ಮಂಡ್ಯ:ನಿಮ್ಮ ಪ್ರತಾಪಕ್ಕೆ ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಋಷಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆಗೆ ಸಹಿ ಹಾಕಲು ಕಾಳಿ ಮಠದ ಸ್ವಾಮಿ ಸೋಮವಾರ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ನಾನು ನಿಮ್ಮ ಗಣಿಗಾರಿಕೆ ವಿಚಾರಕ್ಕೆ ಬರುವುದಿಲ್ಲ. ಹಾಗಾಗಿ ನೀವು ಹೆದರುವುದು ಬೇಡ ಎಂದು ರವೀಂದ್ರ ಶ್ರೀಕಂಠಯ್ಯಗೆ ಟಾಂಗ್​ ಕೊಟ್ಟರು.
‘ಋಷಿಕುಮಾರಸ್ವಾಮಿ ಸ್ವಾಮೀಜಿ ಅಲ್ಲ’ ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಕಾಳಿ ಮಠದ ಸ್ವಾಮಿ, ನಾನು ಸ್ವಾಮೀಜಿ ಅಲ್ಲ ಎಂದು ನನಗೆ ಸರ್ಟಿಫಿಕೇಟ್ ಕೊಡುವುದು ಬೇಡ. ಅದರ ಬದಲು ತಮ್ಮ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿ. ಅವರ ಪ್ರತಾಪಗಳಿಗೆ ಹೆದರಿ ಓಡಿಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲ ಎಂದರು.(ದಿಗ್ವಿಜಯ ನ್ಯೂಸ್​)
ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ… ಎಂದು ಪುನರುಚ್ಚರಿಸುತ್ತಲೇ ಬುರ್ಖಾ ನಿಷೇಧಕ್ಕೂ ಆಗ್ರಹಿಸಿದ ಕಾಳಿ ಮಠ ಸ್ವಾಮಿ

ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eleven =
Remember me
