ಬೆಂಗಳೂರು:ಕಾಮಧೇನು ಕ್ರೆಡಿಟ್​ ಕೋ ಆಪರೇಟೀವ್​ ಸೊಸೈಟಿ ಅಧ್ಯಕ್ಷ ಬಿ.ಎಂ.ರಾಮಕೃಷ್ಣ (55) ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೊಮ್ಮನಹಳ್ಳಿ ಹಳೇ ಕೆಇಬಿ ರಸ್ತೆ ಬಿಬಿಎಂಪಿ ಕಚೇರಿ ಹಿಂಭಾಗ 5 ವರ್ಷದ ಹಿಂದೆ ಕಾಮಧೇನು ಕ್ರೆಡಿಟ್​ ಕೋ ಆಪರೇಟೀವ್​ ಸೊಸೈಟಿ ತೆರೆಯಲಾಗಿತ್ತು. ಹೂಡಿಕೆದಾರರಿಗೆ ಹಣ ಮರುಪಾವತಿಸಲು ಸಾಧ್ಯವಾಗದೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳದಲ್ಲಿ ಮರಣಪತ್ರ ಸಿಕ್ಕಿದೆ.
ಭಾನುವಾರ ಕಚೇರಿಗೆ ರಜೆಯಿದ್ದ ಹಿನ್ನೆಲೆ ಕಚೇರಿಗೆ ಬಂದಿರುವ ರಾಮಕೃಷ್ಣ, ಸೀಲಿಂಗ್​ ಫ್ಯಾನ್​ಗೆ ಹಗ್ಗ ಕಟ್ಟಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರನೇ ದಿನ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಮರಣಪತ್ರ ಸಿಕ್ಕಿದೆ. ‘ಸಂಸ್ಥೆಯ ಹಿಂದಿನ ಸಿಇಒ ಗಂಗಾಧರ್​, ಮ್ಯಾನೇಜರ್​ ಮತ್ತು ಪಿಗ್ಮಿ ವಸೂಲಿ ಮಾಡುತ್ತಿದ್ದ ಯೋಗೇಶ್​ ಸೇರಿಕೊಂಡು ಸಂಸ್ಥೆಯ 60 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದಾರೆ. ಸಾಲಗಳು ವಸೂಲಿಯಾಗದೆ, ಹೂಡಿಕೆದಾರರಿಗೆ ಹಣ ಮರುಪಾವತಿಗೆ ಸಾಧ್ಯವಾಗದೆ ಹೂಡಿಕೆದಾರರಿಗೆ ಮೋಸವಾಗಿದೆ. ನನ್ನ ಆತ್ಮಹತ್ಯೆಗೆ ಗಂಗಾಧರ್, ನರೇಶ್​ ಮತ್ತು ಯೋಗೇಶ್​ ಕಾರಣ’ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…

ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + one =
Remember me
