ಬೆಳಗಾವಿ:ಕೇರಳದ ಕುಖ್ಯಾತ ರೌಡಿ ಡಾನ್​ ತಸ್ಲಿಮ್ ಕೊಲೆ ಪ್ರಕರಣದ ಆರೋಪಿ ಗುರುರಾಜ್ ದೊಡ್ಡಮನಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.‌ ಗುರುರಾಜ್​ ಸಾವಿಗೆ ಜೈಲು ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
2019ರಲ್ಲಿ ಕೇರಳದ ಕುಖ್ಯಾತ ರೌಡಿ ಡಾನ್​ ತಸ್ಲಿಮ್​ನ ಕೊಲೆ ಕೇಸ್​ನಲ್ಲಿ ಗುರುರಾಜ್ ದೊಡ್ಡಮನಿ ಜೈಲುಪಾಲಾಗಿದ್ದ. ಕಳೆದ ನಾಲ್ಕು ದಿನಗಳಿಂದ ಗುರುರಾಜ್​ಗೆ ಎದೆ ನೋವು ಕಾಣಿಸಿಕೊಂಡಿತ್ತಂತೆ. ಈ ಬಗ್ಗೆ ಗುರುರಾಜ್​ ತನ್ನ ಸಂಬಂಧಿಯೊಬ್ಬರಿಗೆ ಶುಕ್ರವಾರ ತಿಳಿಸಿ 500 ರೂಪಾಯಿ ಕೊಡುವಂತೆ ಹೇಳಿದ್ದನಂತೆ. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ ಗುರುರಾಜ್​ ಮೃತಪಟ್ಟಿದ್ದಾನೆ ಎಂದು ಜೈಲಿನಿಂದ ಸಂಬಂಧಿಕರಿಗೆ ಕರೆ ಬಂದಿತ್ತು.
15 ದಿನಗಳ ಹಿಂದೆ ಗುರುರಾಜ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿತ್ತು. ಇದಾದ ಬಳಿಕ ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ.
ನನ್ನ ಹುಟ್ಟೂರು ಧಾರವಾಡ, ಪ್ಲೀಸ್​ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್​ ಪ್ರಜೆ

ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕೋಲ್ಲ!

ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ದಂಡ ಪಡೆದ ಕಾನ್​ಸ್ಟೇಬಲ್​ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eight =
Remember me
