ಕೋಲಾರ:ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್​ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್​ಗಳು ಬೌನ್ಸ್​ ಆಗಿ ಮಕ್ಕಳಿಗೆ ಸಮಸ್ಯೆ ಉಂಟಾಗಿತ್ತು. ತೊಂದರೆ ಅನುಭವಿಸಿದ ಎಲ್ಲ ಮಕ್ಕಳಿಗೂ ಕೆಜಿಎಫ್ ಬಾಬು ಅವರ ಪತ್ನಿಯರಿಬ್ಬರೂ ತಲಾ 1100 ರೂಪಾಯಿ ಡಿಡಿಯನ್ನು ವಿತರಿಸಿದ್ದಾರೆ.
ಕೆಜಿಎಫ್​​ ಬಾಬು 2021ರ ಸೆಪ್ಟೆಂಬರ್​ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್​ ವಿತರಣೆ ಮಾಡಿದ್ದರು. ಅವೆಲ್ಲವೂ ಬೌನ್ಸ್​ ಆಗಿತ್ತು. ರಿಟರ್ನ್​ ಚೆಕ್​ ಬೌನ್ಸ್​ ಆಗಿದ್ದ ಪರಿಣಾಮ ಮಕ್ಕಳ ಅಕೌಂಟ್​ನಿಂದ 590 ರೂ. ಕಟ್ಟಾಗಿತ್ತು. ಈ ಬಗ್ಗೆ ಅಸಮಾಧಾನ ಹೊರಹಾಕಿದ್ದ ಶಾಲಾ ವಿದ್ಯಾರ್ಥಿಗಳು, ಕೆಜಿಎಫ್​ ಬಾಬು ಅವರು ಚೆಕ್​ ನೀಡಿದ್ದರಿಂದ ನಮಗೆ ಸಾಲದ ಹೊರೆಯಾಗಿದೆ ಎಂದು ಅಳಲುತೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚತ ಬಾಬು ಅವರ ಪತ್ನಿಯರಾದ ರೋಷನ್​ ತಾಜ್ ಮತ್ತು ಜೆಲಿಜಿಯಾ ಕರಣ್ ಅವರು ಗುರುವಾರ ಎಲ್ಲ ಮಕ್ಕಳಿಗೂ ತಲಾ 1100 ರೂ. ಮೌಲ್ಯದ ಡಿಡಿ ವಿತರಿಸಿದರು.

ನಮ್ಮ ಅಕೌಂಟ್​ನಲ್ಲಿ ತಾಂತ್ರಿಕ ತೊಂದರೆಯಾಗಿತ್ತು. ಪ್ರಧಾನ ಕಾರ್ಯದರ್ಶಿ ಕೆಲಸ ಬಿಟ್ಟಿದ್ದರಿಂದ ವಿದ್ಯಾರ್ಥಿಗಳ ಚೆಕ್​ ಬೌನ್ಸ್​ ಆಗಿದೆ. ಅದನ್ನು ಸರಿಪಡಿಸುವಲ್ಲಿ ಕೆಲವು ತಿಂಗಳಾಯ್ತು. ತಡವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ರೋಷನ್​ ತಾಜ್​ ಹೇಳಿದರು.
ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

ನಾನು ಸತ್ತ ನಂತ್ರ ಬೇರೆ ಮದ್ವೆ ಆಗಿ ಆಕೆಗೂ ಕಾಟ ಕೊಡ್ಬೇಡ… ಡೆತ್​ನೋಟ್ ಬರೆದು ಬೆಂಗ್ಳೂರಲ್ಲಿ ಪತ್ರಕರ್ತೆ ಆತ್ಮಹತ್ಯೆ

ತಹಸೀಲ್ದಾರ್​ರನ್ನು ಬಂಧಿಸಲು ಮನೆ ಬಾಗಿಲಲ್ಲೇ ಬೆಳಗಿನಜಾವದಿಂದ ಕಾಯುತ್ತಾ ಕುಳಿತ ಎಸ್​ಪಿ!

ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
