ರಾಯಚೂರು:ಚೀಫ್ ಇಂಜಿನಿಯರ್‌ಗೆ ಚಪ್ಪಲಿಯಲ್ಲಿ ಹೊಡೀತೀನಿ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ನಿಂದಿಸಿದ್ದಾರೆ ಎನ್ನಲಾದ 7 ತಿಂಗಳ ಹಿಂದಿನ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್​ ಆಗಿದೆ.
ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಬಿಲ್​ ಬಿಡುಗಡೆಗೆ ಸಂಬಂಧಿಸಿ ಕೆಬಿಜೆಎನ್​ಎಲ್​ ಮುಖ್ಯ ಇಂಜಿನಿಯರ್​ಗೆ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ‘ಪೂಜೆ ಮಾಡದೆ ಕ್ಷೇತ್ರದಲ್ಲಿ ಕಾಮಗಾರಿಯ ಬಿಲ್​ ಹೇಗೆ ಪಾವತಿಸಿದ್ದೀಯಾ? ಈ ಸಂಬಂಧ ಚರ್ಚಿಸಲು ಆರು ಬಾರಿ ಸಭೆ ಕರೆದರೂ ಬಂದಿಲ್ಲ’ ಎಂದು ಮುಖ್ಯ ಇಂಜಿನಿಯರ್​ ಆಗಿದ್ದ ಶಿವಕುಮಾರಗೆ ಅವಾಚ್ಯ ಶಬ್ದಗಳಿಂದ ಕೆ.ಶಿವನಗೌಡ ನಾಯಕ ನಿಂದಿಸಿದ್ದಾರೆ. ಎಂಡಿಗೆ ವರದಿ ಮಾಡುವುದಾಗಿ ಶಿವಕುಮಾರ ಹೇಳಿದಾಗ ಶಿವನಗೌಡ ನಾಯಕ ಮತ್ತಷ್ಟು ಆಕ್ರೋಶಗೊಂಡು ಮತ್ತಷ್ಟು ನಿಂದಿಸಿದ್ದು ಆಡಿಯೋದಲ್ಲಿ ಕೇಳಿಬರುತ್ತದೆ.
ಸಚಿವ ಸಂಪುಟ ಸಭೆ ವಿಸ್ತರಣೆ ಈ ಸಂದರ್ಭದಲ್ಲಿ 7 ತಿಂಗಳ ಹಿಂದೆ ನಡೆದಿದ್ದ ಸಂಭಾಷಣೆಯನ್ನು ಈಗ ವೈರಲ್​ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎನ್ನುತ್ತಿದ್ದಾರೆ ಶಾಸಕ ಬೆಂಬಲಿಗರು. ಈ ಹಿಂದೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಗೆ ಇದೇ ಶಿವನಗೌಡ ನಾಯಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗುತ್ತಿದೆ.ಕೆಲದಿನಗಳ ಹಿಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಸುರಪುರ ಶಾಸಕ ರಾಜುಗೌಡರ ಹೆಸರನ್ನು ತಳಕು ಹಾಕಲಾಗಿದ್ದು, ಸಚಿವ ಸಂಪುಟ ವಿಸ್ತರಣೆ ಸಂದರ್ಭ ಈ ಭಾಗದ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಜತೆಜತೆಗೆ ಮಾತುಗಳ ಮೇಲೆ ಶಿವನಗೌಡ ನಾಯಕ ಹಿಡಿತವಿಟ್ಟಕೊಳ್ಳಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಕಾಮಗಾರಿಗೆ ಸಂಬಂಧಿಸಿ 7 ತಿಂಗಳ ಹಿಂದೆಯೇ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅಧಿಕಾರಿಯೂ ಆರು ಬಾರಿ ಸಭೆಗೆ ಗೈರು ಹಾಜರಾಗಿದ್ದರಿಂದ ಆಕ್ರೋಶಗೊಂಡು ಮಾತನಾಡಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಿದ್ದೇನೆ ಹೊರತು ಯಾವುದೇ ಬೇರೆ ಉದ್ದೇಶವಿಲ್ಲ. 7 ತಿಂಗಳ ಹಿಂದಿನ ಆಡಿಯೋ ಹೀಗೇಕೆ ವೈರಲ್​ ಮಾಡಲಾಗುತ್ತಿದೆ ಎನ್ನುವುದು ಗೊತ್ತಿಲ್ಲ.| ಕೆ.ಶಿವನಗೌಡ ನಾಯಕಶಾಸಕ, ದೇವದುರ್ಗ
‘ಫ್ಯಾಟ್’ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! ಆಪರೇಷನ್​ ವೇಳೆ ನಡೆಯಿತು ದುರಂತ, ಸತ್ತ ಮೇಲೂ ಬಿಲ್​ ಕೇಳಿದ ಆಸ್ಪತ್ರೆ

ನಾಲ್ವರನ್ನು ಮದ್ವೆ ಆಗಿದ್ದಾನೆ, ಹಲವರ ಜತೆ ಅಕ್ರಮ ಸಂಬಂಧವಿದೆ, ನನ್ನನ್ನು ಕಾಪಾಡಿ… ಬೆಂಗ್ಳೂರಲ್ಲಿ ಪೇದೆ ಪತ್ನಿ ಕಣ್ಣೀರು

Sign in to your account
Please enter an answer in digits:five × 5 =
Remember me
