ಕಾರವಾರ:ಕೊರೊನಾ ವೈರಸ್ ಭೀತಿಯಿಂದ ಜಪಾನ್ ಆಡಳಿತವು ಯೊಕೊಮಾ ಎಂಬಲ್ಲಿ ಸಮುದ್ರದ ನಡುವೆಯೇ ತಡೆ ಹಿಡಿದಿರುವ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರವಾರದ ಯುವಕನೊಬ್ಬ ಸಿಕ್ಕಿ ಹಾಕಿಕೊಂಡಿದ್ದಾನೆ.
ಹಡಗಿನಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಡಗಿನಲ್ಲಿದ್ದ ಸುಮಾರು 60 ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಯಾರಿಗೂ ಇಳಿಯಲು ಬಿಡುತ್ತಿಲ್ಲ.
ಕಾರವಾರ ಕೆನರಾ ಬ್ಯಾಂಕ್ ಕಾಲನಿಯ 26 ವರ್ಷದ ಅಭಿಷೇಕ ಮಗರ್ ಹಡಗಿನಲ್ಲಿ ಸಿಲುಕಿರುವ ವ್ಯಕ್ತಿ. ಎನ್​ಡಬ್ಲ್ಯುಕೆಎಸ್​ಆರ್​ಟಿಸಿ ಕಾರವಾರ ಘಟಕದಲ್ಲಿ ತಂತ್ರಜ್ಞರಾಗಿರುವ ಅವರ ತಂದೆ ಬಾಲಕೃಷ್ಣ ಮಗರ್, ಮಗನನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಗೋವಾದಲ್ಲಿ ಹೋಟೆಲ್ ಮ್ಯಾನೇಜ್​ವೆುಂಟ್ ಕೋರ್ಸ್ ಮಾಡಿಕೊಂಡಿದ್ದ ಅಭಿಷೇಕ, ಬಮುಡಾ ಮೂಲದ ಪ್ರಿನ್ಸಸ್ ಕ್ರೂಸ್​ಲೈನ್ ಲಿಮಿಟೆಡ್​ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮೊದಲ ಅವಧಿಗೆ 9 ತಿಂಗಳ ಒಪ್ಪಂದದ ಮೇಲೆ ತೆರಳಿ ಸುರಕ್ಷಿತವಾಗಿ ವಾಪಸಾಗಿದ್ದ. ಎರಡನೇ ಅವಧಿಗಾಗಿ ಕಳೆದ ಮೂರು ತಿಂಗಳ ಹಿಂದೆ ತೆರಳಿದ್ದ. ಚೀನಾದ ಹಾಂಕಾಂಗ್​ನಿಂದ ಜಪಾನ್​ನ ಟೋಕಿಯೊಗೆ ತೆರಳುವ ಡೈಮಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದ. ಹಡಗು ಇನ್ನೇನು ಹಾಂಕಾಂಗ್ ತಲುಪಬೇಕು ಎನ್ನುವ ಹೊತ್ತಿಗೆ ಜಪಾನ್ ಆಡಳಿತ ಅದನ್ನು ತಡೆದಿದೆ. ಸಮುದ್ರ ನಡುವೆಯೇ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸುತ್ತಿದೆ. 14 ದಿನಗಳವರೆಗೆ ಜನರು ಜಪಾನ್ ಒಳಗೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಹಡಗಿನಲ್ಲಿ ಮೊದಲ ಬಾರಿ ಪರೀಕ್ಷಿಸಿದಾಗ 10 ಜನರಲ್ಲಿ ಕರೊನಾ ಸೋಂಕು ಕಂಡು ಬಂದಿತ್ತು. ಶುಕ್ರವಾರ ಪರೀಕ್ಷಿಸಿದಾಗ ಅದು 60 ಜನರಲ್ಲಿ ಕಂಡು ಬಂದಿದೆ.
ಹಡಗು ಯಾವುದು?
ಡೈಮಂಡ್ ಪ್ರಿನ್ಸಸ್ ಐಷಾರಾಮಿ ಕ್ರೂಸ್ ಶಿಪ್. ಸದ್ಯ ಹಡಗಿನಲ್ಲಿ 2,666 ಪ್ರವಾಸಿಗರು, 1045 ಸಿಬ್ಬಂದಿ ಇದ್ದಾರೆ.
ಭಾರತೀಯ ಮೂಲದ ಸುಮಾರು ನೂರು ಜನ ಈ ಹಡಗಿನಲ್ಲಿದ್ದಾರೆ. ಆಹಾರ, ಔಷಧ ಎಲ್ಲವೂ ಇದೆ. ಆದರೆ, ದಿನದಿಂದ ದಿನಕ್ಕೆ ಕೊರೊನಾ ವ್ಯಾಪಿಸುತ್ತಿರುವ ಕಾರಣ ಆತಂಕವಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಜಪಾನ್ ಜತೆ ಸಂಪರ್ಕ ಮಾಡಿ ನಮ್ಮನ್ನು ರಕ್ಷಿಸಬೇಕು.
| ಅಭಿಷೇಕ ಮಗರ್ ಸಂಕಷ್ಟಕ್ಕೊಳಗಾದ ಕಾರವಾರದ ಯುವಕ
ರಾಜ್ಯ ಮುಖ್ಯ ಕಾರ್ಯದರ್ಶಿಯವರ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಯುವಕನನ್ನು ಸುರಕ್ಷಿತವಾಗಿ ಕರೆತರುವ ಸಂಬಂಧ ಎಲ್ಲ ಪ್ರಯತ್ನ ಮಾಡಲಾಗುವುದು.
| ಡಾ.ಹರೀಶ ಕುಮಾರ ಕೆ. ಉತ್ತರ ಕನ್ನಡ ಜಿಲ್ಲಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
