ಗದಗ:ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದ ನೇಮಕಾತಿ ಇದಾಗಿದ್ದು, ಸ್ನಾತಕೋತ್ತರ ವಿಷಯಗಳ ಬೋಧನೆ ಮಾಡಬೇಕಿದೆ.
ಹುದ್ದೆಗಳ ವಿವರ:ಎಂಎಸ್​ಡಬ್ಲ್ಯು ಇನ್​ ಕಮ್ಯುನಿಟಿ ಡೆವಲಪ್​ಮೆಂಟ್​/ಕಮ್ಯುನಿಟಿ ಹೆಲ್ತ್​, ಮಾಸ್ಟರ್​ ಆಫ್​ ಪಬ್ಲಿಕ್​ ಹೆಲ್ತ್​ ಮತ್ತು ಇಂಗ್ಲಿಷ್​ ಬೋಧನೆ ಮಾಡಲು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕ್ರಮವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಂಎಸ್​ಡಬ್ಲ್ಯು/ಪಬ್ಲಿಕ್​ ಹೆಲ್ತ್​ನಲ್ಲಿ ಉನ್ನತ ಪದವಿ/ಇಂಗ್ಲಿಷ್​ ವಿಷಯದಲ್ಲಿ ಕನಿಷ್ಠ 55 ಅಂಕದೊಂದಿಗೆ ಉನ್ನತ ಪದವಿ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಕಲ್ಪಿಸಲಾಗಿದೆ. ನೆಟ್​/ಕೆ-ಸೆಟ್​ ಉತ್ತೀರ್ಣರಾಗಿರಬೇಕು. ವಿಷಯಕ್ಕೆ ಅನುಗುಣವಾಗಿ ಪಿಎಚ್​ಡಿ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಏಪ್ರಿಲ್​ 19ರಂದು ಬೆಳಗ್ಗೆ 9.30ಕ್ಕೆ ವಿವಿ ಆವರಣದಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅಗತ್ಯ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ: 19.4.2022ಅಧಿಸೂಚನೆಗೆ:https://bit.ly/3vbKCVIಮಾಹಿತಿಗೆ:https://www.ksrdpru.ac.in/
ಬೆಂಗಳೂರಿನ ಪರಿಸರ ಸಂಶೋಧನಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nineteen =
Remember me
