ಕೆ.ಆರ್​.ಸಾಗರ:ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯ ಕೂಡ ಗರಿಷ್ಠ ಮಟ್ಟ ತಲುಪಲಿದೆ. ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯಾಗಿವೆ. ಮುಂಜಾಗ್ರತೆ ವಹಿಸುವಂತೆ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮದ ಅಧಕಾರಿಗಳು ಸೂಚನೆ ನೀಡಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟೆಗೆ 35,336 ಕ್ಯೂಸೆಕ್​ ನೀರು ಹರಿದು ಬರುತ್ತಿದ್ದು, 124.80 ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ 123 ಅಡಿಗೆ ತಲುಪಿದೆ. ನದಿ ಮತ್ತು ನಾಲೆ ಸೇರಿದಂತೆ ಹೊರಹರಿವಿನ ಪ್ರಮಾಣ 27,672 ಕ್ಯೂಸೆಕ್​ ಇದ್ದು, 46.969(ಗರಿಷ್ಠ 49.454) ಟಿಎಂಸಿ ನೀರಿನ ಸಂಗ್ರಹವಿದೆ. ಹಾರಂಗಿ ಜಲಾಶಯದಿಂದ 24 ಸಾವಿರ ಕ್ಯೂಸೆಕ್​ ನೀರು ಹರಿದುಬರುತ್ತಿದ್ದು, ಹೇಮಾವತಿ ಜಲಾಶಯ ಕೂಡ ಗರಿಷ್ಠ ಮಟ್ಟ ತಲುಪಲಿದೆ. ಗೋರೂರು ಅಣೆಕಟ್ಟೆಯಿಂದ ಹೊರಹರಿವು ಹೆಚ್ಚಾದರೆ, ಕೆ.ಆರ್​.ಸಾಗರ ಅಣೆಕಟ್ಟೆಗೆ ಹರಿದುಬರುವ ನೀರಿನ ಪ್ರಮಾಣ 50 ಸಾವಿರ ಕ್ಯೂಸೆಕ್​ ತಲುಪುವ ಸಾಧ್ಯತೆ ಇದೆ. ಆಷಾಢ ಮಾಸದಲ್ಲಿ ಅಣೆಕಟ್ಟೆ ತುಂಬಿರುವುದು ಇದೇ ಮೊದಲು.

ಕೆಆರ್​ಎಸ್​ ಡ್ಯಾಂನಿಂದ 41, 000 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಬಹುತೇಕ ನಡುಗಡ್ಡೆಗಳು ಭಾಗಶಃ ಮುಳುಗಡೆಯಾಗಿವೆ. ಮರದ ಕೆಳಭಾಗದಲ್ಲಿ ಕಟ್ಟಿದ್ದ ಗೂಡುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಮರಗಳ ತುದಿಯಲ್ಲಿ ಗುಂಪು ಗುಂಪಾಗಿ ಕುಳಿತಿರುವ ಪಕ್ಷಿಗಳು ಗೂಡು, ಮೊಟ್ಟೆ, ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿವೆ. ನಿನ್ನೆಯಿಂದಲೇ (ಭಾನುವಾರ) ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಆಗಿದೆ.
ಸ್ನಾನ ಘಟ್ಟ ಮುಳುಗಡೆ:ನಿಮಿಷಾಂಬಾ ದೇವಾಲಯ, ಸ್ನಾನಘಟ್ಟ, ಸಂಗಮದಲ್ಲಿ ಭಕ್ತರು ನೀರಿಗೆ ಇಳಿಯದಂತೆ ಬ್ಯಾರಿಕೇಡ್ ಅವಡಿಸಲಾಗಿದೆ. ಸ್ನಾನ ಘಟ್ಟದಲ್ಲಿ ಸುಮಾರು 25 ಮೆಟ್ಟಿಲುಗಳು ಮುಳುಗಡೆಯಾಗಿವೆ.
ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

ಮೇಲುಕೋಟೆಯಲ್ಲಿ ಕೃಷ್ಣರಾಜಮುಡಿ ಉತ್ಸವಕ್ಕೆ ಸಕಲ ಸಿದ್ಧತೆ: ಜು.14ರಿಂದ ವಿಶೇಷ ಧಾರ್ಮಿಕ ಕೈಂಕರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
