ಬೆಂಗಳೂರು:ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ಧುರೀಣ ಕೆ.ಎಚ್​. ಮುನಿಯಪ್ಪ ಜೆಡಿಎಸ್​ ಸೇರುವ ಸಾಧ್ಯತೆಗಳಿವೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಾಗಿದ ಹಾದಿಯಲ್ಲೇ ಮುನಿಯಪ್ಪ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
30 ವರ್ಷ ಸಂಸದರಾಗಿದ್ದ ಮುನಿಯಪ್ಪರನ್ನು ದೂರವಿಟ್ಟು ಮಾಜಿ ಶಾಸಕರಾದ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್​, ಮುಳಬಾಗಿಲಿನ ಕೊತ್ತೂರು ಮಂಜುನಾಥ್​ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು ಮುನಿಯಪ್ಪಗೆ ಸಹಿಸಲಾಗುತ್ತಿಲ್ಲ. ಜಿಲ್ಲೆಯಲ್ಲಿ ಪಕ್ಷದ ಮೇಲಿನ ಹಿಡಿತ ಮುನಿಯಪ್ಪರ ಕೈಯಿಂದ ಜಾರುತ್ತಿದ್ದು, ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣ ಸದೃಢವಾಗುತ್ತಿದೆ. ಕಳೆದ ಬಾರಿ ಎಸ್​.ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದ ಕೊತ್ತೂರು, ಸುಧಾಕರರೆಡ್ಡಿ ಪಕ್ಷ ಸೇರ್ಪಡೆ ವಿರುದ್ಧ ಸೆಟೆದು ನಿಂತಿರುವ ಮುನಿಯಪ್ಪ, “ರ್ನಿಲಕ್ಷ್ಯ”ವನ್ನು ತಿಂಗಳೊಳಗೆ ಸರಿಪಡಿಸಲು ಗಡುವು ವಿಧಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೆ.ಎಚ್​.ಮುನಿಯಪ್ಪ ಜೆಡಿಎಸ್​ಗೆ ಸೇರುತ್ತಾರೆ ಎಂಬ ಚರ್ಚೆಯೂ ಶುರುವಾಗಿದೆ.
ಮಾಜಿ ಸಚಿವ ರಮೇಶ್​ ಕುಮಾರ್​ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಮುನಿಯಪ್ಪ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಜೆಡಿಎಸ್​ ಮೂಲಗಳು ತಿಳಿಸಿವೆ. ಆದರೆ ಮುನಿಯಪ್ಪ ಕಾಂಗ್ರೆಸ್​ ತೊರೆಯುವ ಬಗ್ಗೆ ಎಲ್ಲೂ ಬಹಿರಂಗಪಡಿಸಿಲ್ಲ.
ಅನೇಕ ವಿಚಾರಗಳಲ್ಲಿ ಕಾಂಗ್ರೆಸ್​ ರಾಜ್ಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮುನಿಯಪ್ಪ, ಕೋಲಾರದ ಕೆಲವು ಕಾಂಗ್ರೆಸ್​ ನಾಯಕರ ಬಗ್ಗೆ ಪದೇಪದೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಡಿಕೆಶಿ ಟಾಂಗ್​ ಕೊಟ್ಟ ಬೆನ್ನಲ್ಲೇ ‘ಸಿದ್ದರಾಮೋತ್ಸವ’ ಕುರಿತು ಭುಗಿಲೆದ್ದ ಅಸಮಾಧಾನ!

ಪರ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟ: ವಿಡಿಯೋ ವೈರಲ್​ ಆಗ್ತಿದ್ದಂತೆ ಮನದನೋವು ಬಿಚ್ಚಿಟ್ಟ ಸಂತ್ರಸ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
