|ಬೆಂಕಿ ಬಸಣ್ಣನ್ಯೂಯಾರ್ಕ್ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿ ನಗರದಲ್ಲಿರುವ ‘ಕನ್ನಡ-ಕಲಿ ಶಾಲೆ’ಯ ವಾರ್ಷಿಕೋತ್ಸವವನ್ನು ಜು.30ರಂದು ಕ್ಯಾನೋಜಾಹಾರಿ ಪಾರ್ಕ್​ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಆಲ್ಬನಿ ನಗರದಲ್ಲಿ 11 ವರ್ಷದ ಹಿಂದೆಯೇ ‘ಕನ್ನಡ-ಕಲಿ ಶಾಲೆ’ ಆರಂಭವಾಗಿದ್ದು, Beginers, Intermediate ಮತ್ತು Advanced ಎಂಬ 3 ವಿಭಾಗಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ. ಶಾಲಾ ವಾರ್ಷಿಕೋತ್ಸವ ಮತ್ತು ಗ್ರಾಜುಯೇಷನ್ ಪಾರ್ಟಿಯಲ್ಲಿ ಮಕ್ಕಳು ಮತ್ತು ಪಾಲಕರು ಪಾಲ್ಗೊಂಡಿದ್ದರು. ಕನ್ನಡ ಕಲಿ ತರಗತಿಯಲ್ಲಿ ತೇರ್ಗಡೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಕ್ಕಳಾದ ವಿಹಾನ್, ನಾಚಿಕೆತ್, ಆದ್ಯ, ಯುವಾನ್ ಮತ್ತು ಅವನಿ ಅವರು ಮನರಂಜನಾ ಕಾರ್ಯಕ್ರಮ ನೀಡಿ ರಂಜಿಸಿದರು.

ಬೆಂಕಿ ಬಸಣ್ಣ ಮಾತನಾಡಿ, ಆಲ್ಬನಿಯಲ್ಲಿ ಕನ್ನಡ ಕಲಿ ಶಾಲೆಯ ಪ್ರಾರಂಭ ಮತ್ತು ನಡೆದ ಬಂದ ಹಾದಿಯನ್ನು ಹಂಚಿಕೊಂಡರು. ಮಕ್ಕಳ ಪಾಲಕರಾದ ಅಲ್ಕಾರಾವ್, ಮನು, ರಾಜೀವ್ ಸೇರಿದಂತೆ ಅಜ್ಜ-ಅಜ್ಜಿಯರೂ ಮಾತನಾಡಿ, ಕನ್ನಡ ಕಲಿ ಶಾಲೆಯಿಂದ ತಮ್ಮ ಮಕ್ಕಳಿಗೆ ಸಿಗುತ್ತಿರುವ ಅವಕಾಶ ಮತ್ತು ಪ್ರಯೋಜನ ಕುರಿತು ಸಂತಸ ವ್ಯಕ್ತಪಡಿಸಿದರು. ಈ ಶಾಲೆಯ ಮುಖ್ಯಸ್ಥೆ ಲತಾ ಕಲಿಯಾತ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಕಲಿ ಶಾಲೆಯನ್ನು ಲತಾ ಕಲಿಯಾತ್ ಎಂಬುವವರು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕ್ಯಾನ್ಸರ್​ಗೆ ತುತ್ತಾಗಿದ್ದ ಲತಾ ಅವರು, ರೋಗದ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಯಾವುದಕ್ಕೂ ಕುಗ್ಗದೇ ಸದಾ ಲವಲವಿಕೆಯಿಂದ ಇರುವ ಚೈತನ್ಯದ ಸ್ಫೂರ್ತಿ. ಇವರ ವಯಸ್ಸು 75 ದಾಟಿದರೂ ಉತ್ಸಾಹ ಮಾತ್ರ ಅದ್ಭುತ.

ಮುಂಬೈ ಕನ್ನಡ ಸಂಘದಲ್ಲಿ ಸೇವೆ ಸಲ್ಲಿಸಿರುವ ಕನ್ನಡ ಪ್ರೇಮಿ, ಲೇಖಕಿ ಶಕುಂತಲಾ ಅವರು ಕನ್ನಡ ಕಲಿ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಲತಾ ಕಲಿಯಾತ್ ಕುರಿತು ಜಗನ್ನಾಥರಾವ್ ಬಹುಳೆ ಅವರು ಬರೆದ ಬಯೋಗ್ರಫಿ “ಛಲವೇ ಜೀವನ ಸಾಕ್ಷಾತ್ಕಾರ” ಪುಸ್ತಕವನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ.
ಕನ್ನಡ ಕಲಿ ಶಾಲಾ ವಾರ್ಷಿಕೋತ್ಸವ ಮತ್ತು ಗ್ರಾಜುಯೇಷನ್ ಪಾರ್ಟಿಗೆ ಮಕ್ಕಳ ಪೋಷಕರು ತಮ್ಮ ಕೈಯಾರೆ ತಯಾರಿಸಿದ ತರೇಹವಾರಿ ತಿನಿಸುಗಳನ್ನು ತಂದಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ತಿನ್ನುತ್ತಾ ಕೆಲ ಕಾಲ ಕಳೆದದ್ದು ಅವಿಸ್ಮರಣೀಯ
ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
