ಕೊರಟಗೆರೆ:ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಮುಖ್ಯದ್ವಾರದಿಂದ ಬನ್ನಿ… ಹೊರ ಹೋಗುವ ದ್ವಾರದಿಂದ ಬರಬೇಡಿ ಎನ್ನುವ ವಿವಾದದಿಂದ ಆರಂಭವಾದ ಜಗಳ ಠಾಣೆ ಮೆಟ್ಟಿಲೇರಿ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದೇವಾಲಯದ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ವ್ಯಾಪಾರಿ ದಲಿತೆ ಸರೋಜಮ್ಮ ಎಂಬುವವರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೇ 8 ರಂದು ದೇವಾಲಯ ಆವರಣ ಮತ್ತು ಮಹಾಲಕ್ಷ್ಮೀ ಚಾರಿಟಬಲ್​ ಟ್ರಸ್ಟ್​ ಕಚೇರಿಯಲ್ಲಿ ಮಹಿಳೆ ಜಗಳ ತೆಗೆದ ಕಾರಣ ಮಹಿಳೆ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ಟ್ರಸ್ಟ್​ ಸಿಬ್ಬಂದಿ ಅಶ್ವತ್ಥನಾರಾಯಣ ಸಹ ದೂರು ದಾಖಲಿಸಿದ್ದಾರೆ. ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ , ಸಿಪಿಐ ಸಿದ್ದರಾಮೇಶ್ವರ ಸ್ಥಳ ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ.
ಟ್ರಸ್ಟ್​ನ ನೌಕರ ಅಶ್ವತ್ಥನಾರಾಯಣ ನನ್ನ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಹಾಕಿ ಜಾತಿನಿಂದನೆ ಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದೇನೆ. ಸ್ಥಳೀಯರಾದ ನಮಗೆ ದೇವಾಲಯದಲ್ಲಿ ದಲಿತರು ಎಂದು ರ್ನಿಲಕ್ಷ್ಯ ಮಾಡುತ್ತಾ, ವ್ಯಾಪಾರ ನಡೆಸಲು ತೊಂದರೆ ನೀಡುತ್ತಾರೆ.|ಸರೋಜಮ್ಮಜಾತಿನಿಂದನೆ ದೂರು ದಾಖಲಿಸಿರುವ ವ್ಯಾಪಾರಿ, ಗೊರವನಹಳ್ಳಿ
ಟ್ರಸ್ಟ್​ ನಿಯಮದ ಪ್ರಕಾರ ನಮ್ಮ ನೌಕರ ಕರ್ತವ್ಯ ನಿರ್ವಹಿಸಿದ್ದಾರೆ, ಮುಖ್ಯದ್ವಾರದ ಮೂಲಕ ದೇವಾಲಯ ಪ್ರವೇಶ ಪಡೆಯುವಂತೆ ಸೂಚಿಸಿದ್ದಾರೆ. ಆದರೆ ಸರೋಜಮ್ಮ ತಮ್ಮ ಬೆಂಬಲಿಗರನ್ನು ಹೊರಹೋಗುವ ದ್ವಾರದಿಂದ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ. ನಂತರ ಟ್ರಸ್ಟ್​ ಕಚೇರಿಗೆ ಬಂದು, ಜಗಳ ಮಾಡಿದ್ದಾರೆ.|ಅಶ್ವತ್ಥನಾರಾಯಣಮಹಾಲಕ್ಷ್ಮೀ ಚಾರಿಟಬಲ್​ ಟ್ರಸ್ಟ್​ ನೌಕರ
ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಸಾಕ್ಷ್ಯಧಾರಗಳನ್ನು ಸಂಗ್ರಹ ಮಾಡಿದ್ದೇವೆ. ಸಿಸಿಟಿವಿ ದಾಖಲಾತಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಎಲ್ಲವನ್ನು ಮೇ 11ರಂದು ದಾಖಲು ಮಾಡಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಜಾತಿನಿಂದನೆ ಪ್ರಕರಣ ಆಗಿರುವುದರಿಂದ, ಕೂಲಂಕಷವಾದ ತನಿಖೆ ನಡೆಸುತ್ತಿದ್ದೇವೆ.|ಕೆ.ಜಿ.ರಾಮಕೃಷ್ಣಡಿವೈಎಸ್ಪಿ ಮಧುಗಿರಿ
ಹನಿಟ್ರ್ಯಾಪ್​ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
