ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್​ ರಾವ್​ ಮಂಗಳವಾರ ಮಧ್ಯರಾತ್ರಿ ನಿಧನರಾದರು.
ಇತ್ತೀಚಿಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಶೋಕ್​ ರಾವ್​ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರವೂ ಚಿಕಿತ್ಸೆ ಪಡೆದಿದ್ದರು. ರಾತ್ರಿವರೆಗೂ ಚೆನ್ನಾಗಿಯೇ ಇದ್ದರು. ರಾತ್ರಿ 12.30ರ ಸುಮಾರಿಗೆ ಕೊನೆಯುಸಿರೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರಿಗೆ ಪತ್ನಿ, ಮಗ-ಸೊಸೆ ಇದ್ದಾರೆ.
ಡಾ. ರಾಜ್​ಕುಮಾರ್​ ಅಭಿನಯದ ‘ಪರಶುರಾಮ್​’ ಸಿನಿಮಾದಲ್ಲಿ ವಿಲನ್​ ಪಾತ್ರ ನಿರ್ವಹಿಸಿದ್ದ ಅಶೋಕ್​ ರಾವ್​, ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​, ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ರವಿಚಂದ್ರನ್​, ಮಾಲಾಶ್ರೀ, ಜಗ್ಗೇಶ್​, ದೇವರಾಜ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜತೆ ಬಣ್ಣ ಹಚ್ಚಿದ್ದಾರೆ. ಪರಶುರಾಮ್​ ಚಿತ್ರ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.
ವಸುಂಧರಾ, ಬ್ರಹ್ಮ, ಶತ್ರು, ಮುಗಿಲ ಚುಂಬನ, ರಾಣಾ ಪ್ರತಾಪ್​, ಬಾಸ್​, ಪೊಲೀಸ್​ ಕಥೆ, ಜೇಡ್ರಳ್ಳಿ, ಕೃಷ್ಣನ್​ ಲವ್​ ಸ್ಟೋರಿ, ಯುವ, ಮನಸಾರೆ, ಬೊಂಬಾಟ್​, ಅರ್ಜುನ್​, ಸಂಗಾತಿ, ಸಜನಿ, ಸೌಂದರ್ಯ, ಮಾತಾಡ್​ ಮಾತಾಡ್​ ಮಲ್ಲಿಗೆ, ತವರಿನ ಸಿರಿ, ತಿರುಪತಿ, ಸೈನೈಡ್​, ಸಿರಿವಂತ,ರಿಷಿ, ಆಟೋ ಶಂಕರ್​, ಪ್ರೇಮ ಖೈದಿ, ಸೈನಿಕ, ಹಬ್ಬ, ಓ ಪ್ರೇಮವೇ, ಸ್ನೇಹ, ಶೃಂಗಾರ ಕಾವ್ಯ, ಬಾ ನಲ್ಲೆ ಮಧುಚಂದ್ರಕೆ… ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಶೋಕ್​ ರಾವ್​ ನಟಿಸಿದ್ದಾರೆ.
ಬೆಂಗಳೂರಲ್ಲಿ ರೋಗಿಯ ಪ್ರಾಣ ಉಳಿಸಲು ಸ್ವತಃ ತಾನೇ ಮೆಕ್ಯಾನಿಕ್ ಆದ ಪೊಲೀಸ್​! ತಪ್ಪಿತು ಅನಾಹುತ, ಪೇದೆ ಕಾರ್ಯಕ್ಕೆ ಶ್ಲಾಘನೆ

ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ಕಂಡು ಬೆಚ್ಚಿದ ಟೆಕ್ಕಿ! ಬೆಂಗಳೂರಲ್ಲಿ ಗೆಳತಿ ಜತೆ ಕಳೆದ ಖಾಸಗಿ ಕ್ಷಣ ಬಯಲಾಗಿದ್ದೇಗೆ?

ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
