ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 2011ನೇ ಸಾಲಿನ 362 ಗ್ರೂಪ್​ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ವಿಧಾನ ಪರಿಷತ್​ನಲ್ಲೂ ಸಿಂಧುತ್ವ ಸಿಕ್ಕಿದೆ.
ನೇಮಕ ಆದೇಶ ಸಿಂಧುಗೊಳಿಸುವ ಮತ್ತು ಆಯ್ಕೆ ಪಟ್ಟಿಯನ್ನು ಕಾನೂನುಬದ್ಧಗೊಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್​ ಸೇವೆಗಳ (2011ನೇ ಸಾಲಿನ ಗೆಜೆಟೆಡ್​ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಮಂಗಳವಾರ ಪರಿಷತ್​ನಲ್ಲೂ ಅಂಗೀಕಾರ ಮಾಡಲಾಯಿತು.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಗೆಜೆಟೆಡ್​ ಪ್ರೊಬೆಷನರ್​ಗಳಿಗೆ ಸರ್ಕಾರ ನೀಡಿರುವ ನೇಮಕಾತಿ ಆದೇಶ ಸಿಂಧುಗೊಳಿಸಲು ಈ ವಿಧೇಯಕ ತರಲಾಗಿದೆ.
ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂಬ ದೂರಿನನ್ವಯ ಸಿಐಡಿ ತನಿಖೆ ನಡೆದಿತ್ತು, ಮಧ್ಯಂತರ ವರದಿ ಮೇಲೆ ನ್ಯಾಯಾಲಯ ಪಟ್ಟಿಯನ್ನು ಅಸಿಂಧುಗೊಳಿಸಿತ್ತು. ಆದರೆ, ಅಧಿವಿಚಾರಣಾ ನ್ಯಾಯಾಲಯದಲ್ಲಿ ಅಭ್ಯರ್ಥಿಗಳ ಮೇಲೆ ಹೊರಿಸಿದ ಆರೋಪಗಳು ತಾರ್ಕಿಕ ಅಂತ್ಯ ತಲುಪಿವೆ. ಕರ್ನಾಟಕ ಲೋಕಸೇವಾ ಆಯೋಗದ ಯಾರೇ ಸದಸ್ಯರಾಗಲಿ ಅಥವಾ ಅಭ್ಯರ್ಥಿಯಾಗಲಿ ಯಾವುದೇ ಅಪರಾಧದ ಅಪರಾಧಿ ಎಂದು ಸಾಬೀತಾಗದಿರುವುದರಿಂದ ಹಾಗೂ ಯಾವುದೇ ವಿಚಾರಣಾ ನ್ಯಾಯಾಲಯದಲ್ಲಿ ಅಪರಾಧ ನಿರ್ಣಿತವಾಗದಿರುವುದರಿಂದ 2011ನೇ ಸಾಲಿನ ಗೆಜೆಟೆಡ್​ ಪ್ರೊಬೆಷನರ್​ಗಳಿಗೆ ಸರ್ಕಾರ ನೇಮಕ ಆದೇಶ ನೀಡಿರುವುದನ್ನು ಸಿಂಧುಗೊಳಿಸುವುದು ಮತ್ತು ಆಯ್ಕೆ ಪಟ್ಟಿಯನ್ನು ಕಾನೂನು ಬದ್ಧಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ ಎಂದು ನಿನ್ನೆಯೇ ಸಚಿವ ಮಾಧುಸ್ವಾಮಿ ತಿಳಿಸಿದ್ದರು.
ಸಿಎಂ, ಸಚಿವರು, ಶಾಸಕರ ವೇತನದಲ್ಲಿ ಭರ್ಜರಿ ಹೆಚ್ಚಳ: ಯಾರಿಗೆ ಎಷ್ಟೆಷ್ಟು? ಇಲ್ಲಿದೆ ಡಿಟೇಲ್ಸ್​

‘ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ… ಹುಡುಗಿ ಜತೆ ಹೋದ… ಕೇಸ್ ಇಲ್ಲ’

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಮೇಲೂ ದಾಖಲಾಗಿತ್ತು 4 ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
