ಕೊಳ್ಳೇಗಾಲ:ನನ್ನನ್ನು ವಿವಾಹವಾಗಲು ಪ್ರಿಯಕರ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಆತನೊಂದಿಗೆ ಮದುವೆಯಾಗಲು ನನಗೆ 18 ವರ್ಷ ವಯಸ್ಸಾಗುವವರೆಗೆ ತನ್ನನ್ನು ಬಾಲ ಮಂದಿರದಲ್ಲಿ ಇರಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾಳೆ.
ತಾಯಿಯೊಂದಿಗೆ ಪೊಲೀಸ್​ ಠಾಣೆಗೆ ತೆರಳಿದ ವಿದ್ಯಾರ್ಥಿನಿ, ತನ್ನ ಪ್ರೇಮ ಕಥೆಯನ್ನು ಲಿಖಿತ ರೂಪದಲ್ಲಿ ತಿಳಿಸಿ ಪ್ರಿಯಕರ, ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮಹೇಶ್​ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಮಹೇಶ್​ ಅಲಿಯಾಸ್​ ಅಪ್ಪು ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಈ ವಿಷಯ ಎರಡೂ ಮನೆಯವರಿಗೂ ತಿಳಿದಿತ್ತು.
ಈ ನಡುವೆ ಕೆಲವೊಮ್ಮೆ ವಿದ್ಯಾರ್ಥಿನಿಗೆ ಪಾಲಕರು ಪ್ರೀತಿ ಬಿಟ್ಟು ಸುಮ್ಮನಿರಲು ಸೂಚಿಸಿದರೂ ಕೇಳದೆ, ಪ್ರೀಯಕರನ ಮನೆಗೆ ತೆರಳಿ ನಿನ್ನ ಜತೆ ವಾಸಿಸುವುದಾಗಿ ಕೇಳಿಕೊಂಡಿದ್ದಾಳೆ. ಆದರೆ, ಪ್ರಿಯಕರನ ಪಾಲಕರು ನಿನಗೆ 18 ವರ್ಷ ಆಗಿಲ್ಲ. ಹಾಗಾಗಿ, ನೀನು ಇಲ್ಲಿಗೆ ಬರಬಾರದು ಎಂದು ಕಳುಹಿಸಿದ್ದಾರೆ. ಪ್ರಿಯಕರನೂ 18 ವರ್ಷ ಆಗುವವವರೆಗೆ ಆಕೆಯ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿ ನಂತರ ಆಕೆಯ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಇತ್ತ ವಿದ್ಯಾರ್ಥಿನಿ ತನ್ನ ಪಾಲಕರೊಂದಿಗೆ ಇರಲು ಇಚ್ಛಿಸದೆ ಪ್ರಿಯಕರನ್ನೊಂದಿಗೆ ಮದುವೆಯಾಗಲು ನಿರ್ಧರಿಸಿ ದೂರು ನೀಡಿದ್ದಾಳೆ. ತನಗೆ 18 ವರ್ಷವಾಗದ ಹಿನ್ನೆಲೆಯಲ್ಲಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಬಾಲಮಂದಿರಲ್ಲಿ ಇರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಸಬ್​ ಇನ್ಸ್​ಪೆಕ್ಟರ್​ ಆರ್​.ಮಂಜುನಾಥ್​ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಿಂಡಿ ತಿನ್ನಲು ಕುಳಿತ ಕಾನೂನು ವಿದ್ಯಾರ್ಥಿ ಹಠಾತ್​ ಸಾವು! ಹುಣಸೂರಲ್ಲಿ ಘಟನೆ, ಸಾವಿನ ಕೊನೇ ಕ್ಷಣ ಸಿಸಿಟಿವಿಯಲ್ಲಿ ಸೆರೆ

ತುಮಕೂರಲ್ಲಿ ಆರ್ಕೆಸ್ಟ್ರಾ ಕಲಾವಿದರನ್ನ ವೇಶ್ಯಾವಾಟಿಕೆ ದೂಡಲು ಯತ್ನ! ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ… ಆಡಿಯೋ ವೈರಲ್​

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twenty =
Remember me
