ಕಾರಟಗಿ (ಕೊಪ್ಪಳ):ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕನೊಬ್ಬ ಪಾಠ ಹೇಳಿಕೊಡುವ ನೆಪದಲ್ಲಿ ಮಗುವೊಂದನ್ನು ಮನೆಗೆ ಕರೆಸಿಕೊಂಡು ಗುಪ್ತಾಂಗದೊಂದಿಗೆ ಚೆಲ್ಲಾಟ ಆಡಿರುವ ಮತ್ತು ಪರಸ್ತ್ರೀಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯೊಬ್ಬರು ಶಿಕ್ಷಕನ ವಿರುದ್ಧ ದೂರು ನೀಡಿದ್ದು, ತಾನು ಅನುಭವಿಸಿದ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಶಿಕ್ಷಕನ ಕಾಮಪುರಾಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಸಲ ಮಾಡುತ್ತಿದ್ದ ಕಾರಟಗಿಯ ಶಿಕ್ಷಕ ಮೊಹ್ಮದ್​ ಅಜರುದ್ದೀನ್​ ಆರೋಪಿ. ಆತ ವಾಸವಿರುವ ಮನೆಯಲ್ಲೇ ಕೃತ್ಯ ನಡೆಸಿದ್ದಾನೆ. ಈತ ಪರಸ್ತ್ರೀಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್​ ಆಗಿದ್ದು, ಕೆಲಸದಿಂದ ಅಮಾನತು ಮಾಡಲಾಗಿದೆ. ಈತನ ಕಾಮದಾಟದ ವಿಚಾರ ಬಯಲಾಗುತ್ತಿದ್ದಂತೆ ಸಿಟ್ಟಿಗೆದ್ದ ಸಾರ್ವಜನಿಕರು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರ ಬೆನ್ನಲ್ಲೇ, ಕಾಮುಕ ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
‘ನನ್ನ‌ ಜತೆ ಲೈಂಗಿಕ ಸಂಪರ್ಕ ಮಾಡಬೇಕು. ಇಲ್ಲವಾದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದ. ಆರಂಭದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸ್ತೀನಿ ಎಂದು ನನ್ನನ್ನು ಪರಿಚಯ ಮಾಡಿಕೊಂಡಿದ್ದ. ತದನಂತರ ಪುಸಲಾಯಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಪದೇಪದೆ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ವಿರೋಧಿಸಿದ್ದಕ್ಕೆ ಅಶ್ಲೀಲ ವಿಡಿಯೋ ಮೊಬೈಲ್​ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವೆ ಎಂದು ಬೆದರಿಸಿದ್ದ. ಅವನ ಕೊಟ್ಟ ಕಿರುಕುಳದಿಂದ ಸಾಕಷ್ಟು ನೊಂದಿದ್ದೇನೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ನೊಂದ ಮಹಿಳೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಲೈಂಗಿಕವಾಗಿ ಶಿಕ್ಷಕ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಇದರಿಂದ ಮಹಿಳೆ ನೊಂದಿದ್ದಾರೆ, ಅವರೇ ಬಂದು‌ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿನಿತ್ಯ ಮಕ್ಕಳೊಂದಿಗೆ ಆಟವಾಡುವ ನೆಪದಲ್ಲಿ ತಡರಾತ್ರಿವರೆಗೂ ಕಾಲಕಳೆಯುತ್ತಿದ್ದ ಮೊಹ್ಮದ್​ ಅಜರುದ್ದೀನ್​, ಮಗುವೊಂದರ ತಲೆಯ ಮೇಲೆ ಗ್ಲಾಸ್​ ಇಟ್ಟು, ಎರಡೂ ಕೈಗಳನ್ನು ಮೇಲೆತ್ತಲು ಹೇಳುತ್ತಾನೆ, ಮಗು ಶಿಕ್ಷಕ ಹೇಳಿದಂತೆ ಮಾಡುವಾಗ ಬೇರೆ ಮಕ್ಕಳಿಂದ ಚಡ್ಡಿ ಕಳಚಿಸುತ್ತಾನೆ. ಬಳಿಕ ಕಟ್ಟಿಗೆಯಿಂದ ಗುಪ್ತಾಂಗಕ್ಕೆ ತಿವಿದು, ವಿಕೃತ ಆನಂದ ಪಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಗು ಅತ್ತರೂ ಬಿಡದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ, ಈತ ಬೇರೆ ಬೇರೆ ಮಹಿಳೆಯರೊಂದಿಗಿನ ನಡೆಸಿದ ಕಾಮದಾಟವನ್ನೂ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾನೆ. ಇತ್ತೀಚೆಗೆ ಶಿಕ್ಷಕನ ಮೊಬೈಲ್​ ಕಳೆದಿದ್ದು ಯಾರದೋ ಕೈಗೆ ದೊರೆತಿದೆ. ಮೊಬೈಲ್​ನ ಮೆಮೋರಿ ಕಾರ್ಡ್​ ತೆಗೆದಾಗ ಶಿಕ್ಷಕನ ಕರ್ಮಕಾಂಡ ಹೊರಬಂದಿದೆ.
ಮಕ್ಕಳ‌ ಗುಪ್ತಾಂಗ ಮುಟ್ಟಿ ವಿಕೃತ ಆನಂದ ಪಡೆಯುತ್ತಿದ್ದ ಈ ಶಿಕ್ಷಕ, ಕೆಲ ಮಹಿಳೆಯರನ್ನೂ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ಶಿಕ್ಷಕ, ಬಳಿಕ ಆ ಮಹಿಳೆಯರಿಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದ. ಮತ್ತಷ್ಟು ಮಹಿಳೆಯರನ್ನು ನನಗೆ ಪರಿಚಯಿಸಬೇಕು, ಅವರೊಂದಿಗೆ ಲೈಂಗಿಕಸಂಪರ್ಕ ಬೆಳೆಸಲು ನನಗೆ ಸಹಕರಿಸಬೇಕು, ಇಲ್ಲವಾದಲ್ಲಿ ನಿಮ್ಮೊಂದಿಗೆ ನಾನಿದ್ದ ವಿಡಿಯೋವನ್ನು ವೈರಲ್​ ಮಾಡುವೆ ಎಂದು ಹೆದರಿಸಿದ್ದನಂತೆ. ಇದೇ ರೀತಿ ಈತ ಸುಮಾರು 40 ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಂಧನ ಭೀತಿಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದಾನೆ. ‌ಅಜರುದ್ದಿನ್​ನನ್ನು ಕೆಲಸದಿಂದ ಬಿಇಒ ಶರಣಪ್ಪ ವಟಗಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯನ್ನ ಕೆಲಸದಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ತಲೆ ಕೂದಲು ಉದುರಿದ್ದಕ್ಕೆ ಬೇಸತ್ತು ಮೈಸೂರಲ್ಲಿ ಯುವತಿ ಆತ್ಮಹತ್ಯೆ! ಬಾಳಿ ಬದುಕಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟ ಪತ್ಮಂಡೆ

ಡಿಕೆಶಿ ಬುಡ ಅಲ್ಲಾಡಿಸಲು ತ್ರಿಶೂಲವ್ಯೂಹ! ‘ವಿಶ್ವನಾಥ್’ ಅಸ್ತ್ರ ಬಳಕೆಗೆ ಅಶ್ವಥ್ ನಾರಾಯಣ, ಸಿಪಿವೈ, ಜಾರಕಿಹೊಳಿ ರಣತಂತ್ರ

ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
