ಕೋಲಾರ:ದೇವರ ಕಾರ್ಯಕ್ರಮದಲ್ಲಿ ನಂಗಾನಾಚ್​ ಡಾನ್ಸ್​ ಮಾಡಿದ್ದ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯನ ವಿರುದ್ಧ ಕೇಸ್​ ದಾಖಲಾಗಿದೆ.
ಕೆಜಿಎಫ್​ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ನಡೆದ ಗಂಗಮಾಂಬಾ ಜಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಫೆ.8ರಂದು ರೆಕಾರ್ಡ್​ ಡ್ಯಾನ್ಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ತುಂಡು ಬಟ್ಟೆ ಹಾಕಿಕೊಂಡು ವೇದಿಕೆಯಲ್ಲಿ ಡಾನ್ಸ್​ ಮಾಡುತ್ತಿದ್ದ ನರ್ತಕಿಯರ ಜತೆ ಜನಪ್ರತಿನಿಧಿಗಳೂ ಕುಣಿದುಕುಪ್ಪಳಿಸಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯಬೇಕಿದ್ದ ಜಾಗದಲ್ಲಿ ನಂಗನಾಚ್​ ನೃತ್ಯ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.
ದೇವಿ ಜಾತ್ರೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಲಮನೇರ್​ನಿಂದ ಯುವತಿಯರ ತಂಡ ಕರೆಸಿ ಸಾರ್ವಜನಿಕವಾಗಿ ಡ್ಯಾನ್ಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜಾತ್ರೆ ಆಯೋಜಕ ರಾಜೇಂದ್ರ ಮತ್ತು ರಘು ಯುವತಿಯರೊಂದಿಗೆ ಡ್ಯಾನ್ಸ್​ ಮಾಡಿದ್ದರು. ನರ್ತಕಿಯರ ಜತೆ ಕುಣಿದು ಕುಪ್ಪಳಿಸಿದ್ದ ಗ್ರಾಪಂ ಅಧ್ಯಕ್ಷ ರಘು ಮತ್ತು ಸದಸ್ಯ ರಾಜಣ್ಣ ವಿರುದ್ಧ ಕ್ಯಾಸಂಬಳ್ಳಿ ಠಾಣೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ದೂರು ದಾಖಲಾಗಿದೆ. ನೃತ್ಯ ಮಾಡುತ್ತಿದ್ದ ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್​ ಬುಜ್ಜಿನಾಯ್ಡು ಹಾಗೂ ಇತರ ಮುಖಂಡರು ಆಸೀನರಾಗಿದ್ದರು.
26 ಲಕ್ಷ ರೂ. ಕೊಟ್ಟು ಹಳ್ಳಿಕಾರ್ ಹೋರಿ ಖರೀದಿಸಿದ ಶಾಸಕ ಮಸಾಲೆ ಜಯರಾಮ್! ಕಸಾಯಿಖಾನೆಯಲ್ಲಿದ್ದ ಕರುವೇ ಈ ಹೋರಿ

ಜಿ‌ಟಿಡಿ ಹಣಿಯಲು ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್? ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎಂದ ದಳಪತಿ

ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
