ಕೊಟ್ಟೂರು (ವಿಜಯನಗರ):ಇತ್ತೀಚೆಗೆ ಸ್ಥಳೀಯ ಠಾಣೆ ಪಿಎಸ್​ಐ ವಿಜಯಕೃಷ್ಣ ಜತೆ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿ ಅಮಾನತುಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರು ಪೇದೆಗಳ ತಲೆ ದಂಡವಾಗಿದೆ.
ಮೇ 14ರಂದು ಠಾಣೆಯಲ್ಲಿ ಠಾಣಾಧಿಕಾರಿ ಬ್ರೀಫಿಂಗ್​ ಸಭೆ ನಡೆಸಿದ ಬಳಿಕ ಸಿಬ್ಬಂದಿಗೆ ಬೀಟ್​ ಹಂಚಿಕೆ ಮಾಡಿದ್ದರು. ಇದನ್ನು ಆಕ್ಷೇಪಿಸಿದ್ದ ಪೇದೆ ಕೊಟ್ರಗೌಡ ಪಿಎಸ್​ಐ ಜತೆ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದಲ್ಲದೆ ಬೆದರಿಕೆ ಹಾಕಿದ್ದರು. ಹಾಗಾಗಿ ಕೊಟ್ರಗೌಡರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಕೊಟ್ಟೂರು ಪೊಲೀಸ್​ ಠಾಣೆ ಪೇದೆಗಳಾದ ಕುಮಾರ ಪತ್ರಿ, ಬಸವರಾಜು, ಕವಿತಾಬಾಯಿ, ತಿಪ್ಪಣ್ಣ ಹಾಗೂ ಹ್ಯಾಟಿ ಬಸವರಾಜ ಅವರನ್ನೂ ಅಮಾನತು ಮಾಡಲಾಗಿದೆ.
ಪಿಎಸ್​ಐ ಜತೆ ಕೊಟ್ರಗೌಡ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದ ಪ್ರಕರಣ ಸಂಬಂಧ ನಡೆದ ಇಲಾಖಾ ವಿಚಾರಣೆಯಲ್ಲಿ ಘಟನೆ ವೇಳೆ ಹಾಜರಿದ್ದ ಪೇದೆಗಳು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು ಎಂಬುದು ಠಾಣೆಯ ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆಯಲ್ಲಿ ಸುಳ್ಳು ಸಾಕ್ಷಿ ನುಡಿದು, ಅಶಿಸ್ತು ತೋರಿದ್ದಾರೆ ಎಂದು ಪರಿಗಣಿಸಿ ಐವರನ್ನು ಅಮಾನತುಗೊಳಿಸಿ ಎಸ್ಪಿ ಡಾ.ಅರುಣ್​ ಕೆ. ಆದೇಶ ಹೊರಡಿಸಿದ್ದಾರೆ.
ವೈ.ಸಂಪಂಗಿ ಅವರ ಹುಟ್ಟುಹಬ್ಬಕ್ಕೆ ಬಂದಿದ್ದವ ಮಾಜಿ ಶಾಸಕರ ತೋಟದ ಬಳಿ ಶವವಾಗಿ ಪತ್ತೆ!

ಪ್ರೀತಿಸಿ ಮದ್ವೆಯಾದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು! ಅನುಮಾನ ಹುಟ್ಟಿಸಿದೆ ಆಕೆಯ ಬಲಕಿವಿ ಮಿಸ್ಸಿಂಗ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + sixteen =
Remember me
