ಕುಣಿಗಲ್​:ಪಿಎಸ್​ಐ ಎಕ್ಸಾಂ ಅಕ್ರಮ ಪ್ರಕರಣದ ಮೂಲ ಕಿಂಗ್​ಪಿನ್​ನ ಹೆಸರೇಳಿದ್ರೆ ಇಡೀ ಸರ್ಕಾರವೇ ಉರುಳುತ್ತೆ. ಆ ಕಿಂಗ್​ಪಿನ್​ ಭವಿಷ್ಯದ ನಾಯಕ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಮಾತು ಕೇಳಿ ಆ ಕಿಂಗ್​ಪಿನ್​ ಯಾರಿರಬಹುದು? ಎಂಬ ತರೇಹವಾರಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಎಸ್​.ಬೊಮ್ಮಾಯಿ ಅವರೇ ಪಿಎಸ್​ಐ ಹಗಣದ ಪಿತಾಮಹ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಿಎಸ್​ಐ ಹಗರಣದಲ್ಲಿ ಕಾಂಗ್ರೆಸ್​ನ ಶೇ.70 ನಾಯಕರು ಜೈಲಿಗೆ ಹೊಗಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಆರೋಪಕ್ಕೆ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯಾಧ್ಯಕ್ಷರು ನಮ್ಮನ್ನು ಜೈಲಿಗೆ ಕಳಿಸುವುದು ಇರಲಿ, ಅವರ ಪಕ್ಷದ ಮುಖಂಡರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಯಾರನ್ನು ಬೇಕಾದರೂ ಜೈಲಿಗೆ ಕಳಿಸಲಿ, ನಮ್ಮ ಅಭ್ಯಂತರವಿಲ್ಲ, ಇದನ್ನು ಏನಾದರೂ ಮಾಡಿ ಕಾಂಗ್ರೆಸ್​ ಕಡೆ ತಿರುಗಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಸಚಿವ ಅಶ್ವತ್ಥನಾರಾಯಣ್​ ಹೆಸರು ಹೊರಗಡೆ ಬಂದಿದೆ, ಗೃಹ ಸಚಿವರ ಕಚೇರಿಯಲ್ಲಿ ಹಗರಣ ನಡೆದಿದೆ, ಅನೇಕ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಇದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು.
PSI ಹುದ್ದೆ ಹಗರಣದ ಮೂಲ ಕಿಂಗ್​ಪಿನ್​ನ ಟಚ್ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ: ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ

‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್​ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’

ಮಗನ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ… ಮನನೊಂದು ಸಾವಿನ ಮನೆಯ ಕದ ತಟ್ಟಿದ ತಾಯಿ

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 7 =
Remember me
