳದ ಕೊಚ್ಚಿಯಿಂದ ವಿಶೇಷ ಏರ್​ ಆಂಬುಲೆನ್ಸ್​ ಅನ್ನು ಸರ್ಕಾರ ಭಾನುವಾರ ಸಂಜೆಯೇ ಕಲಬುರಗಿಗೆ ಕಳುಹಿಸಿತ್ತು.
ಮಹಾಲಯ ಅಮಾವಸ್ಯೆ ದಿನದಂದೇ ಭೀಕರ ಅಪಘಾತ: ಎಎಸ್​ಐ ಪತ್ನಿ-ಮಗಳು ಸೇರಿ ನಾಲ್ವರು ದುರ್ಮರಣ

ದಸರಾಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು: ಸಾಂಸ್ಕೃತಿಕ ಸಿರಿ- ಧಾರ್ಮಿಕ ಐಸಿರಿಯ ಸಮ್ಮಿಲನ… ಕಳೆಗಟ್ಟಲಿದೆ ನವೋಲ್ಲಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
