ಬೆಂಗಳೂರು:ಕೊಳದ ಮಠದ ಶಾಂತವೀರ ಸ್ವಾಮೀಜಿ ಅವರು ಶನಿವಾರ ಬೆಳಗ್ಗೆ ಲಿಂಗೈಕ್ಯರಾದರು. ಶ್ರೀಗಳಿಗೆ 82 ವರ್ಷ ವಯಸ್ಸಾಗಿತ್ತು. ಶುಕ್ರವಾರ ರಾತ್ರಿ ಮಲಗಿದ್ದ ಶ್ರೀಗಳಿಗೆ ಶನಿವಾರ ಬೆಳಗ್ಗೆ ಹೃದಯಾಘಾತವಾಗಿದೆ.
ಕಳೆದ 43 ವರ್ಷಗಳಿಂದ ನಾನು ಮತ್ತು ನನ್ನ ಕುಟುಂಬ ಶ್ರೀಗಳ ಜೊತೆಯಲ್ಲೇ ಇದ್ದೆವು. ನಮಗೆ ಆಸರೆ ನೀಡಿರುವ ದೇವರು ಅವರು. ಈಗ ಶ್ರೀಗಳು ಇಲ್ಲದೆ ಬಡವಾಗಿದ್ದೇವೆ. ಸಾವಿರಾರು ಜನರಿಗೆ ಶ್ರೀಗಳು ಅನ್ನದಾತರಾಗಿದ್ರು. ಪ್ರತಿನಿತ್ಯ ನಾನು ಅಡುಗೆ ಮಾಡಿ ಬಡಿಸುತ್ತಿದ್ದೆ, ವಾಕಿಂಗ್​ಗೆ ಕರೆದುಕೊಂಡು ಹೋಗ್ತಿದ್ದೆ. ನಿನ್ನೆ(ಶುಕ್ರವಾರ) ರಾತ್ರಿಯೂ ತುಂಬಾ ಚೆನ್ನಾಗಿ ಮಾತಾಡಿದ್ರು. ಇಂದು ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ಹೋಗಿ ನೋಡಿದಾಗ ಶ್ರೀಗಳು ಎಚ್ಚರ ಇರಲಿಲ್ಲ. ಪರಿಶೀಲನೆ ನಡೆಸಿದ ವೈದ್ಯರು ಶ್ರೀಗಳಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿದರು ಎನ್ನುತ್ತಲೇ ಶಾಂತವೀರ ಸ್ವಾಮಿಜಿಗಳ ಆಪ್ತ ಸಹಾಯಕ‌ ವೆಂಕಟಪ್ಪ ಭಾವುಕರಾದರು.
ನಿನ್ನೆ ಚೆನ್ನಾಗಿಯೇ ಇದ್ರು. ನಿನ್ನೆ(ಶುಕ್ರವಾರ) ಮಹಾಲಕ್ಷ್ಮೀ ಲೇಔಟ್​ಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಬೆಳಗ್ಗೆ ನಾನು ಬಂದು ನೋಡಿದಾಗ ಅವರ ಉಸಿರು ನಿಂತಿತ್ತು. ಬೆಳಗಿನ ಜಾವ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ಶ್ರೀಗಳ ಪೂರ್ವಾಶ್ರಮ ಅಣ್ಣನ ಮಗ ಹರ್ಷ ಕಣ್ಣೀರಿಟ್ಟರು. ಶ್ರೀಗಳು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಠದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ? ಇನ್ನೂ ಹತ್ತು ಸಲ ತನಿಖೆ ಮಾಡಲಿ… ಎಚ್​ಡಿಕೆ ಬಳಿ ಕಣ್ಣೀರಿಟ್ಟ PSI ಅಭ್ಯರ್ಥಿಗಳು

ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 + seventeen =
Remember me
