ಬೆಂಗಳೂರು:19ನೇ ವರ್ಷದ ಚಿತ್ರಸಂತೆಗೆ ಚಾಲನೆ ಸಿಕ್ಕಿದ್ದು, ಸಾವಿರಾರು ಚಿತ್ರಗಳು ಕಲಾಭಿಮಾನಿಗಳ ಕಣ್ಮನ ಸೆಳೆಯುತ್ತಿವೆ.
ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್​​ನಲ್ಲಿ 19ನೇ ವರ್ಷದ ಚಿತ್ರಸಂತೆಗೆ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಈ ಬಾರಿ ಚಿತ್ರಸಂತೆ ಸಮರ್ಪಿಸಲಾಗಿದೆ.

10 ದಿನಗಳ ಕಾಲ ನಡೆಯುವ ಚಿತ್ರಸಂತೆಗೆ 1000ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದಾರೆ. ದೇಶ್​ ಬಂಧು ಗುಪ್ತ, ರಣ್​ಬೀರ್​ ಸಿಂಗ್​, ಪೀರ್​ ಅಲಿಖಾನ್​ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ನಟ ಪುನೀತ್ ರಾಜ್ ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಚಿತ್ರಗಳನ್ನ ಪ್ರದರ್ಶನಕ್ಕೆ ಇಡಲಾಗಿದ್ದು, ಸಾರ್ವಜನಿಕರ ಮನ ಸೆಳೆಯುತ್ತಿವೆ. 1000ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿದ್ದು, ಜನಸಾಗರವೇ ಹರಿದು ಬರುತ್ತಿದೆ. ಇನ್ನು ಚಿತ್ರಸಂತೆ ಉದ್ಘಾಟಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರು ಅಲ್ಲೇ ಐಸ್​ಕ್ರೀಂ ಸವಿಯುತ್ತಾ ಕಲಾವಿದನ ಕೈಯಲ್ಲರಳಿದ ಚಿತ್ರಗಳನ್ನು ಕಣ್ತುಂಬಿಕೊಂಡರು.
ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ಹೇಳ್ತೀನಿ…

ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − 1 =
Remember me
