| ಜಗನ್ನಾಥ್​ ಕಾಳೇನಹಳ್ಳಿತುಮಕೂರುಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಿತು. ರಾಜ್​ಪಥ್​ನ ಪಥಸಂಚಲನದಲ್ಲಿ ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಕೆ.ವೈ.ಇಂಪನಾಶ್ರೀ ತುಮಕೂರು ಜಿಲ್ಲೆಯವರು. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಮೂಲದ ಇಂಪನಾಶ್ರೀ, ಸೇನಾ ಶಕ್ತಿಯಲ್ಲಿ ಸ್ತ್ರೀ ಶಕ್ತಿ ಬಲವನ್ನು ನಾಡಿಗೆ ತೋರುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದರು.
ಬುಧವಾರದಂದು ರಾಜ್​ಪಥ್​ನಲ್ಲಿ ಇಂಪನಾಶ್ರೀ ಏರ್​ಫೋರ್ಸ್​ ರೆಜಿಮೆಂಟ್​ ಅನ್ನು 3.3 ಕಿ.ಮೀ. ಪಥಸಂಚಲನದಲ್ಲಿ ಮುನ್ನಡೆಸಿದ್ದು ವಿಶೇಷವೆನಿಸಿತು. 2012ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕ 4ನೇ ಬೆಟಾಲಿಯನ್​ ಎನ್​ಸಿಸಿ ಕೆಡೆಟ್​ ಆಗಿ ಭಾಗವಹಿಸಿದ್ದ ಇಂಪನಾಗೆ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದ ಗಣತಂತ್ರ ದಿನದಂದು ಮತ್ತೊಮ್ಮೆ ಪಥಸಂಚಲನದಲ್ಲಿ ಭಾಗವಹಿಸುವ ಸುವರ್ಣಾವಕಾಶ ಸಿಕ್ಕಿದ್ದು ಅಪೂರ್ವವೆನಿಸಿದೆ. ಇವರು ಬೆಂಗಳೂರಿನ ಏರ್​ ಕಮಾಂಡರ್​ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ.
ಹಳ್ಳಿ ಹುಡುಗಿಯ ದಿಟ್ಟ ಸಾಧನೆ: ಕುಣಿಗಲ್​ ಸರ್ಕಾರಿ ಐಟಿಐ ಕಾಲೇಜಿನ ಜೆಟಿಒ, ಕೋಳಾಲದ ಯಲ್ಲರಾಜು ಹಾಗೂ ಕೆ.ಎಸ್​.ಭಾನುಮತಿ ದಂಪತಿ ಪುತ್ರಿಯಾದ ಇಂಪನಾಶ್ರೀ ಕೊರಟಗೆರೆಯ ರವೀಂದ್ರ ಭಾರತಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ತುಮಕೂರಿನ ಚೇತನಾ ವಿದ್ಯಾಮಂದಿರದಲ್ಲಿ ಪ್ರೌಢಶಾಲೆ ಮುಗಿಸಿ, ಸರ್ವೋದಯ ಪಿಯು ಕಾಲೇಜಿನಲ್ಲಿ 2011-12, 2012-13ರಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು.
ಪಿಯುಸಿಯಲ್ಲಿದ್ದಾಗ ಎನ್​ಸಿಸಿಗೆ ಸೇರ್ಪಡೆಯಾದ ಇಂಪನಾ ಅವರ ಪರಿಶ್ರಮಕ್ಕೆ 2012ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸುವ ಅದೃಷ್ಟ ಒಲಿದಿತ್ತು. ಈ ಸಂದರ್ಭದಲ್ಲಿ ಯುವ ವಿನಿಮಯ ಕಾರ್ಯಕ್ರಮದಡಿ 1 ವರ್ಷ ಚೀನಾ ತರಬೇತಿಗೂ ಆಯ್ಕೆಯಾಗಿದ್ದರು. ಆದರೆ, ಎನ್​ಸಿಸಿ ಕೋಟಾದಡಿ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್​ ಸಿಕ್ಕಿ ಪಯಣದ ದಿಕ್ಕು ಬದಲಾಯಿತು. ಅಂದು ಸರ್ಕಾರಿ ಶುಲ್ಕ ಭರಿಸಲಾರದಷ್ಟು ಕಷ್ಟದಲ್ಲಿದ್ದ ತಂದೆ ಯಲ್ಲರಾಜು ಪತ್ನಿಯ ಮಾಂಗಲ್ಯ ಸರ ಅಡವಿಟ್ಟಿದ್ದ ಕಷ್ಟದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ. ಮಗಳ ವೈದ್ಯಕೀಯ ಕೋರ್ಸ್​ ಪೂರ್ಣಗೊಳಿಸಲು ಬ್ಯಾಂಕ್​ನಲ್ಲಿ ಶಿಕ್ಷಣ ಸಾಲ ಪಡೆದಿದ್ದರು. ಇಂಪನಾ ಸಹೋದರಿ ಇಂಚರಶ್ರೀ ಎಂ.ಟೆಕ್​ ವ್ಯಾಸಂಗ ಮಾಡುತ್ತಿದ್ದಾರೆ.
2021ರ ಮೇ ನಲ್ಲಿ ಬೆಂಗಳೂರಿನ ಏರ್​ ಕಮಾಂಡರ್​ ಆಸ್ಪತ್ರೆಯಲ್ಲಿ ವೈದ್ಯಕೀಯವಾಗಿ ಆಯ್ಕೆಯಾದ ಇಂಪನಾಗೆ ಈ ಬಾರಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸುವ ಅವಕಾಶ ಒದಗಿ ಬಂದಿದ್ದು ಇದಕ್ಕೆ ಎನ್​ಸಿಸಿಯಲ್ಲಿ ತನ್ನ ಸಾಧನೆ ಕಾರಣ ಎಂಬುದನ್ನು ಇಂಪನಾಶ್ರೀ ಹೆಮ್ಮೆಯಿಂದಲೇ ಹಂಚಿಕೊಳ್ಳುತ್ತಾರೆ.
ಗಣತಂತ್ರ ದಿನದಂದು ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ಪುತ್ರಿ ಇಂಪನಾಳ ಸಾಧನೆಯನ್ನು ದೂರದರ್ಶನದಲ್ಲಿ ಕಣ್ತುಂಬಿಕೊಂಡಿದ್ದು ಹೆಮ್ಮೆ ಪಡುವ ಸಂಗತಿ. ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿದ್ದ ನಮ್ಮ ಕುಟುಂಬದ ಎಲ್ಲ ನೋವು ಮಗಳ ಸಾಧನೆಯಿಂದ ಮರೆಯಾಗಿದೆ. ನನ್ನೆರಡೂ ಮಕ್ಕಳು ನನ್ನ ಕಣ್ಣುಗಳು.| ಯಲ್ಲರಾಜುಇಂಪನಾ ತಂದೆ
ಅಬ್ಬಬ್ಬಾ! ಬರೋಬ್ಬರಿ 61 ಗಂಟೆ ನಿರಂತರವಾಗಿ ಟ್ರ್ಯಾಕ್ಟರ್​ ಮೂಲಕ ನೇಗಿಲು ಹೊಡೆದ ಚಾಲಕ

ವೈದ್ಯರ ಎಡವಟ್ಟು: ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಯುವಕನಿಗೆ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + 12 =
Remember me
