ಕಾನಹೊಸಹಳ್ಳಿ(ವಿಜಯನಗರ):ಕರ್ನಾಟಕದ ಮೊಮ್ಮಗಳಿಗೆ ನೆರೆಯ ಆಂಧ್ರಪ್ರದೇಶದ ಸಚಿವೆ ಸ್ಥಾನ ಒಲಿದಿದೆ. ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಮೂಲದ ಉಷಾ ಚರಣ್​ ಆಂಧ್ರ ಪ್ರದೇಶದ ಜಗನ್​ ಮೋಹನ್​ ರೆಡ್ಡಿ ಸರ್ಕಾರದಲ್ಲಿ ಸೋಮವಾರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಉಷಾ, ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಕೆ.ವಿರೂಪಾಕ್ಷಪ್ಪರ ಪುತ್ರಿ. ಉಷಾ ಅವರ ತಾಯಿ ಆಂಧ್ರದವರು. ಉಷಾ ಈಗ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ತಾಯಕನಹಳ್ಳಿಯ ಕುರುಬ ಸಮುದಾಯದ ಮುಖಂಡ ಮಂಜುನಾಥ, ತವರು ಮನೆಯನ್ನು ಉಷಾ ಚರಣ್​ ಮರೆತಿಲ್ಲ. ಕಳೆದ ತಿಂಗಳು ಅವರು ಊರಿಗೆ ಬಂದು ಹೋಗಿದ್ದಾರೆ. ನಮ್ಮೂರ ಮಗಳು ಆಂಧ್ರ ಸರ್ಕಾರದಲ್ಲಿ ಸಚಿವೆ ಆಗಿರುವುದಕ್ಕೆ ಎಲ್ಲರಿಗೂ ಸಂತಸವಾಗಿದೆ ಎಂದಿದ್ದಾರೆ.
ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eleven =
Remember me
